Breaking News
Home / ಬೆಳಗಾವಿ / ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕ ಆದಷ್ಟು ಬೇಗ ಘೋಷಿಸಿ- ಸಂಸದ ಈರಣ್ಣ ಕಡಾಡಿ

ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕ ಆದಷ್ಟು ಬೇಗ ಘೋಷಿಸಿ- ಸಂಸದ ಈರಣ್ಣ ಕಡಾಡಿ

Spread the love

ಬೆಳಗಾವಿ: ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕವನ್ನು ಆದಷ್ಟು ಬೇಗ ಘೋಷಿಸುವುದು ಮತ್ತು ಬೆಳಗಾವಿ ಮಿರಜ್‌ ನಡುವೆ ಮೆಮೊ ರೈಲು ಸಂಚಾರ ಪ್ರಾರಂಭಿಸುವುದು ಹಾಗೂ ಮುಂಬೈ-ಹೊಸಪೇಟೆ (ರೈಲು ಸಂಖ್ಯೆ 111139/40) ಮತ್ತು ಸೊಲ್ಹಾಪುರ-ಹೊಸಪೇಟೆ (ರೈಲು ನಂ .11415/16) ವರೆಗೆ ಇರುವ ಈ ರೈಲುಗಳನ್ನು ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ವಿಸ್ತರಿಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ನನ್ನ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನಮ್ಮ ನಿಯೋಗಕ್ಕೆ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಬೆಳಗಾವಿ ಲೋಕಸಭಾ ಸಂಸದರಾದ ಜಗದೀಶ ಶೆಟ್ಟರ ಉಪಸ್ಥಿತರಿದ್ದರು.


Spread the love

About inmudalgi

Check Also

ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ನೀರನ್ನು ಹರಿಸಿದ್ದು, ಕೌಜಲಗಿ ಮತ್ತು ಯಾದವಾಡ ಭಾಗದ ರೈತರಿಗೆ ನೀರು ತಲುಪಿಸಬೇಕು – ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ್- ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ನೀರನ್ನು ಹರಿಸಿದ್ದು, ಕೌಜಲಗಿ ಮತ್ತು ಯಾದವಾಡ ಭಾಗದ ರೈತರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ