Breaking News
Home / ತಾಲ್ಲೂಕು / ಗೋಕಾಕ ಮಹಿಳಾ-ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ದಿನ 8 ಗರ್ಭಿಣಿಯಲ್ಲಿ ಪಾಸಿಟಿವ್

ಗೋಕಾಕ ಮಹಿಳಾ-ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ದಿನ 8 ಗರ್ಭಿಣಿಯಲ್ಲಿ ಪಾಸಿಟಿವ್

Spread the love

ಬೆಳಗಾವಿ- ಕೊರೋನಾ ಚೆಲ್ಲಾಟ ಬೆಳಗಾವಿ ಜಿಲ್ಲೆಯ   ಬುಡಮೇಲು ಮಾಡಿದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ದಿನವೂ ಮಹಾಮಾರಿ ವೈರಸ್ ದಾಳಿ ಮಾಡುತ್ತಲೇ ಇದ್ದು ಇಂದು ಭಾನುವಾರ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ 87 ಜನರಿಗೆ ಸೊಂಕು ದೃಡವಾಗಿದೆ.

ಇಂದು ಸಂಡೇ ಲಾಕ್ ಡೌನ್ ನಡುವೆಯೂ ಬೆಳಗಾವಿ ಜಿಲ್ಲೆಯಲ್ಲಿ 87 ಸೊಂಕಿತರು ಪತ್ತೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಸಾವಿರ ಗಡಿ ದಾಟಿ 1013 ಕ್ಕೇ ಏರಿಕೆಯಾಗಿದೆ .

ಬೆಳಗಾವಿ ನಗರ ಶಾಸಕರಿಗೆ ಕೊರೋನಾ ಕಾಣಿಸಿತ್ತು. ಈಗ ಶಾಸಕರ ಪತ್ನಿ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದೆ.

ಗೋಕಾಕ್ ನಲ್ಲಿ ಒಂದೇ ದಿನ 8 ಗರ್ಭಿಣಿಯರಲ್ಲಿ ಸೋಂಕು ದೃಢಪಟ್ಟಿದ್ದು, ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಗೋಕಾಕ ಮಹಿಳಾ-ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ದಿನ 8 ಗರ್ಭಿಣಿಯಲ್ಲಿ ಪಾಸಿಟಿವ್ ಬಂದಿದೆ.
ಹೀಗಾಗಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಿಬ್ಬಂದಿಯಲ್ಲೂ ಆತಂಕ ಮನೆ ಮಾಡಿದೆ. ಆಸ್ಪತ್ರೆಯ ಬಾಣಂತಿಯರಿಗೂ ಸೋಂಕು ತಗುಲಿದ ಭೀತಿ ಎದುರಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿರುವ ಸುಮಾರು 20ಕ್ಕೂ ಹೆಚ್ಚು ಬಾಣಂತಿಯರಿಗೆ ಕ್ವಾರಂಟೈನ್ ಮಾಡಲಾಗಿದ್ದು, ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಮೂಡಲಗಿ ಪೊಲೀಸ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮೂಡಲಗಿ 33 ವರ್ಷದ ಪೋಲಿಸ್ ಸಿಬ್ಬಂದಿಗೆ ಇಂದು ಸೋಂಕು ದೃಢಪಟ್ಟಿದರಿಂದ ಪೋಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.


Spread the love

About inmudalgi

Check Also

ಬಸವರಾಜ ತಿಪ್ಪಣ್ಣ ಕರೆಪ್ಪಗೊಳ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Spread the love ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ