Breaking News
Home / ಬೆಳಗಾವಿ / ದಿ.11ರಿಂದ ಬೆಟಗೇರಿ ಮಡ್ಡಿ ಬೀರಸಿದ್ಧೇಶ್ವರ ಜಾತ್ರಾ ಮಹೋತ್ಸವ

ದಿ.11ರಿಂದ ಬೆಟಗೇರಿ ಮಡ್ಡಿ ಬೀರಸಿದ್ಧೇಶ್ವರ ಜಾತ್ರಾ ಮಹೋತ್ಸವ

Spread the love

ದಿ.11ರಿಂದ ಬೆಟಗೇರಿ ಮಡ್ಡಿ ಬೀರಸಿದ್ಧೇಶ್ವರ ಜಾತ್ರಾ ಮಹೋತ್ಸವ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮನ್ನಿಕೇರಿ ಹಾದಿಗೆ ಹೊಂದಿಕೊಂಡಿರುವ ಬೆಟಗೇರಿ ತೋಟದ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೆ.11ರಿಂದ ಸೆ.12ರವರೆಗೆ ಜರುಗಲಿವೆ.
ಸೆ.11ರಂದು ಮುಂಜಾನೆ 6 ಗಂಟೆಗೆ ಮಡ್ಡಿ ಬೀರಸಿದ್ಧೇಶ್ವರ ದೇವರ ದೇವಸ್ಥಾನದ ಗದ್ಗುಗೆ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಾಯಂಕಾಲ 6 ಗಂಟೆಗೆ ಪುರ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು, ಅದೇ ದಿನ ಪರಸ್ಥಳದಿಂದ ವಾಲಗ ಕೂಡುವುದು. ರಾತ್ರಿ 9ಗಂಟೆಗೆ ರಾಮದುರ್ಗ ತಾಲೂಕಿನ ಚುಂಚುನೂರ ಮಾಯಮ್ಮಾದೇವಿ ಡೊಳ್ಳಿನ ಗಾಯನ ಸಂಘ ಹಾಗೂ ಹುಕ್ಕೇರಿ ತಾಲೂಕಿನ ಡೊಳ್ಳಿ ಗಾಯನ ಸಂಘದವರಿಂದ ಡೊಳ್ಳಿನ ಪದಗಳ ಗಾಯನ ನಡೆಯಲಿದೆ.
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಜಾತ್ರಾ
ಮಹೋತ್ಸವ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ಕಡಕೋಳ ಅಭಿನವ ಸಿದ್ರಾಯ ಅಜ್ಜನವರು, ಮಮದಾಪೂರ ಮೌನಮಲ್ಲಿಕಾರ್ಜುನ ಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಸುಭಾಷ ಕರೆಣ್ಣವರ ಮುಖ್ಯ ಅತಿಥಿಗಳಾಗಿ, ತಾಪಂ, ಗ್ರಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ರಾಜಕೀಯ ಮುಖಂಡರು, ಗಣ್ಯರು, ಸಂತ-ಶರಣರು ಅತಿಥಿಗಳಾಗಿ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆ.12ರಂದು ಮುಂಜಾನೆ 8ಗಂಟೆಗೆ ಶ್ರೀ ಬೀರಸಿದ್ಧೇಶ್ವರ
ದೇವರ ಗದ್ಗುಗೆ ಅಭಿಷೇಕ, ಮಹಾಪೂಜೆ ನಡೆದ ಬಳಿಕ
ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ
ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದ, ಸಂಜೆ
6ಗಂಟೆಗೆ ಭಂಡಾರ ಒಡೆಯುವ ಕಾರ್ಯಕ್ರಮ ನಡೆದ ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ: 8197488054, 9611250446, 6366698073 ಸಂಪರ್ಕಿಸಬೇಕು ಎಂದು ಸ್ಥಳೀಯ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಪ್ರಕಟನೆಯಲ್ಲಿ
ತಿಳಿಸಿದೆ.


Spread the love

About inmudalgi

Check Also

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ನೇತೃತ್ವದ ಗುಂಪಿನ ಸದಸ್ಯರು ಬೆಟಗೇರಿ ಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ