Breaking News
Home / Recent Posts / ದಾಲ್ಮೀಯಾ ಸಿಮೆಂಟ ಕಾರ್ಖಾನೆ ಮತ್ತು ನಬಾರ್ಡ ಆಶ್ರಯದಲ್ಲಿ ಚಿಪ್ಪಲಕಟ್ಟಿ ಗ್ರಾಮದಲ್ಲಿ ನಿರ್ಮಿಸಿದ ಸಂತೆ ಮಾರುಕಟ್ಟೆ ಉದ್ಘಾಟನೆ

ದಾಲ್ಮೀಯಾ ಸಿಮೆಂಟ ಕಾರ್ಖಾನೆ ಮತ್ತು ನಬಾರ್ಡ ಆಶ್ರಯದಲ್ಲಿ ಚಿಪ್ಪಲಕಟ್ಟಿ ಗ್ರಾಮದಲ್ಲಿ ನಿರ್ಮಿಸಿದ ಸಂತೆ ಮಾರುಕಟ್ಟೆ ಉದ್ಘಾಟನೆ

Spread the love

ಮೂಡಲಗಿ: ದಾಲ್ಮೀಯಾ ಭಾರತ ಫೌಂಡೇಷನದ ತಾಲೂಕಿನ ಯಾದವಾಡ ದಾಲ್ಮೀಯಾ ಸಿಮೆಂಟ ಕಾರ್ಖಾನೆ ಮತ್ತು ನಬಾರ್ಡ ಆಶ್ರಯದಲ್ಲಿ ಚಿಪ್ಪಲಕಟ್ಟಿ ಗ್ರಾಮದಲ್ಲಿ ನಿರ್ಮಿಸಿದ ಸಂತೆ ಮಾರುಕಟ್ಟೆಯ ಉದ್ಘಾಟನಾ ಸಮಾರಂಭ ಜರುಗಿತು.
ಮಾರುಕಟ್ಟೆ ಉದ್ಘಾಟಸಿದ ನಬಾರ್ಡನ ಪ್ರಧಾನ ವ್ಯವಸ್ಥಾಪಕ ಸಿ.ವ್ಹಿ.ರೆಡ್ಡಿ ಮಾತನಾಡಿ, ನಬಾರ್ಡ ಗ್ರಾಮೀಣ ಭಾಘದಲ್ಲಿ ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಹಮ್ಮಿಕೊಂಡಿದು, ಚಿಪಲಕಟ್ಟಿ ಗ್ರಾಮದಲ್ಲಿ ಜನ ಸಾಮಾನ್ಯರಿಗೆ ಉಪಯೋಗವಾಗುವಂತ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿದ್ದು, ಪ್ರತಿಯೊಬ್ಬರು ಒಳ್ಳೆಯ ಆಹಾರ ಉಪಯೋಗಿಸೆದರೆ ಮಾತ್ರ ಉತ್ತಮ ಆರೋಗ್ಯಯುತವಾಗಿರಲು ಸಾಧ್ಯ, ಗ್ರಾಮಸ್ಥರು ಮಾರುಕಟ್ಟೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದ ಅವರು ನಬಾರ್ಡ ಮಾಡುವ ಯೋಜನೆಗಳಲ್ಲಿ ಜಲಾನಯನ ಯೋಜನೆ ಕೂಡ ಒಂದು, ಮಣ್ಣು ಮತ್ತು ನೀರಿನ ಸಂಸ್ಕøರಣೆ ಬಗ್ಗೆ ಒತ್ತು ಕೋಡಲಾಗುತ್ತದೆ ಎಂದರು.
ದಾಲ್ಮೀಯಾ ಸಿಮೇಂಟ ಕಾರ್ಖಾನೆಯ ಮುಖ್ಯಸ್ಥ ಪ್ರಭಾತಕುಮಾರ ಸಿಂಗ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬೆಸಿಗೆ ಮತ್ತು ಮಳೆಗಾಲದಲ್ಲಿ ತರಕಾರಿ ಮಾರುವ ಮತ್ತು ಕೊಳ್ಳುವವರಿಗೆ ಸರಿಯಾದ ವ್ಯವಸ್ಥೆಯಲ್ಲಿ ನಡೆಯಲು ದಾಲ್ಮೀಯಾ ಕಾರ್ಖಾನೆಯು ನರ್ಬಾಡ ಜೋತೆಗೂಡಿ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಲ್ಲಾಗಿದು, ಈ ಮಾರುಕಟ್ಟೆಯಲ್ಲಿ ಸೂಮಾರ 80 ತರಕಾರಿ ವ್ಯಾಪಾರಸ್ಥರು ವ್ಯಾಪಾರ ನಡೆಸಬಹು, ಈ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಶೌಚಾಲಯ ಮತ್ತು ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದ ಅವರು ದಾಲ್ಮೀಯಾ ಫೌಂಡೇಷನದಿಂದ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಸಹಾಯ ಸಹಕಾರ ಮಾಡಲ್ಲಾಗುತ್ತಿರುವ ಕಾರ್ಯ ಮುಂದುವರಿಯಲ್ಲಿದೆ ಎಂದರು.
ನರ್ಬಾಡಿನ ಡಿಡಿಎಂ ಎಸ್.ಕೆ.ಭಾರದ್ವಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಬಸು ಕಾಲತಿಪ್ಪಿ ದಾಲ್ಮೀಯಾ ಕಾರ್ಖಾನೆ ಅಧಿಕಾರಿಗಳು ಇದ್ದರು.
ಸಮಾರಂಭದಲ್ಲಿ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು, ವ್ಯಾಪಾರಸ್ಥರು, ಗ್ರಾಮಸ್ತರು ಮತ್ತಿತರು ಭಾಗವಹಿಸಿದರು. ದಾಲ್ಮೀಯಾ ಸಿಮೆಂಟಿನ ಹಿರಿಯ ಪ್ರಧಾನ ವ್ಯವಸ್ಥಾಪಕ ಮುಖೇಶ ಸಿನ್ಹಾ ಸ್ವಾಗತಿಸಿದರು. ಕಾರ್ಖಾನೆಯ ಹಿರಿಯ ಕಾರ್ಯಕ್ರಮಾಧಿಕಾರಿ ಚೇತನ ವಾಗ್ಮೋರೆ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ