ಕುರುಹಿನಶೆಟ್ಟಿ ಸೊಸೈಟಿಯಿಂದ ಕೊರೋನಾ ಸೋಂಕಿತರಿಗೆ, ಆಸ್ಪತ್ರೆ ಸಿಬ್ಬಂದಿ,ಪತ್ರಕರ್ತರಿಗೆ,ಪೋಲಿಸ ಸಿಬ್ಬಂದಿಗೆ ಮಾಸ್ಕ್,ಸ್ಯಾನಿಟೈಜರ್,ಹಣ್ಣು ವಿತರಣೆ
ಮೂಡಲಗಿ: ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಪ್ರಂಟ್‍ಲೈನ್ ವಾರಿಯರ್ಸಗಳಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದು ಕುರುಹಿನಶೆಟ್ಟಿ ಕೋ-ಆಪ್ ಸೊಸಾಯಿಟಿಯ ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಹೇಳಿದರು.
ಸೊಸೈಟಿ ವತಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಸೊಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಮತ್ತು ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಹಣ್ಣು ಎನ್95 ಮಾಸ್,ಸ್ಯಾನಿಟೈಜರ್ ವಿತರಿಸಿ ನಂತರ ಸೊಸೈಟಿ ಆವರಣದಲ್ಲಿ ಪತ್ರಕರ್ತರಿಗೆ ಊಟದ ವ್ಯವಸ್ಥೆಯ ಜೊತೆಗೆ ಹಣ್ಣು,ಮಾಸ್ಕ,ಸ್ಯಾನಿಟೈಜರ ವಿತರಿಸಿ ಮಾತನಾಡಿದ ಅವರು, ಕೊರೋನಾ ಹರಡುವಿಕೆ ನಿಯಂತ್ರಿಸಲು ವೈಧ್ಯರು,ಪೋಲಿಸ ಹಾಗೂ ನಾನಾ ಇಲಾಖೆ ಅಧಕಾರಿಗಳು ಹಗಲಿರಳು ಶ್ರಮಿಸುತ್ತಿದ್ದು ಇಂತಹ ಕಠಿಣ ಪರಿಸ್ಥಿತಿಯಲ್ಲೂ ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದರ ಜೊತೆಗೆ ಕೊರೋನಾ ಸಂದರ್ಭದಲ್ಲಿ ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ವಾರಿಯರ್ಸಗಳಿಗೆ ಗೌರವ, ಪ್ರೋತ್ಸಾಹ ನೀಡಬೇಕು. ಪ್ರತಿಯೊಬ್ಬರೂ ಕೊರೋನಾಗೆ ಹೆದರದೆ ಮುಂಜಾಗ್ರತೆ ವಹಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಜರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ ಎಂದರು.
ಈ ವೇಳೆಯಲ್ಲಿ ಸೊಸೈಟಿ ಅಧ್ಯಕ್ಷ ಬಸಪ್ಪ ಮುಗುಳಖೋಡ, ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ಮಾಜಿ ಅಧ್ಯಕ್ಷ ಸುಭಾಸ ಬೆಳಕೂಡ ನಿರ್ದೇಶಕರಾದ ಬಸವರಾಜ ಬೆಳಕೂಡ, ಗೊಡಚೆಪ್ಪ ಮುರಗೋಡ, ಇಸ್ಮಾಯಿಲ ಕಳ್ಳಿಮನಿ, ವಿಶಾಲ ಶೀಲವಂತ ಹಾಗೂ ಸೊಸೈಟಿ ಸಿಬ್ಬಂದಿ ವರ್ಗದವರು ಇದ್ದರು.