Breaking News
Home / ತಾಲ್ಲೂಕು / ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ಆರ್.ಅಶೋಕರಡ್ಡಿ ಸೇವಾ ನಿವೃತ್ತಿ

ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ಆರ್.ಅಶೋಕರಡ್ಡಿ ಸೇವಾ ನಿವೃತ್ತಿ

Spread the love

ಸೇವಾ ನಿವೃತ್ತಿ ಹೊಂದಿದ ಅಶೋಕ ರಡ್ಡಿಗೆ ಬಿಳ್ಕೋಡಿಗೆ
ಮೂಡಲಗಿ: ಇಲ್ಲಿಯ ಸಿಂಡಿಕೇಟ್ ಬ್ಯಾಂಕಿನ ಶಾಖೆಯ ಮುಖ್ಯ ವ್ಯವಸ್ಥಾಪಕ ಆರ್.ಅಶೋಕರಡ್ಡಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬ್ಯಾಂಕಿನ ಸಿಬ್ಬಂದಿ ವರ್ಗದವರು ಬ್ಯಾಂಕಿನಲ್ಲಿ ಸತ್ಕರಿಸಿ ಬಿಳ್ಕೋಟ್ಟರು.
ಸಮಾರಂಭದ ಮುಖ್ಯ ಅತಿಥಿಗಳಾಗಿದ ಸಿಂಡಿಕೇಟ್ ಬ್ಯಾಂಕಿನ ಚಿಕ್ಕೋಡಿ ವಿಭಾಗಿ ವ್ಯವಸ್ಥಾಪಕ ಪಿ.ಶ್ರೀನಿವಾಸರಾವ್ ಮಾತನಾಡಿ, ಸೇವಾ ನಿವೃತ್ತಿ ಹೊಂದಿದ ಆರ್.ಅಶೋಕರಡ್ಡಿ ಅವರು ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆಯಿಂದ ತಮ್ಮ 35 ವರ್ಷಗಳ ಸುರ್ಧೀಗ ಸೇವೆಯಲ್ಲಿ ಯಾವದೇ ಕಪ್ಪು ಚುಕ್ಕೆ ಹೊಂದಿಲ್ಲ ಎಂದರು.

ಸೇವಾ ನಿವೃತ್ತಿ ಹೊಂದಿದ ಆರ್.ಅಶೋಕರಡ್ಡಿ ಅವರು ಬ್ಯಾಂಕಿ ಸರ್ವ ಸಿಬ್ಬಂದಿ ವರ್ಗದವರಿಂದ ಸತ್ಕಾರ ಸ್ವೀಕರಿಸಿ ಮೂಡಲಗಿ ಬ್ಯಾಂಕಿನಲ್ಲಿ ಎರಡು ವರ್ಷಗಳ ಸೇವೆಯ ಅನುಭವ ಹಂಚಿಕೊಂಡ ಅವರು 35 ವರ್ಷಗಳ ಕಾಲ ಸೇವಾ ಅವಧಿಯಲ್ಲಿ ಬ್ಯಾಂಕಿನ ಎಲ್ಲ ಅಧಿಕಾರಿಗಳ ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರದಿಂದ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದರು.
ಬ್ಯಾಂಕಿನ ಕೃಷಿ ವಲಯ ಕ್ಷೇತ್ರಾಧಿಕಾರಿಗಳಾದ ಶೇಖರ ಶಿಂಧೆ, ಮಾಹಾಂತೇಶ ಮಾಯನ್ನವರ ಮಾತನಾಡಿದರು.
ಈ ವೇಳೆಯಲ್ಲಿ ಚಿಕ್ಕೋಡಿ ಬ್ಯಾಂಕಿನ ವ್ಯವಸ್ಥಾಪಕ ಚಿಂದಮ ರಮೇಶ, ಮೂಡಲಗಿ ಬ್ಯಾಂಕಿನ ಸಿಬ್ಬಂದಿಗಳಾದ ರೋಹಿತ್ ಜಿ, ಲಕ್ಷ್ಮಣ ಜಿ, ಚಾರೀ ಡಿ, ಶಾಮ್ ಕೃಷ್ಣಾ, ಅರುಣಕುಮಾರ, ಶ್ರೀಧರ ಕದಂ, ವಿಠ್ಠಲ ಮುತಾಲೀಕದೇಸಾಯಿ, ಕಲ್ಮೇಶ ಗುದ್ದಿಗೋಪ, ಅಶೋಕ ಭಜಂತ್ರಿ, ಪರಶುರಾಮ ದುಪಟ್ಟಿ ಮತ್ತಿತರು ಇದ್ದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ