Breaking News
Home / ತಾಲ್ಲೂಕು / ಮೂಡಲಗಿ ಕೋ-ಆಪ್ ಬ್ಯಾಂಕಿನಿಂದ ಜೆಸಿಬಿ ವಿತರಣೆ

ಮೂಡಲಗಿ ಕೋ-ಆಪ್ ಬ್ಯಾಂಕಿನಿಂದ ಜೆಸಿಬಿ ವಿತರಣೆ

Spread the love

ಮೂಡಲಗಿ : ದಿ. ಮೂಡಲಗಿ ಕೋ- ಆಪ್ ಬ್ಯಾಂಕ್ ಇದರ ಹಳ್ಳೂರ ಶಾಖೆಯಿಂದ ಮಂಜೂರಾದ ಜೆಸಿಬಿ ವಿತರಿಸಲಾಯಿತು.

ಸೋಮವಾರದ ಹಳ್ಳೂರು ಗ್ರಾಮದ ಲಕ್ಷ್ಮಿ ದೇವಿ ದೇವಸ್ಥಾನದ ಹತ್ತಿರ ಜೆಸಿಬಿ ಖರೀದಿಸಿದ ಎಂ ಜಿ ನುಚ್ಚುಂಡಿ ಇವರಿಗೆ ಜೆಸಿಬಿ ಯಂತ್ರದ ಕೀ ವಿತರಿಸಿದ ಬ್ಯಾಂಕ್ ಅಧ್ಯಕ್ಷರು ಮತ್ತು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಸುಭಾಸ ಢವಳೇಶ್ವರ ಮಾತನಾಡಿ ಗ್ರಾಹಕರು ಬ್ಯಾಂಕಿನಿಂದ ಪಡೆದುಕೊಂಡ ಜೆಸಿಬಿ ಯಂತ್ರವನ್ನು ಸರಿಯಾಗಿ ಉಪಯೋಗಿಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು ಇದರಿಂದ ಗ್ರಾಹಕರಿಗೆ ಇನ್ನೂ ಮುಂದೆಯೂ ದೊಡ್ಡ ಮೊತ್ತದ ಸಾಲ ಮಂಜೂರು ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿ ಎಂ ಜಿ ನುಚ್ಚುಂಡಿ ಗ್ರಾಹಕರಿಗೆ ಶುಭಕೋರಿದರು.

ಶಾಖಾ ವ್ಯವಸ್ಥಾಪಕ ಚಿದಾನಂದ ಢವಳೇಶ್ವರ
ಸ್ವಾಗತಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ, ನಿದೆ೯ಶಕ ರುದ್ರಪ್ಪಾ ವಾಲಿ , ಪಿಕೆಪಿಎಸ್ ನಿದೆ೯ಶಕ ಹನುಮಂತ ತೇರದಾಳ ಪುರಸಭೆ ಸದಸ್ಯ ಶಿವಪ್ಪಾ ಚಂಡಕಿ , ಕುಮಾರ ಲೋಕನ್ನವರ , ಬಸಪ್ಪಾ ಸಂತಿ , ಪಿ ಎಸ್ ಐ ಮಲ್ಲಿಕಾರ್ಜುನ್ ಸಿಂಧೂರ್ , ಸಿ ಪಿ ಐ, ಮಲ್ಲಿಕಾರ್ಜುನ್ ಕಬ್ಬೂರ್ , ಬ್ಯಾಂಕ್ ಸಿಬ್ಬಂದಿಗಳಾದ ಆನಂದ ಢವಳೇಶ್ವರ, ಗಿರೀಶ ಬಡಗನ್ನವರ, ಶಿವಾನಂದ ಮಳ್ಳಿಮಠ, ಹಾಗೂ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ