ಬೆಳಗಾವಿ: ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕವನ್ನು ಆದಷ್ಟು ಬೇಗ ಘೋಷಿಸುವುದು ಮತ್ತು ಬೆಳಗಾವಿ ಮಿರಜ್ ನಡುವೆ ಮೆಮೊ ರೈಲು ಸಂಚಾರ ಪ್ರಾರಂಭಿಸುವುದು ಹಾಗೂ ಮುಂಬೈ-ಹೊಸಪೇಟೆ (ರೈಲು ಸಂಖ್ಯೆ 111139/40) ಮತ್ತು ಸೊಲ್ಹಾಪುರ-ಹೊಸಪೇಟೆ (ರೈಲು ನಂ .11415/16) ವರೆಗೆ ಇರುವ ಈ ರೈಲುಗಳನ್ನು ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ವಿಸ್ತರಿಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನನ್ನ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನಮ್ಮ ನಿಯೋಗಕ್ಕೆ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಬೆಳಗಾವಿ ಲೋಕಸಭಾ ಸಂಸದರಾದ ಜಗದೀಶ ಶೆಟ್ಟರ ಉಪಸ್ಥಿತರಿದ್ದರು.