Breaking News
Home / inmudalgi (page 12)

inmudalgi

ನಾಳೆ ಶ್ರೀ ಅಯ್ಯಪ್ಪಸ್ವಾಮಿ 32ನೇ ಮಹಾಪೂಜೆ

ನಾಳೆ ಶ್ರೀ ಅಯ್ಯಪ್ಪಸ್ವಾಮಿ 32ನೇ ಮಹಾಪೂಜೆ ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ 32ನೇ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ ಮತ್ತು ಅಗ್ನಿ ಪೂಜೆ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮವು ಡಿ.22ರಂದು ಮದ್ಯಾಹ್ನ 2ಗಂಟೆಗೆ ಕನ್ನಿ ಸ್ವಾಮಿಗಳಿಂದ ಕುಂಭಮೇಳ ಮತ್ತು ಆನೆ ಮೇಲೆ ಅಂಬಾರಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಭಾವಚಿತ್ರ, ಮೂರ್ತಿಯ ಭವ್ಯ ಮೆರವಣಿಗೆಯು ವಿವಿಧ ವಾದ್ಯಮೇಳಗಳೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಬಸವರಂಗ ಮಂಟಪದಲ್ಲಿರುವ ಸ್ವಾಮಿಯ …

Read More »

ಶಬರಿಮಲೈಗೆ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಮಾಲಾಧಾರಿಗಳು

ಶಬರಿಮಲೈಗೆ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಮಾಲಾಧಾರಿಗಳು ಮೂಡಲಗಿ:-ಪಟ್ಟಣದಿಂದ ಶಬರಿಮಲೈಗೆ ಪಾದಯಾತ್ರೆ ಕೈಗೊಂಡಿರುವ ಶ್ರೀ ಅಯ್ಯಪ್ಪ ಮಾಲಾಧಾರಿಗಳು. ಮೂಡಲಗಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಈರಪ್ಪ ವರ್ಲಿ ಸ್ವಾಮಿ ನಾಲ್ಕನೆಯ ವರ್ಷದ ಪಾದಾರ್ಪಣೆ ಮತ್ತು ಈ ವರ್ಷ ಇವರೊಡನೆ ಇನ್ನುಳಿದ ರಾಜು ನಾಯಕ ಸ್ವಾಮಿ,ಮಲ್ಲಪ್ಪ ಕೊಳವಿ ಸ್ವಾಮಿ ಹಾಗೂ ತವನಪ್ಪಾ ಟೋಕನವರ ಸ್ವಾಮಿ ಪ್ರಥಮವಾಗಿ ಪಾದಯಾತ್ರೆ ಮೂಲಕ ಶಬರಿಯಾತ್ರೆಗೆ ಕೈಗೊಂಡರು.ಇವರನ್ನು ಮೂಡಲಗಿಯ ಶ್ರೀಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಇನ್ನುಳಿದ ಭಕ್ತರು ಬಿಳ್ಕೊಟರು.

Read More »

ದಿ.೧೯ ರಿಂದ ಶ್ರೀ ಗಾಳೇಶ್ವರ ಜಾತ್ರಾಮಹೋತ್ಸವ

ದಿ.೧೯ ರಿಂದ ಶ್ರೀ ಗಾಳೇಶ್ವರ ಜಾತ್ರಾಮಹೋತ್ಸವ ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದ ಶ್ರೀ ಅವಧೂತಗಾಳೇಶ್ವರ ಮಹಾಸ್ವಾಮಿಗಳ ೮೧ನೇ ಪುಣ್ಯಾರಾಧನೆಯ ಮತ್ತು ಪರಮ ಪೂಜ್ಯ ಪುಂಡಲೀಕ ಮಹಾರಾಜರ ೮೬ನೇ ಹುಟ್ಟುಹಬ್ಬ, ಕಿರೀಟ ಪೂಜೆ ಕಾರ್ಯಕ್ರಮ ಡಿ.೧೯ ರಿಂದ ೨೩ರವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಠದ ಪೀಠಾಧಿಪತಿ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಜರುಗಲಿದೆ. ಶುಕ್ರವಾರ ಡಿ.೧೯ ರಂದು ಬೆಳಿಗ್ಗೆ ಕರ್ತೃ ಗದ್ದುಗೆಗಳಿಗೆ ಅಭಿಷೇಕ, ಗೀತಾ ಪಾರಾಯಣ, …

Read More »

*ಓಂ ಸಂತಾ ಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರಧಾನ*

*ಓಂ ಸಂತಾ ಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರಧಾನ* ಮೂಡಲಗಿ : ಇತ್ತೀಚಿಗೆ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಮಾದವಾನಂದ ಆಶ್ರಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ, ಮಹಾಕವಿ ರನ್ನ ಫೌಂಡೇಶನ್ ಮುಧೋಳ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಂಸ್ಕೃತಿಕ ಕಲಾ ಸಂಘ ಇವುಗಳ ಆಶ್ರಯದಲ್ಲಿ ಜರುಗಿದ, ವಿವಿಧ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮೂಡಲಗಿ ಪಟ್ಟಣದ …

Read More »

ಚಳಿ..ಚಳಿ..ತಾಳೇನೂ ಈ ಚಳಿಯಾ.! ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ತೀವ್ರಗೊಂಡ ಚಳಿ

ಚಳಿ..ಚಳಿ..ತಾಳೇನೂ ಈ ಚಳಿಯಾ.! ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ತೀವ್ರಗೊಂಡ ಚಳಿ ವರದಿ *ಅಡಿವೇಶ ಮುಧೋಳ. ಬೆಟಗೇರಿ:ಕಳೆದ ಐದಾರು ದಿನಗಳಿಂದ ವಿಪರೀತ ಬೀಸುತ್ತಿರುವ ಶೀತಗಾಳಿಗೆ ತೀವ್ರಗೊಂಡ ಮೈಕೊರೆಯುವ ಚುಮು ಚುಮು ಚಳಿ(ಥಂಡಿ) ಹೆಚ್ಚಾದ ಪರಿಣಾಮ ಗೋಕಾಕ ತಾಲೂಕಿನ ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಜನ ಜೀವನವನ್ನು ತತ್ತರಗೊಳಿಸಿದೆ. ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಡಿ.15ರಂದು ರಾತ್ರಿ 10:30ಕ್ಕೆ ಸುಮಾರು 14 ಡಿಗ್ರಿ ಸೆಲ್ಸಿಯಸ್ ಮಂಗಳವಾರ ಬೆಳಗ್ಗೆ 6ಗಂಟೆಗೆ 15 …

Read More »

Head line *6 ಸಾವಿರ ಕೋಟಿ* *ರೂಪಾಯಿಯಿಂದ 10 ಸಾವಿರ ಕೋಟಿಗೆ ಏರಿಕೆ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೊಲ್ಲೆ ಸಂಕಲ್ಪ* *ಬೆಳಗಾವಿ ಜಿಲ್ಲೆಯ ಎಲ್ಲ ಪಿಕೆಪಿಎಸ್ ಸಂಘಗಳ ಕಾರ್ಯನಿರ್ವಾಹಕರ ಸಭೆಯಲ್ಲಿ ಜೊಲ್ಲೆ ಹೇಳಿಕೆ*

*ಬೆಳಗಾವಿ-: ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ‌ ಅಭಿವೃದ್ಧಿಗೆ ಹಲವಾರು ರೈತಪರ ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದ್ದು, ಈಗಿರುವ 6 ಸಾವಿರ ಕೋಟಿ ರೂಪಾಯಿ ಠೇವಣಿಯನ್ನು ಮುಂದಿನ ದಿನಗಳಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿವರೆಗೆ ಹೆಚ್ಚಿಸಲು ಉದ್ದೇಶ ಹೊಂದಿರುವುದಾಗಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಹೇಳಿದರು. ಸೋಮವಾರ, ನಗರದ ಧರ್ಮನಾಥ ಭವನದಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ …

Read More »

ಮನರಂಜಿಸಿದ ಸಂಗ್ಯಾಬಾಳ್ಯಾ ಸಾಮಾಜಿಕ ಬೈಲಾಟ

ಮನರಂಜಿಸಿದ ಸಂಗ್ಯಾಬಾಳ್ಯಾ ಸಾಮಾಜಿಕ ಬೈಲಾಟ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ಪ್ರಯುಕ್ತ ಡಿ.13ರಂದು ರಾತ್ರಿ 10 ಗಂಟೆಗೆ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿ ಶ್ರೀ ದುರ್ಗಾದೇವಿ ಹೆಣ್ಣು ಮಕ್ಕಳ ನಾಟ್ಯ ಸಂಘದವರಿಂದ ಬೈಲಾಟದ ಎಲ್ಲಾ ಪಾತ್ರಧಾರಿಗಳಲ್ಲಿ ಹೆಣ್ಣು ಮಕ್ಕಳಿ(ನಟ, ನಟಿಯರಿ)ಂದ ಸಂಗ್ಯಾ ಬಾಳ್ಯಾ ಎಂಬ ಸಾಮಾಜಿಕ ಬೈಲಾಟ ಪ್ರದರ್ಶನಗೊಂಡು ಈ ಬೈಲಾಟದ ಎಲ್ಲಾ ಪಾತ್ರಧಾರಿಗಳು ಎಲ್ಲಾ ಪ್ರೇಕ್ಷಕರ ಮನ ರಂಜಿಸಿದರು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ …

Read More »

*ಜಿಲ್ಲಾ ಮಟ್ಟದ ಮಹಿಳಾ ಚುಟುಕುಗೋಷ್ಠಿ*

*ಜಿಲ್ಲಾ ಮಟ್ಟದ ಮಹಿಳಾ ಚುಟುಕುಗೋಷ್ಠಿ* ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮೂಡಲಗಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ ಹಮ್ಮಿಕೊಂಡ ಜಿಲ್ಲಾಮಟ್ಟದ ಮಹಿಳಾ ಚುಟುಕುಗೋಷ್ಠಿ ಅರ್ಥಪೂರ್ಣವಾಗಿ ನೆರವೇರಿತು. ಮಹಿಳಾ ಚುಟುಕುಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲಶೇಖರ ಬಂದಿ ಯವರು ಪ್ರಸ್ತುತ ಸನ್ನಿವೇಶದಲ್ಲಿ ಯುವ ಹಾಗೂ ಹಿರಿಯ ಬರಹಗಾರರ್ತಿಯರಿಂದ ಉತ್ತಮ ಚುಟುಕುಗಳು ಮೂಡಿ ಬರುತ್ತಿದ್ದು ಅದರಲ್ಲೂ ವಿಶೇಷವಾಗಿ ಮಹಿಳಾ ಕವಯಿತ್ರಿಯರು ಪ್ರಸ್ತುತ ಸಮಾಜದ ಕಣ್ಣು …

Read More »

ಡಾ. ಶಾಮನೂರು ಶಿವ ಶಂಕರಪ್ಪ(94) ನವರ ನಿಧನಕ್ಕೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತೀವ್ರ ಸಂತಾಪ

ಮೂಡಲಗಿ: ಹಿರಿಯ ಮುತ್ಸದ್ದಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಮಾಜಿ ಸಚಿವ ಡಾ. ಶಾಮನೂರು ಶಿವ ಶಂಕರಪ್ಪ(94) ನವರ ನಿಧನಕ್ಕೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಡಾ. ಶಾಮನೂರು ಶಿವಶಂಕರಪ್ಪನವರು ವಿಧಾನಸಭೆಯ ಹಿರಿಯ ಸದಸ್ಯರು. ಸುಮಾರು ಆರು ಬಾರಿ ಶಾಸಕರಾಗಿ, ರಾಜ್ಯದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ದಾವಣಗೆರೆಯಲ್ಲಿ ಬಾಪೂಜಿ ಶಿಕ್ಷಣ …

Read More »

ದೇವರು, ತಾಯಿ-ತಂದೆ, ಪೂಜ್ಯರು ಮತ್ತು ಜನರ ಆಶೀರ್ವಾದದಿಂದ ನಾವು ಜಿಲ್ಲೆಯಲ್ಲಿಯೇ ಗಟ್ಟಿಯಾಗಿ ಜನರ ಮುಂದೆ ನಿಲ್ಲಲು ಕಾರಣವಾಗಿದೆ -ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ದೇವರು, ತಾಯಿ-ತಂದೆ, ಪೂಜ್ಯರು ಮತ್ತು ಜನರ ಆಶೀರ್ವಾದದಿಂದ ನಾವು ಜಿಲ್ಲೆಯಲ್ಲಿಯೇ ಗಟ್ಟಿಯಾಗಿ ಜನರ ಮುಂದೆ ನಿಲ್ಲಲು ಕಾರಣವಾಗಿದೆ. ಮುಂದೆಯೂ ಸಹ ಇದೇ ಆಶೀರ್ವಾದವು ಸದಾ ಕಾಲ ನಮ್ಮೇಲಿರಲಿ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ತಾಲ್ಲೂಕಿನ ಮುನ್ಯಾಳ- ರಂಗಾಪೂರ ಮಠದಲ್ಲಿ ಶನಿವಾರದಂದು ನೂತನವಾಗಿ ಅಸ್ತಿತ್ವಕ್ಕೆ ಬಂದ ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಠ- ಮಾನ್ಯಗಳಿಂದ ಮಾತ್ರ ಸಮಾಜವು ಪ್ರಗತಿ ಸಾಧಿಸಲಿಕ್ಕೆ ಸಾಧ್ಯವಿದೆ …

Read More »