ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಮನವಿ
ಮೂಡಲಗಿ: ಪಟ್ಟಣದ ಜಾತಗಾರ ಪ್ಲಾಟದಲ್ಲಿನ 401 ಸಂಖ್ಯೆಯ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರಿಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರು.
ಇದೇ ವೇಳೆ ಸ್ಥಳೀಯ ನಿವಾಸಿ ಇಬ್ರಾಹಿಂ ಹುಣಶ್ಯಾಳ ಮಾತನಾಡಿ, ಈಗಿರುವ ಅಂಗನವಾಡಿ ಕೇಂದ್ರವು ಶಿಥಿಲಾವ್ಯವಸ್ಥೆಯಲ್ಲಿರುವುದರಿಂದ ಹಾಗೂ ಕೇಂದ್ರದ ಸುತ್ತಮುತ್ತ ಗಲಿಜು ಇರುವುದರಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಅದರಿಂದ ತಾವುಗಳು ಜಾಗ ನೀಡಬೇಕೆಂದು ಪುರಸಭೆ ಮುಖ್ಯಧಿಕಾರಿಗಳಲ್ಲಿ ಮನವಿ ಮಾಡಿಕೊಡರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಕಲಾವತಿ ನಂದಗಾವಮಠ, ಸ್ಥಳೀಯ ನಿವಾಸಿಗಳಾದ ಹುಸೇನಸಾಬ್ ಶೇಖ, ಅಬ್ದುಲ್ ಮದಭಾವಿ, ಹಜರತ್ ಶೇಖ, ಇನು ನಾಗರಾಳ, ಹಾಜಿಸಾಬ್ ಶೇಖ, ರಫೀಕ್ ಕತ್ತನಳಿ ಇದ್ದರು.