ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ 13 ಜನ ಸದಸ್ಯರಿಗೆ ಸೋಮವಾರದಂದು ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಮಹಾಂತೇಶ ಮಮದಾಪೂರ ಪ್ರಮಾಣ ಪತ್ರ ವಿತರಿಸಿದರು.
ಬಸವರಾಜ ಪಣದಿ ಅವರು ಗ್ರಾಪಂ ನೂತನ ಸದಸ್ಯರನ್ನು ಸ್ವಾಗತಿಸಿದ ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಎಲ್ಲ ಸದಸ್ಯರು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಗ್ರಾಪಂ ನೂತನ ಸದಸ್ಯರಾದ ಬಸವಂತ ಕೋಣಿ, ಶಿವನಪ್ಪ ಮಾಳೇದ, ಬಸವರಾಜ ದಂಡಿನ, ಈಶ್ವರ ಮುಧೋಳ, ಅಶೋಕ ಕೋಣಿ, ಸದಾಶಿವ ಕುರಿ, ಮಹಾದೇವಿ ಬಳಿಗಾರ, ತೇಜಶ್ವಿನಿ ನೀಲಣ್ಣವರ, ಬಸವ್ವ ದೇಯಣ್ಣವರ, ಯಲ್ಲವ್ವ ಚಂದರಗಿ, ಸಾಂವಕ್ಕಾ ಬಾಣಸಿ, ಗುರವ್ವ ಕಟ್ಟಿಮನಿ, ಲಕ್ಕವ್ವ ಆಶೆಪ್ಪಗೋಳ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ಈರಣ್ಣ ದೇಯಣ್ಣವರ, ಸುಭಾಷ ಜಂಬಗಿ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಇಲ್ಲಿಯ 2 ಬಣಗಳ ಬೆಂಬಲಿತ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.
