ನೂತನ ಸದಸ್ಯರಿಗೆ ನಾಗರೀಕ ಸನ್ಮಾನ
ಕುಲಗೋಡ:ನಾಲ್ಕು ಗ್ರಾಮಗಳಿಗೆ ಹುಣಶ್ಯಾಳ(ಪಿ.ವಾಯ್) ಗ್ರಾ.ಪಂ ಒಂದೇಯಾಗಿದ್ದು ಯಾವ ಗ್ರಾಮಕ್ಕೂ ತಾರತಮ್ಮು ಮಾಡದೇ ಎಲ್ಲ ಗ್ರಾಮಗಳಲ್ಲಿ ಅಭಿವೃದ್ದಿಗೆ ನೂತನ ಸದಸ್ಯರು ಮುಂದಾಗಬೇಕು. ಜನತೆಯ ಆಶೀರ್ವಾದದಿಂದ ಕುರ್ಚಿಯಲ್ಲಿದ್ದಿರಾ ಗಮನದಲ್ಲಿ ಇಟ್ಟುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಪಿ.ಕೆಪಿಎಸ್ ಅಧ್ಯಕ್ಷರು ಅಜ್ಜಪ್ಪ ಗಿರಡ್ಡಿ ಹೇಳಿದರು.
ಅವರು ಮೂಡಲಗಿ ತಾಲೂಕಿನ ಹುಣಶ್ಯಾಳ (ಪಿ.ವಾಯ್) ಗ್ರಾಮ ಪಂಚಾಯತ ಆವರಣದಲ್ಲಿ ಇಂದು ನಡೆದ ಗ್ರಾಪಂ ನೂತನ ಸದಸ್ಯರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ನಾಲ್ಕು ಗ್ರಾಮಗಳ 20 ನೂತನ ಸದಸ್ಯರಿಗೆ ನಾಗರಿಕ ಸನ್ಮಾನ ನಡೆಯಿತು.
ಸಮಾರಂಭದಲ್ಲಿ ಗ್ರಾಪಂ ಪಿಡಿಓ ಸದಾಶಿವ ದೇವರ. ಗೋಪಾಲ ಬಿಳ್ಳೂರ. ಹಣಮಂತ ಗುಡ್ಲಿ. ಹಣಮಂತ ಕಟ್ಟಿಮನಿ. ಶಿವಲಿಂಗ ಜೋಗನ್ನವರ. ರವಿ ದೇಶಪಾಂಡೆ ಬಸಪ್ಪ ಗಿರಡ್ಡಿ. ಪಾಯಪ್ಪ ಉಪ್ಪಿನ. ಅಶೋಕ ಬಟಕುರ್ಕಿ. ಮಲ್ಲಪ್ಪ ಗೌಡನ್ನವರ. ಬಸಪ್ಪ ಶಿರೋಳ. ವೆಂಕಪ್ಪ ಕುರುಬರ. ವೆಂಕಪ್ಪ ಮೂಡಲಗಿ. ಅರ್ಜುನ ದೇಸಾಯಿ.ಹಾಗೂ ಗ್ರಾಮ ಮುಖಂಡರು ಗ್ರಾಮಸ್ಥರು ಇದ್ದರು.
ಗ್ರಾಪಂ ಪಿಡಿಓ ಸದಾಸಿವ ದೇವರ ಸ್ವಾಗತಿಸಿ ಬಿ.ಪಿ ಕೋಟಿ ವಂದಿಸಿದರು.