ನಿವೃತ್ತ ಸೈನಿಕ ಅಪ್ಪಾಸಾಬ ಜಾಧವಗೆ ಸನ್ಮಾನ
ಮೂಡಲಗಿ: ಭಾರತೀಯ ಸೇನೆಯಲ್ಲಿ 24ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಪಟ್ಟಣಕ್ಕೆ ಮರಳಿದ ಯೋಧ ಅಪ್ಪಾಸಾಬ ಜಾಧವಗೆ ಪಿ ಕೆ ಫ್ರೂಟ್ ಮಾರ್ಟನಲ್ಲಿ ಸತ್ಕರಿಸಿ ಗೌರವಿಸಲಾಯಿತು
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸೈನಿಕ ವೃತ್ತಿಯಿಂದ ನಿವೃತ್ತಿಯಾದರೂ ಭಾರತ ಮಾತೆಯ ಸೇವೆಯಲ್ಲಿ ಸದಾ ಇರುವುದಾಗಿ ಹೇಳಿ,ಬಲಿಷ್ಠ ಭಾರತಕ್ಕಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಯಲ್ಲಿ ಸೇರಿ ಸದೃಡ ದೇಶ ಕಟ್ಟುವಲ್ಲಿ ಮುಂದಾಗಬೇಕು ಎಂದರು.
ಪಿ.ಕೆ ಫ್ರೂಟ್ ಮಾರ್ಟ ಮಾಲಿಕ ಪ್ರಕಾಶ ಕಾಳಪ್ಪಗೋಳ ನಿವೃತ್ತ ಯೋಧನಿಗೆ ಸನ್ಮಾನಿಸಿ ಮಾತನಾಡಿ, ರೈತ ಹಾಗೂ ಯೋಧರು ಸಲ್ಲಿಸುವ ಕಾರ್ಯದಿಂದ ಇಂದು ನಾವೆಲ್ಲ ನೆಮ್ಮದಿ ಜೀವನ ಸಾಗಿಸುವಂತಾಗಿದೆ ಅವರಂತೆ ಪ್ರತಿಯೊಬ್ಬರೂ ಪ್ರಾಮಾಣಿಕ ಸೇವೆಯಲ್ಲಿ ತೊಡಗಿ ದೇಶದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಅರ್ಜುನ ಗಾಣಿಗೇರ, ಬಸವರಾಜ ಬಡಿಗೇರ, ಮೋಹನ ಜಾಧವ, ಫ್ರೂಟ್‍ಮಾರ್ಟ ಸಿಬ್ಬಂದಿ ಹಾಗೂ ಅನೇಕ ಗಣ್ಯರು ಇದ್ದರು.
IN MUDALGI Latest Kannada News