Breaking News
Home / ತಾಲ್ಲೂಕು / ಶೃತಿ ಬಸನಗೌಡ ಪಾಟೀಲ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ

ಶೃತಿ ಬಸನಗೌಡ ಪಾಟೀಲ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ

Spread the love

ಮೂಡಲಗಿ: ವಲಯದ ಘಟಪ್ರಭದ ಕೆ.ಆರ್ ಹುಕ್ಕೇರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಶೃತಿ ಬಸನಗೌಡ ಪಾಟೀಲ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಹಾಗೂ ಕನ್ನಡ ಮಾದ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ 621 ಅಂಕಗಳನ್ನು ಕಲ್ಲೋಳ್ಳಿ ಎಮ್.ಡಿ.ಆರ್.ಎಸ್‍ನ ಸತ್ಯಕನಾಯಣ ಖಂಡ್ರಟ್ಟಿ 5 ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಅಕ್ಷತಾ ಸಾಯನ್ನವರ ತಾಲೂಕಿಗೆ 3 ನೇ ಸ್ಥಾನ ಪಡೆದಿದ್ದು, ಮೂಡಲಗಿ ವಲಯದ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಗುರ್ತಿಸುವಂತೆ ಮಾಡಿದ್ದಾರೆ ಹಾಗೂ ವಲಯವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಸೋಮವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದ ಕುರಿತು ವಿವರಣೆ ನೀಡಿ, ಕೊರೋನಾ ಸೋಂಕಿನ ನಡುವೆಯು ಗುಣಮಟ್ಟದ ಅಂಕಗಳನ್ನು ಪಡೆದಿದೆ. ವಲಯದ ಶಿಕ್ಷಕ ಸಮೂಹ ವಿದ್ಯಾರ್ಥಿಗಳ ಪ್ರಯತ್ನದಿಂದಾಗಿ ಗುಣಾತ್ಮಕ ಕಲಿಕೆಯಾಗುವಲ್ಲಿ ಯಶಸ್ವಿಯಾಗಿದೆ. ಕನ್ನಡ ಮಾದ್ಯಮದ ವಿದ್ಯಾರ್ಥಿನಿ ಶೃತಿ ಪಾಟೀಲ ವಿಜ್ಷಾನ ಹೊರತು ಪಡಿಸಿ ಎಲ್ಲ ವಿಷಯಗಳಲ್ಲಿ ಶೇ 100 ಕ್ಕೆ 100 ಅಂಕ ಪಡೆದು ಸಾಧನೆಗೈದಿದ್ದಾಳೆ.
ವಲಯದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಕೊರೋನಾ ಮಹಾಮಾರಿ ಅಡ್ಡಿ ಮಾಡಿದರು ಲಾಕ್ ಡೌನ್ ಹಿನ್ನೆಲೆ ಮನೆಯಲ್ಲಿಯೇ ತಯಾರಿ ಮಾಡಿಕೊಂಡು ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ವಲಯದ ಅಧಿಕಾರಿ ವರ್ಗ, ಮಾರ್ಗದರ್ಶಕರು, ಸಂಪನ್ಮೂಲ ಶಿಕ್ಷಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಾಲಕ ಪೋಷಕರು ಹಾಗೂ ಚುನಾಯಿತ ಪ್ರತಿನಿಧಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

ಶೃತಿ ಪಾಟೀಲ
ಸತ್ಯನಾರಾಯಣ ಖಂಡ್ರಟ್ಟಿ
ಅಕ್ಷತಾ ಸಾಯನ್ನವರ


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ