Breaking News
Home / ಬೆಳಗಾವಿ / ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ ಶಿಕ್ಷಕರ ದಿನಾಚರಣೆ

ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ ಶಿಕ್ಷಕರ ದಿನಾಚರಣೆ

Spread the love

ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ
ಶಿಕ್ಷಕರ ದಿನಾಚರಣೆ

ಶಾಲೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಆಯೋಜನೆ

ಶಿಕ್ಷಕರಿಗೆ ಗುರು ಕಾಣಿಕೆ ನೀಡಿ ಸತ್ಕಾರ* ಸಿಹಿ ವಿತರಣೆ

ವರದಿ: ಅಡಿವೇಶ ಮುಧೋಳ.
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಸೆ.5ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವೈಶಿಷ್ಯಪೂರ್ಣವಾಗಿ ನಡೆಯಿತು.
ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸುವ ಮೂಲಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ವಿದ್ಯಾರ್ಥಿಗಳು ಶಾಲೆಯ ಮುಖ್ಯೋಪಾಧ್ಯಯ ಸೇರಿದಂತೆ ಸಹಶಿಕ್ಷಕರು, ಅತಿಥಿ ಶಿಕ್ಷಕರಿಗೆÉ ಸಿಹಿ, ಉಡುಗೊರೆ ಕೊಡುವ ಮೂಲಕ ಗುರು ಕಾಣಿಕೆ ನೀಡಿ ಸತ್ಕರಿಸಿದರು.
ವೈಶಿಷ್ಯಪೂರ್ಣ ವಿಶೇಷ ಕಾರ್ಯಕ್ರಮ:ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿ, ವೇದಿಕೆ ಮೇಲೆ ಶಿಕ್ಷಕರನ್ನು ಕೂಡ್ರಿಸಿ, ಪುಷ್ಪ ನೀಡಿ ಎಲ್ಲಾ ಶಿಕ್ಷಕರಿಗೆ ಗುರು ಕಾಣಿಕೆ ನೀಡಿ, ಕಾಲಿಗೆ ನಮಸ್ಕರಿಸುವ ಹಾಗೂ ಕಾರ್ಯಕ್ರಮದ ನಿರೂಪಣೆ ಸೇರಿ ಶಾಲೆಯ ಕೆಲವು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶಿಕ್ಷಕರ ಕುರಿತು ಮಾತನಾಡಿದರು. ಈ ಎಲ್ಲಾ ದೃಶ್ಯಗಳು ಶಾಲೆಯ ಗುರು-ಶಿಷ್ಯರ ನಡುವಿನ ಅವಿನಾಭಾವ ಸಂಬಂಧ ಅವಿಸ್ಮರಣೀಯವಾಗಿತ್ತು. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವೈಶಿಷ್ಯಪೂರ್ಣವಾಗಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಆಚರಿಸಿ ಸಂಭ್ರಮಿಸಿದರು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಸದಾನಂದ ತೆರಣೆ, ಶುಭಾ ಬಿ., ಈರಣ್ಣ ಪಟಗುಂದಿ, ರಾಕೇಶ ನಡೋಣಿ, ಪ್ರಕಾಶ ಕುರಬೇಟ, ವೈ.ಎಮ್.ವಗ್ಗರ, ಸಿರಾಜ ಅಹಮ್ಮದ ಜಿಡ್ಡಿಮನಿ, ಭಾಗ್ಯಶ್ರೀ ನಾಯ್ಕ, ಲಕ್ಕಪ್ಪ ವಾರೆಪ್ಪಗೋಳ, ಸೌಮ್ಯಾಶ್ರೀ ಗಂಗಾ., ದೀಪಾ ದಾಸಂಗಳಿ, ಸ್ವಾತಿ ಬಡಿಗೇರ, ಬಸವರಾಜ ಗೋಸಲಿ, ಮಂಜುನಾಥ ಸವತಿಕಾಯಿ, ನಾಗರಾಜ ಅರಳಿಮಟ್ಟಿ, ಸಿದ್ರಾಮೇಶ ಕಮತ, ಮಲ್ಹಾರಿ ಪೋಳ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳು, ಇತರರು ಇದ್ದರು.


Spread the love

About inmudalgi

Check Also

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ನೇತೃತ್ವದ ಗುಂಪಿನ ಸದಸ್ಯರು ಬೆಟಗೇರಿ ಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ