Breaking News
Home / Recent Posts / ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ

Spread the love

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ

ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಪಟ್ಟಣ ಗಂಗಾನಗರದ ಡಾ: ಅಂಬೇಡ್ಕರ ಭವನದಲ್ಲಿ ಶನಿವಾರದಂದು ಜರುಗಿತು
ಪದಾಧಿಕಾರಿಗಳ ಆಯ್ಕೆ: ತಾಲೂಕಾ ಗೌರವಾಧ್ಯಕ್ಷ-ಮರೇಪ್ಪ ವಾಯ್.ಮರೆಪ್ಪಗೋಳ, ಸಂಚಾಲಕ-ಯಲ್ಲಪ್ಪ ಸಂ.ಸಣ್ಣಕ್ಕಿ, ಸಂಘಟನಾ ಸಂಚಾಲಕರು- ಲಕ್ಕಪ್ಪ ಯ.ತೆಳಗಡೆ, ಸುರೇಶ ದೇ.ಸಣ್ಣಕ್ಕಿ, ಸಹ ಸಂಚಾಲಕರು-ಸಿದ್ದಪ್ಪ ಯ.ಹಾದಿಮನಿ, ಖಜಾಂಚಿ-ರಾಮಪ್ಪ ಸಂ.ಬಂಗೆನ್ನವರ, ಅಲ್ಪಸಂಖ್ಯಾತರ ಘಟಕದ ಸಂಚಾಲಕ-ವಿಜಯ ಜಾ.ಮೂಡಲಗಿ, ಸಂಘಟನಾ ಸಂಚಾಲಕರು-ಅಶೋಕ ಸಿ.ಮೂಡಲಗಿ, ಲಾಲಸಾಬ ಬ.ಸಿದ್ಧಾಪೂರ, ಸಹ ಸಂಚಾಲಕ-ಮೈಬೂಬಸಾಬ ಮ.ಶೇಖ, ಖಜಾಂಚಿ-ಸಾಬುದ್ಧಿನ ಕಾ.ಹುಣಶ್ಯಾಳ, ವಿದ್ಯಾರ್ಥಿ ಒಕ್ಕೂಟ ಸಂಚಾಲಕ- ವಿನೋದ ಹೋಸಮನಿ, ಸಂಘಟನಟ ಸಂಚಾಲಕ- ವಿಲ್ಸನ್ ನಾ.ಜುಟ್ಟದವರ, ಗಿರೀಶ ಸು.ಮೇತ್ರಿ, ಸಹ ಸಂಚಾಲಕ-ನವೀನ ಸಂ.ಗಸ್ತಿ, ಖಜಾಂಚಿ-ದಿನಕರ ಸ.ಜಗದಾರ, ಕಾನೂನು ಸಲಹೆಗಾರ-ರುಜು ಮ.ಐಹೊಳೆ ಆಯ್ಕೆಯಾಗಿದ್ದಾರೆ.

ಸಮೀತಿಯ ಖಾಯಂ ಗೌರವಾನ್ವಿತ ಹಿರಿಯ ಸದಸ್ಯರಾಗಿ ಪ್ರಭಾಕರ ಆರ್.ಬಂಗೆನ್ನವರ(ಮೂಡಲಗಿ), ಅಶೋಕ ಉದ್ದಪನ್ನವರ(ಕೌಜಲಗಿ)ರಾಮಣ್ನಾ ಈಟಿ(ಕೌಜಲಗಿ), ಯಶವಂತ ದೊಡಮನಿ(ಕಮಲದಿನ್ನಿ), ಶಿವನಪ್ಪ ಭೀ.ದೊಡಮನಿ(ಖಾನಟ್ಟಿ), ಪ್ರಕಾಶ ಕೇಳಗಡೆ(ಶಿವಾಪೂರ-ಹ), ಸಂಪತ ಕರಬನ್ನವರ(ನಾಗನೂರ), ಎಬನೇಜರ ಕರಬನ್ನವರ(ನಾಗನೂರ), ಶಾಂತಪ್ಪ ಹೀರೇಮತ್ರಿ(ಕೌಜಲಗಿ), ಪ್ರಕಾಶ ರೇ.ಮಾದೆ(ಮೂಡಲಗಿ) ಆಯ್ಕೆ ಮಾಡಲಾಗಿದೆ ಎಂದು ಸಮೀತಿಯ ಜಿಲ್ಲಾ ಸಂಘಟನಾ ಸಂಚಾಲಕ ಮೂಡಲಗಿಯ ರವೀಂದ್ರ ದಾ.ಸಣ್ಣಕ್ಕಿ ಘೋಷಿಸಿ ಎಲ್ಲ ಪದಾಧಿಕಾರಿಗಳನ್ನು ಸತ್ಕರಿಸಿ ಗೌರವಿಸಿದರು.

ಈ ಸಂಧರ್ಭದಲ್ಲಿ ಈರಪ್ಪ ಢವಳೇಶ್ವರ ಮಾತನಾಡಿ, ಸಮಾಜಕಾರ್ಯ-ಸಮುದಾಯ ಸಂಘಟನೆ ಎಂಬ ಪರಿಕಲ್ಪನೆಯಡಿ ಚಟುವಟಿಕೆಗಳು ಪ್ರಾರಂಭಗೊಂಡು ಸಮಾಜ ಸೇವೆಯ ವ್ಯವಸ್ಥೆಯಡಿಯಲ್ಲಿ ಅನೇಕ ಜನಹಿತ ಕೆಲಸಗಳನ್ನು ಮಾಡಿ ಸಮುದಾಯದ ಏಳಿಗೆಗಾಗಿ ಹಾಗೂ ಸಮಾಜದ ಏಳಿಗೆಗಾಗಿ ಎಲ್ಲ ಪದಾಧಿಕಾರಿಗಳು ಪ್ರಾಮಾಣ ಕವಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಡಾ: ಬಾಬಾಸಾಹೇಬ ಅಂಬೇಡ್ಕರವರ ಆಶಯದಂತೆ ನೊಂದ ದೀನ ದಲಿತರ ಸೇವೆ ಮಾಡುತ್ತಾ ಸರ್ಕಾರದ ಸವಲತ್ತುಗಳನ್ನು ಅವಕಾಶ ವಚಿತರಿಗೆ ತಲುಪಿಸಲು ಎಲ್ಲ ಶ್ರಮೀಸಬೇಕೆಂದು ಹಾಗೂ ಸಂಘಟನೆ ಹೆಸರನ್ನು ಬಳಿಸಿಕೊಂಡು ದುರುಪಯೋಗ ಮಾಡಿಕೊಳ್ಳಬಾರದೆಂದು ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಗದೀಶ ತೇಲಿ, ನವೀನ ನಿಶಾನಿಮಠ, ಮಲಿಕ ಹುಣಶ್ಯಾಳ ಮತ್ತಿತರು ಇದ್ದರು. ಅಶೋಕ ಸಿದ್ಲಿಂಗಪ್ಪಗೋಳ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ