ಮೂಡಲಗಿ: ದಾಲ್ಮಿಯಾ ಭಾರತ್ ಫೌಂಡೇಶನದ ಮೂಡಲಗಿ ತಾಲೂಕಿನ ಯಾದವಾಡ ದಾಲ್ಮಿಯಾ ಸೆಮೆಂಟ ಕಾರ್ಖಾನೆಯ ಇನ್ಸಿಟ್ಯೂಟ್ ಆಫ್ ನಾಲೆಜ್ ಅಂಡ್ ಸ್ಕಿಲ್ ಹಾರ್ನೆಸಿಂಗ್(ದೀಕ್ಷಾ) ವಿದ್ಯಾರ್ಥಿಗಳು ಬೆಳಗಾವಿಯ ಎಸ್.ಜಿ.ಬಿ.ಐ.ಟಿ ಕಾಲೇಜಿನಲ್ಲಿ 75 ಅಡಿ ರಂಗೋಲಿ ಬಿಡಿಸುವ ಮೂಲಕ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಿದರು.
ದಾಲ್ಮಿಯಾ ಸಿಮೆಂಟ್‍ನ ಮಾನವ ಸಂಪನ್ಮೂಲ ಮುಖ್ಯಸ್ಥ ಮಯಾಂಕ್ ಪಾಠಕ್ ಮಾತನಾಡಿ, ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿ ಮತ್ತು ರಂಗೋಲಿ ಬಿಡಿಸಿದ ವಿದ್ಯಾರ್ಥಿಗಳ ಕಾರ್ಯ ಶ್ಲಾಘಿಸಿದರು.
ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಕಾರ್ಯಕ್ರಮಾಧಿಕಾರಿ ಚೇತನ್ ವಾಘಮೋರ್, ದಾಲ್ಮಿಯಾ ಭಾರತ್ ಫೌಂಡೇಶನದಿಂದ ವಿದ್ಯಾರ್ಥಿಗಳನ್ನು ಶ್ಲಾಘಿಸಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಉದ್ದೇಶಗಳನ್ನು ವಿವರಿಸಿದರು.
ಎಸ್‍ಜಿಬಿಐಟಿಯ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪೆÇ್ರೀತ್ಸಾಹಿಸಿದರು.
ಈ ಸಮಯದಲ್ಲಿ ನಬಾರ್ಡ್ ಡಿ,ಎಸ್.ಎಂ ಎಸ್.ಕೆ.ಭಾರದ್ವಾಜ್, ಕೆನರಾ ಬ್ಯಾಂಕ್ ಐ.ಆರ್.ಒ ರಾಹು, ಡಾ ಸುರೇಂದ್ರ ಪೆÇೀತಲ್ಕರ್, ದೀಕ್ಷ ವ್ಯವಸ್ಥಾಪಕಿ ಶ್ರೀಮತಿ ತೇಜಸ್ವಿ, ಮತ್ತು ದೀಕ್ಷಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.