ಸ್ವಾಮಿ ವಿವೇಕಾನಂದ ಜೀವನಕುರಿತಾದ ಪುಸ್ತಕಗಳು ವಿದ್ಯಾರ್ಥಿಗಳ ಜೀವನ ಪಥವನ್ನೆ ಬದಲಿಸಬಲ್ಲವು-ಪ್ರೊ.ಗುಜಗುಂಡ
ಮೂಡಲಗಿ: ದೇಶ ಕಂಡ ಅಪ್ರತಿಮ ವೀರ ಸನ್ಯಾಸಿ, ರಾಷ್ತ್ರ ಚಿಂತಕ, ಸಮಾಜ ಸುಧಾರಕ, ಧಾರ್ಮಿಕ ನಾಯಕ ಸ್ವಾಮಿ ವಿವೇಕಾನಂದರ ಜೀವನ ಕುರಿತಾದ ಪುಸ್ತಗಳು ವಿದ್ಯಾರ್ಥಿಗಳ ಓದಿದರೆ ಅವು ವಿದ್ಯಾರ್ಥಿಗಳ ಜೀವನ ಪಥವನ್ನು ಬದಲಿಸಬಲ್ಲವು ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಭೂಗೋಳ ಶಾಸ್ತ್ರ ಪ್ರಾಧ್ಯಾಪಕ ಪ್ರೊ.ಸಂಗಮೇಶ ಗುಜಗುಂಡ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ಯ ಪುಸ್ತಕ ಪ್ರದರ್ಶನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಯುವ ಜನತೆ ಮೇಲೆ ವಿವೇಕಾನಂದರು ಬಹಳಷ್ಟು ಬರಸವೆಯನ್ನು ಇಟ್ಟಿದ್ದರು, ಅವರು ನೀಡಿದ ಯುವಶಕ್ತಿಗೆ ಸ್ಪೂರ್ತಿದಾಯಕ ಸಂದೇಶಗಳನ್ನು ಇಂದಿನ ವಿದ್ಯಾರ್ಥಿಗಳು ಸದಾಶಯದಿಂದ ಸ್ವೀಕರಿಸಿದರೆ ಯುವ ಜನತೆ ದೇಶಕಟ್ಟುವ ಕೆಲಸ ಮಾಡಬಹುದು ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ ಕಾಲೇಜಿ ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರೀಮಠ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳನ್ನು ಕೇವಲ ಕೇಳುವದಲ್ಲದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದರೆ ಮಾತ್ರ ಇಂತಹ ಆಚರಣೆಗೆ ಮಹತ್ವ ಬರುತ್ತದೆ ಎಂದರು.
ಸ್ವಾಮಿ ವಿವೇಕಾನಂದರ ಜೀವನ ಕುರಿತಾದ ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಬಲ್ಲ ಪುಸ್ತಕಗಳನ್ನು ಪ್ರದರ್ಶಶಿಸಲಾಯಿತು.
ಸಮಾರಂಭದಲ್ಲಿ ಗ್ರಂಥಪಾಲಕರಾದ ಬಸವಂತ ಬರಗಾಲಿ, ಪ್ರೊ.ವ್ಹಿ.ಎಸ್.ಹಂಪನ್ನವರ, ಡಾ.ಬಿ.ಸಿ. ಪಾಟೀಲ, ಪ್ರೊ.ಎಸ್.ಜಿ.ನಾಯಕ, ಪ್ರೊ.ಎಸ್.ಬಿ. ಖೋತ, ಪ್ರೊ.ಜಿ.ವ್ಹಿ.ನಾಗರಾಜ, ಪ್ರೊ.ಜಿ.ಸಿದ್ರಾಮರಡ್ಡಿ, ಡಾ.ಎಸ್.ಎಸ್.ಹೂಗಾರ, ಪ್ರೊ.ಎ.ಎಸ್.ಮೀಸಿನಾಯ್ಕ, ಪ್ರೊ.ಭೀಮಪ್ಪ ಗಡಾದ, ಮನೋಹರ ಲಮಾಣಿ ಮತ್ತಿತರಿದ್ದರು.