ಬೆಟಗೇರಿ:ಕೆಎಂಎಫ್ ಅಧ್ಯಕ್ಷ, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಂತೆ ಕೌಜಲಗಿ ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಲೋಕೋಪಯೋಗಿ ಇಲಾಖೆಯ ಎಸ್‍ಸಿಪಿ ಯೋಜನೆಯ ಸುಮಾರು 26ಲಕ್ಷ ರೂ.ಗಳ ಅನುದಾನದಡಿಯಲ್ಲಿ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಜ.17ರಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೌಜಲಗಿ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಸ್ಥಳೀಯ ಮುಖಂಡರಾದ ರವಿ ಪರುಶೆಟ್ಟಿ, ಅಶೋಕ ಉದ್ದಪ್ಪನ್ನವರ, ಶಾಂತಪ್ಪ ಹಿರೇಮೇತ್ರಿ, ಗಂಗಾಧರ ಲೋಕನ್ನವರ, ರಾಮಣ್ಣ ಈಟಿ, ನೀಲಪ್ಪ ಕೇವಟಿ, ಮಹಾದೇವ ಬುದ್ನಿ, ರಂಜಾನ ಪೋದಿ, ಮಹೆಬೂಬ ಮುಲ್ತಾನಿ, ಅಶೋಕ ಹೊಸಮನಿ, ಭೀಮಶಿ ಉದ್ದಪ್ಪನ್ನವರ, ಗ್ರಾಪಂ ಸದಸ್ಯರು, ಗಣ್ಯರು, ಸ್ಥಳೀಯರು ಇದ್ದರು.
