ಮೂಡಲಗಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಅನುಕೂಲವಾಗಲು ಡಯಾಲಿಸಿಸ್ ಕೇಂದ್ರದ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಮಂಗಳವಾರದಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಿಸಲಾದ ಎರಡು ಹಾಸಿಗೆಯ ಸಾಮರ್ಥ್ಯದ ಹೊಸ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. ಪ್ರತಿ ತಾಲ್ಲೂಕಿಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಡಯಾಲಿಸಿಸ್ …
Read More »ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ,
ಮೂಡಲಗಿ : ಹುಬ್ಬಳಿಯ ಬಣಗಾರ ಸಮಾಜದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಹುಬ್ಬಳ್ಳಿಯಲ್ಲಿ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಶೈಕ್ಷಣಿಕ ವರ್ಷ 2024- 25 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಪ್ರತಿಶತ 80% ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಜಿಲ್ಲೆ ಬಣಗಾರ ಸಮಾಜದ ಮಕ್ಕಳು ಭಾಗವಹಿಸಬೇಕು ಎಂದು ಮೂಡಲಗಿ ಬಣಗಾರ ಸಮಾಜದ ಅಧ್ಯಕ್ಷ ಆನಂದ ಮಿರ್ಜಿ …
Read More »ಮೂಡಲಗಿಯಲ್ಲಿ ಬಿಜೆಪಿ ಮಂಡಲದಿಂದ ಹಮ್ಮಿಕೊಳ್ಳಲಾದ ತಿರಂಗಾ ಯಾತ್ರೆ
ಮೂಡಲಗಿ – ದೇಶದ ಹೆಮ್ಮೆಯ ಸೈನಿಕರಿಗೆ ಶಕ್ತಿ ತುಂಬುವ, ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಂಗಳವಾರದಂದು ತಿರಂಗಾ ಯಾತ್ರೆಯು ಯಶಸ್ವಿಯಾಗಿ ನಡೆಯಿತು. ಇಲ್ಲಿನ ಶಿವಬೋಧರಂಗ ಕಾಲೇಜಿನಿಂದ ಆರಂಭಗೊಂಡ ತಿರಂಗಾ ಯಾತ್ರೆಯು ಕಲ್ಮೇಶ್ವರ ವೃತ್ತದವರೆಗೆ ಸಂಚರಿಸಿತು. ಸೈನಿಕ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ದೇಶದ ಪರ ಘೋಷಣೆಗಳು ಮೊಳಗಿದವು. ಭಾರತ ಮಾತಾ ಕೀ ಜೈ, ವಂದೇ ಮಾತರಂ, ಟೀಚರ ಟೀಚರ್ ಲಿಟಲ ಸ್ಟಾರ್ ಇಂಡಿಯನ್ …
Read More »ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮಹಾದೇವ ಕಂಬಿ, ಉಪಾಧ್ಯಕ್ಷರಾಗಿ ಗಂಗವ್ವ ತೋಟಗಿ ಆಯ್ಕೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಶನಿವಾರ ಮೇ.17ರಂದು ನಡೆದ ಸಂಘದ ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ನೇತೃತ್ವದ ಗುಂಪಿನ ಸದಸ್ಯ ಮಹಾದೇವ ಚಂದ್ರಪ್ಪ ಕಂಬಿ ಅಧ್ಯಕ್ಷರಾಗಿ, ಉಪಾಧ್ಯಕ್ಷೆಯಾಗಿ ಗಂಗವ್ವ ಬಸಪ್ಪ ತೋಟಗಿ ಆಯ್ಕೆಯಾಗಿದ್ದಾರೆ. ಒಟ್ಟು 12 ಸದಸ್ಯರ ಬಲ ಹೊಂದಿರುವ ಸಂಘ, ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ಸತ್ತೆಪ್ಪ ಹೊರಟ್ಟಿ 5 ಮತ …
Read More »ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ
ಮೂಡಲಗಿ: ತಾಲೂಕಿನ ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ ಅಪಾರ ಜನಸಮೂಹ ಮಧ್ಯೆ ಶುಕ್ರವಾರ ಸಂಜೆ ಜರುಗಿತು.
Read More »ಅಂಗವಿಕಲರಿಗೆ ಮೋಟಾರ್ ಸೈಕಲ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಅಂಗವಿಕಲರಿಗೆ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂಥ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಅರಭಾವಿ ಶಾಸಕ ಮತ್ತು ಬೇಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಗುರುವಾರದಂದು ನಗರದ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನ (ಹೀರೋ ಸ್ಕೂಟಿ) ಗಳನ್ನು ವಿತರಿಸಿ ಅವರು ಮಾತನಾಡಿದರು. ಅಂಗವಿಕಲರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸ್ವಾವಲಂಬಿ ಬದುಕು ಸಾಗಿಸಬೇಕು. ಅದಕ್ಕಾಗಿ ಸರಕಾರವು ಜಾರಿಗೆ …
Read More »ವಿದ್ಯಾರ್ಥಿಗಳು ಸಾಧಿಸುವ ಸಂಕಲ್ಪ ಹೊಂದಿರಬೇಕು -ಪ್ರಾಚಾರ್ಯ ವಾಯ್.ಬಿ. ಕಳ್ಳಿಗುದ್ದಿ.
ಮೂಡಲಗಿ : ವಿದ್ಯಾರ್ಥಿಗಳು ಸಾಧಿಸುವ ಸಂಕಲ್ಪ ಹೊಂದಿರಬೇಕು ಸಾಧನೆಗೆ ಗುರುಗಳ ಸ್ಪೂರ್ತಿಯ ಜೊತೆಗೆ ಪ್ರಯತ್ನ ಮತ್ತು ದೂರದೃಷ್ಟಿಯ ದೃಢತೆ ಅಳವಡಿಸಿಕೊಂಡಾಗ ಸಾಧನೆಗೆ ಆತ್ಮಬಲ ಬರುತ್ತದೆ ಫಲಿತಾಂಶ ಮುಖ್ಯವಲ್ಲ ಸಾಧಕನಿಗೆ ಸಾಧಿಸುವ ಛಲ ಮುಖ್ಯವಾಗಿದೆ ಭಾರತ ಸರಕಾರದ ಅತ್ಯುನ್ನತ ಹುದ್ದೆಗಳನ್ನು ಹೊಂದಬೇಕಾದರೆ ನಿರಂತರ ಪ್ರಯತ್ನದ ಜೊತೆಗೆ ಜಗತ್ತಿನ ವಾಸ್ತವಿಕ ಜ್ಞಾನಕ್ಕೆ ಆಧ್ಯತೆ ನೀಡಬೇಕೆಂದು ಹಳ್ಳೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಾಯ್. ಬಿ. ಕಳ್ಳಿಗುದ್ದಿ ಹೇಳಿದರು. ಪಟ್ಟಣದ ಆರ್ಡಿಎಸ್ …
Read More »ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ-ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
ಮೂಡಲಗಿ : ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ, ಇಂದಿನ ಆಧುನಿಕ ಯುಗದಲ್ಲಿ ಅನೇಕರು ಹಲವು ಒತ್ತಡಗಳ ಮಧ್ಯೆ ಕಾರ್ಯನಿರ್ವಹಿಸುತ್ತಿದ್ದು, ವ್ಯಾಯಾಮದಿಂದ ಮಾತ್ರ ಒತ್ತಡದಿಂದ ಹೊರ ಬರಲು ಸಾಧ್ಯ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಗುರುವಾರದಂದು ಪಟ್ಟಣದ ಗಂಗಾನಗರದ ಅಂಬೇಡ್ಕರ್ ಭವನದಲ್ಲಿ, ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವ್ಯಾಯಾಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದವರು, ನಾನು ಜಿಲ್ಲಾ ಪಂಚಾಯತ ಅಧ್ಯಕ್ಷನಾಗುವಕ್ಕಿಂತ ಮೊದಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ …
Read More »ವಿದ್ಯಾಪೋಷಕದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಮೂಡಲಗಿ: ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯ ನರ್ಚರ ಮೆರಿಟ್ ಯೋಜನೆಯಡಿಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ನೆರವನ್ನು ನೀಡಲಿದೆ. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮಾರ್ಚ 2025ರಲ್ಲಿ ಮೊದಲ ಬಾರಿ ಬರೆದು ಶೇ.80ರಷ್ಟು ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರಬೇಕು. ಪಿಯುಸಿ ಮೊದಲನೇ ವರ್ಷದ ವಾಣಿಜ್ಯ ಮತ್ತು ಡಿಪ್ಲೋಮಾ ಕೋರ್ಸಗೆ ಸೇರಲು ಬಯಸುವ ವಿದ್ಯಾರ್ಥಿಗಳು ಮಾತ್ರ ಅರ್ಜಿಯನ್ನು ಹಾಕಲು ಅರ್ಹರು. ಕುಟುಂಬದ ವಾರ್ಷಿಕ ವರಮಾನ ರೂ.1.20 ಲಕ್ಷಕ್ಕಿಂತ ಕಡಿಮೆ …
Read More »ಕೃತಿಗಳ ಬಿಡುಗಡೆ ಸಮಾರಂಭ
ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ತಾಲೂಕಾ ಘಟಕ ಹಾಗೂ ಸ್ನೇಹ ಸಂಕುಲ ಮೂಡಲಗಿ ಸಹಯೋಗದಲ್ಲಿ ಡಾ.ಮಹಾದೇವ ಜಿ.ಜಿಡ್ಡಿಮನಿ ಅವರ “ಗುರುಶಿಷ್ಯರ ಆತ್ಮಸಖ್ಯ” ಮತ್ತು “ಮಿತ್ರಸಂಮಿತ” ಎರಡು ಕೃತಿಗಳ ಬಿಡುಗಡೆ ಸಮಾರಂಭ ಶುಕ್ರವಾರ ಮೇ.16 ಮುಂಜಾನೆ 10 ಗಂಟೆಗೆ ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಸೊಸೈಟಿ ಸಭಾ ಭವನದಲ್ಲಿ ಜರುಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕುರುಹಿನಶೆಟ್ಟಿ ಸೊಸೈಟಿಯ ಅಧ್ಯಕ್ಷ ಸುಭಾಸ ಬೆಳಕೂಡ ವಹಿಸುವರು, ಶಾಸಕ ಬಾಲಚಂದ್ರ ಜಾರಕಿಹೊಳಿ …
Read More »