Breaking News
Home / Recent Posts / ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್,ಮಾಸ್ಕ,ಸ್ಯಾನಿಟೈಜರ ವಿತರಿಸಿದ ಶೃದ್ಧಾ ಅಂಗಡಿ

ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್,ಮಾಸ್ಕ,ಸ್ಯಾನಿಟೈಜರ ವಿತರಿಸಿದ ಶೃದ್ಧಾ ಅಂಗಡಿ

Spread the love

ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್,ಮಾಸ್ಕ,ಸ್ಯಾನಿಟೈಜರ ವಿತರಿಸಿದ ಶೃದ್ಧಾ ಅಂಗಡಿ

ಮೂಡಲಗಿ: .ಪಟ್ಟಣದ ಬಸವೇಶ್ವರ ಸೊಸೈಟಿ ಆವರಣದಲ್ಲಿ ಸಂಸದೆ ಮಂಗಲಾ ಅಂಗಡಿ ಅವರ ಪುತ್ರಿ ಶೃದ್ಧಾ ಅಂಗಡಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಹಾಗೂ ಮಾಸ್ಕ್, ಸ್ಯಾನಿಟೈಜರ್ ವಿತರಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಅವರು, ಕೊರೋನಾ ವಾರಿಯರ್ಸ ಆಶಾ ಕಾರ್ಯಕರ್ತೆಯರು ಕೋವಿಡ್ ಮೊದಲ ಹಾಗೂ ಎರಡನೆ ಅಲೆಯಲ್ಲಿ ತಮ್ಮ ಜೀವದ ಹಂಗು ತೊರೆದು ಸಾಕಷ್ಟು ಜನ ಜಾಗೃತಿ ಮೂಡಿಸುವ ಮೂಲಕ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರಿಗೆ ಕಿಟ್ಟ ವಿತರಿಸಿ ನಮ್ಮ ಅಳಿಲು ಸೇವೆ ಮಾಡುತ್ತಿದ್ದೇವೆ ಹಾಗೂ ಈ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಬಡ ಜನತೆಗೂ ಕೂಡ ನೆರವು ನೀಡಲಾಗುವುದು. ಎಲ್ಲರೂ ಸರಕಾರದ ಕೋವಿಡ್ ನಿಂತ್ರಣ ಮಾರ್ಗಸೂಚಿಯಂತೆ ಮಾಸ್ಕ್,ಸ್ಯಾನಿಟೈರ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ವಿನಂತಿಸಿದರು.
ಬಿಜೆಪಿ ಮುಖಂಡ ಪ್ರಕಾಶ ಮಾದರ ಮಾತನಾಡಿದರು.
ಸೊಸೈಟಿ ಅಧ್ಯಕ್ಷ ಬಸವರಾಜ ತೇಲಿ, ಗಿರೀಶ ಢವಳೆಶ್ವರ, ಮಲ್ಲು ಢವಳೇಶ್ವರ, ಜಗದೀಶ ತೇಲಿ, ಅರಭಾಂವಿ ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ಕೇದಾರಿ ಭಸ್ಮೆ, ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಚೇತನ್ ನಿಶಾನಿಮಠ, ಸೊಸೈಟಿ ವ್ಯವಸ್ಥಾಪಕ ಬಸವರಾಜ ಬಡಿಗೇರ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ