Breaking News
Home / ಬೆಳಗಾವಿ / ಬೆಟಗೇರಿಯಲ್ಲಿ ಇನ್ನೂ 4 ವಾರದ ದಿನ ಕಟ್ಟಾ ವಾರ ಹಿಡಿಯಲಾಗಿದೆ : ಮಾಯಪ್ಪ ಬಾಣಸಿ

ಬೆಟಗೇರಿಯಲ್ಲಿ ಇನ್ನೂ 4 ವಾರದ ದಿನ ಕಟ್ಟಾ ವಾರ ಹಿಡಿಯಲಾಗಿದೆ : ಮಾಯಪ್ಪ ಬಾಣಸಿ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ಮಂಗಳವಾರ ಜು.21ರಂದು ವಾರದ ದಿನ
ಮುಂಜಾನೆ 9:30 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವ
ಕಾರ್ಯಕ್ರಮ ನಡೆಯಿತು.
ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ,
ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು
ಹಾಕುವದು ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ
ಪ್ರಮುಖ ಬೀದಿ, ಸ್ಥಳಗಳು ಜನರ ಓಡಾಟವಿಲ್ಲದೇ ಬಿಕೋ
ಎನ್ನುತ್ತಿದ್ದವು. ಇಡೀ ಊರಲ್ಲಿ ಬಂದ್ ಆಚರಣೆ ವಾತಾವರಣ ಇತ್ತು.
ಬೆಟಗೇರಿ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮುಂದೆ ಬರುವ ವಾರದ ಪ್ರತಿ ಮಂಗಳವಾರ ಜು.28, ಶುಕ್ರವಾರ ಜು.31ರಂದು ಮಂಗಳವಾರ ಆ.4 ಮತ್ತು ಮಂಗಳವಾರ ಆಗಸ್ಟ್ 11ರಂದು ಸೇರಿ ಇನ್ನೂ ನಾಲ್ಕು ದಿನÀವನ್ನು ಗ್ರಾಮದಲ್ಲಿ ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ.
ಇನ್ನೂ ನಾಲ್ಕು ವಾರದ ದಿನ ಕಟ್ಟಾ ವಾರ ಆಚರಣೆ : ಸುತ್ತಲಿನ ಹತ್ತೂರು ಹಳ್ಳಿಗಳಿಗೆ ಬೆಟಗೇರಿ ಗ್ರಾಮ ವ್ಯಾಪಾರ ವಹಿವಾಟದ ವಾಣಿಜ್ಯ ಕೇಂದ್ರ ಸ್ಥಳವಾಗಿದ್ದರಿಂದ ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ಸಾರ್ವಜನಿಕರು ಗಮಸಿಸಬೇಕು. ಇನ್ನೂ 4 ವಾರದ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ. ಸುತ್ತಲಿನ ಹತ್ತೂರಿನ ಸಾರ್ವಜನಿಕರು ಸಹಕರಿಸಬೇಕೆಂದು ಈ ವೇಳೆ ಮನವಿ ಮಾಡಿಕೊಂಡರು.
ಬೆಟಗೇರಿ ಗ್ರಾಮದ ರೈತರ್ಯಾರೂ ವಾರದ ಇನ್ನೂ 4 ವಾರದ ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ,
ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ
ತಯಾರಿಸುವಂತಿಲ್ಲ, ಊರಿನಲ್ಲಿರುವ ಆಸ್ಪತ್ರೆ, ಔಷಧ ಅಂಗಡಿ ಹೊರತುಪಡಿಸಿ, ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‍ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ. ಸುಭಾಷ ಕರೆಣ್ಣವರ, ವಿಠಲ ಚಂದರಗಿ, ಸಿದ್ಧಬೀರಪ್ಪ ಧರ್ಮಟ್ಟಿ, ಗುರಪ್ಪ ಮಾಕಾಳಿ, ಬಸು ಕೆಂಪನಿಂಗಪ್ಪಗೋಳ, ಮುದಕಪ್ಪ ಚಂದರಗಿ, ಸ್ಥಳೀಯ ವಿವಿಧ ದೇವರ ಅರ್ಚಕರು,ಹಿರಿಯ ನಾಗರಿಕರು, ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಸದಸ್ಯರು, ಸ್ಥಳೀಯರು ಇದ್ದರು.


Spread the love

About client

Check Also

ಬಸವರಾಜ ತಿಪ್ಪಣ್ಣ ಕರೆಪ್ಪಗೊಳ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Spread the love ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ