Breaking News
Home / Recent Posts / ಡಿ.ಕೆ.ಶಿವಕುಮಾರ ರವರ ಮನೆ ಮೇಲೆ ಸಿ.ಬಿ.ಐ ದಾಳಿ ಮತ್ತು ಹತ್ರಾಸ್ ಜಿಲ್ಲೆಯಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಡಿ.ಕೆ.ಶಿವಕುಮಾರ ರವರ ಮನೆ ಮೇಲೆ ಸಿ.ಬಿ.ಐ ದಾಳಿ ಮತ್ತು ಹತ್ರಾಸ್ ಜಿಲ್ಲೆಯಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

Spread the love

ಐಟಿ,ಈಡಿ,ಸಿಬಿಐ ದಾಳಿಗಳು ಕೇವಲ ಕಾಂಗ್ರೇಸ್ ಮುಖಂಡರ ಮೇಲೆ ಏಕೇ?-ದಳವಾಯಿ

ಮೂಡಲಗಿ:ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಂಗ್ರೇಸ್ ಪಕ್ಷದ ಮುಖಂಡರ ಮೇಲೆ ಮಾತ್ರ ಐಟಿ, ಈಡಿ, ಸಿಬಿಐ ದಾಳಿಗಳು ನಡೆಸಿ ಹೆದರಿಸಿ ಬೇದರಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಹತ್ತಿಕುವ ಕಾರ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಆರೋಪಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ ರವರ ಮನೆ ಮೇಲೆ ಸಿ.ಬಿ.ಐ ದಾಳಿ ಮತ್ತು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಮಂಗಳವಾರದಂದು ಹಮ್ಮಿಕೊಂಡ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಯಾವುದೇ ಹೆದರಿಕೆಗೆ ಹೆದರುವುದಿಲ್ಲ, ಉತ್ತರ ಪ್ರದೇಶದ ಆದಿನಾಥ ಯೋಗಿ ಸರಕಾರವು ಹತ್ರಾಸ್ ಜಿಲ್ಲೆಯಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಬಾಯಿ ಮುಚ್ಚಿಕೊಂಡು ಕುಳ್ಳಿತ್ತಿದೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವು ಮಾತು ಮಾತಿಗೆ ರಾಮರಾಜದ ರಾಮನ ಅಭಿಯಾನದ ಅಧಿಕಾರಕ್ಕೆ ಬಂದು ಆಡಳಿತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರು ಅತ್ಯಾಚಾರ ನಿಲ್ಲಿಸುವಲ್ಲಿ ವಿಫಲಗೊಂಡೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಅತ್ಯಾಚಾರಿಗಳನ್ನು ಕೂಡಲೇ ಬಂದಿಸಿ ಯೋಗ್ಯ ಶಿಕ್ಷಿ ನೀಡಿಬೇಕೆಂದು ಆಗ್ರಹಿಸಿದರು.
ಕೌಜಲಗಿ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಲಗಮನ್ನಾ ಕಳಸನ್ನವರ, ಅರಭಾಂವಿ ಅಲ್ಪಸಂಖ್ಯಾತ ಜಿಲ್ಲಾ ಉಪಾಧ್ದಯಕ್ಷ ರವಿ ಮೂಡಲಗಿ, ಅರಭಾಂವಿ ಬ್ಲಾಕ್ ಅಧ್ಯಕ್ಷ ಸಲೀಮ ಇನಾಮದಾರ, ವಿ.ಪಿ.ನಾಯ್ಕ, ಮಧುಗೀರಿಶ ಕರಡ್ಡಿ, ವೀರಣ್ಣಾ ಮೋಡಿ, ಭೀಮಶಿ ಕಾರದಗಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿಯು ಉಪ ಚುನಾವಣೆಯಲ್ಲಿ ಸಂಧರ್ಭದಲ್ಲಿ ಮಾತ್ರ ಕಾಂಗೇಸ್ ಮುಖಂಡರ ಮೇಲೆ ಸಿಬಿಐ ದಾಳಿ ಮಾಡಿಸುತ್ತಿರುವುದು ಖಂಡನಿಯವಾಗಿದೆ ಎಂದರು.
ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟಿಸಿ ತಹಶೀಲ್ದಾರ ಕಛೇರಿ ವರಿಗೆ ರಾಜ್ಯ ಮತ್ತು ಕೆಂದ್ರ ಸರಕಾರ ವಿರುದ್ದ ಘೋಷನೆ ಕೂಗುತ್ತಾ ಪ್ರತಿಭಟನಾ ಮೇರವಣಿಗೆ ನಡೆಸಿ ಸ್ಥಳೀಯ ತಹಶೀಲ್ದಾರ ಡಿ.ಜೆ.ಮಹಾತ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು
ಈ ಸಂಧರ್ಭದಲ್ಲಿ ಗುರಪ್ಪ ಇಟ್ಟಣ್ಣಗಿ, ರವಿ ತುಪ್ಪದ, ರವಿ ಕೊಪ್ಪದ, ಬಸು ಪಾಟೀಲ, ಮಾಳಪ್ಪ ಬೀದರಿ, ಶಾನೂರ ಕಲಾಯಗಾರ, ಈಜಾಜ ಕೊಟಲಗಿ, ಲಕ್ಷ್ಮಣ ಆಲಕನೂರ, ಆರೀಪ್ ಬಳಿಗಾರ, ಸುರೇಶ ನಾಯ್ಕ, ಮಲ್ಲಿಕ ಕಳ್ಳಿಮನಿ, ಸುರೇಶ ಮಗದುಮ್, ಚನ್ನಯ್ಯಾ ನಿರ್ವಾಣಿ ಮತ್ತು ವಿವಿಧ ಗ್ರಾಮಗಳ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದ್ದರು.


Spread the love

About inmudalgi

Check Also

ಪ್ರತಿಯೊಬ್ಬರು ಶೌಚಾಲಯ ಬಳಕೆ ಮಾಡಿ: ವಿನಯಕುಮಾರ ನಾಯ್ಡು

Spread the love ಪ್ರತಿಯೊಬ್ಬರು ಶೌಚಾಲಯ ಬಳಕೆ ಮಾಡಿ: ವಿನಯಕುಮಾರ ನಾಯ್ಡು ಬೆಟಗೇರಿ: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆ-ಮನೆಗಳಲ್ಲಿ ಶೌಚಾಲಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ