ಹಳ್ಳೂರ : ಮಹಾ ಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಅರಬಾವಿ ಕ್ಷೇತ್ರದ ಎಲ್ಲ ಬಡ ಕುಟುಂಬಗಳು ಮತ್ತು ಕೊಳಗೇರಿ ನಿವಾಸಿಗಳಿಗೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉಚಿತವಾಗಿ 2 ಲಕ್ಷ ಮಾಸ್ಕ್ ವಿತರಿಸಲು ಸೂಚನೆ ನೀಡಿದ್ದರೆ
ಶಾಸಕರ ಸೂಚನೆಯಂತೆ ಸೋಮವಾರ ಶಾಸಕರ ಕಛೇರಿಯಿಂದ ಹಳ್ಳೂರ ಗ್ರಾಮದ ಗ್ರಾಪಂ ಗೆ 6 ಸಾವಿರ ಮಾಸ್ಕ್ ಹಸ್ತಾಂತರಿಸಲಾಗಿತ್ತು, ಆದರೆ ಎಲ್ಲ ಬಡ ಜನರ ಮನೆ ಮೆನೆ ತೆರಳಿ ಮಾಸ್ಕ್ ವಿತರಿಸಲು ಗ್ರಾಪಂ ಅಧಿಕಾರಿಗಳ ಮೂಲಕ ಆಶಾ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ವಿತರಿಸುಲು ಶಾಸಕರ ಸೂಚನೆಯಂತೆ ಮಂಗಳವಾರ ರಂದು ಹಳ್ಳೂರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗ್ರಾಪಂ ನಿಂದ ಹಸ್ತಾಂತರಿಸಲಾಯಿತ್ತು.
ಆಶಾ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳ ಮಾಹಿತಿ ಮಾಹಿತಿಯನ್ನು ಪಡೆದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್ ವೈ ತಾಳಿಕೋಟಿ ಮಾತನಾಡಿ, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಜನರಿಗೆ ಕೊರೋನಾ ವೈರಸ ಬಗ್ಗೆ ಮಾಹಿತಿ ನೀಡಿ, ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವರಿಕೆ ಮಾಡಿ, ದಿನಸಿ ವಸ್ತುಗಳ ಕರಿದಿಗೆ ಬರುವಂತ ವ್ಯಕ್ತಿಗಳು ಮಾಸ್ಕ್ ಧರಿಸಬೇಂದು ಹೇಳಿ ಎಂದು ಹೇಳಿದರು.
ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಬಾಂವಿ ಕ್ಷೇತ್ರ ಜನರ ಹಿತಕ್ಕಾಗಿ ಮತ್ತು ಕೊರೋನಾ ರೋಗದಿಂದ ನಮ್ಮ ಕ್ಷೇತ್ರ ದೂರ ಒಳಿಯಬೇಕೆಂಬ ಉದ್ದೇಶದಿಂದ ಮಾಸ್ಕ್ ವಿತರಣೆ ಮಾಡಿದ್ದಾರೆ ಎಂದು ಹೇಳಿದರು.
ಗ್ರಾಮ ಬೀಟ್ ಪೋಲಿಸ್ ಎನ್ ಎಸ್ ಒಡೆಯರ್ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್ ವಿತರಿಸುವ ವೇಳೆಯಲ್ಲಿ ಯಾರಾದರೂ ತೊಂದರೆ ಮಾಡಿದರೆ ಪೋಲಿಸ್ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಆಶಾ ಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹೇಳಿದರು.
ಈ ಸದಂರ್ಭದಲ್ಲಿ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.