Breaking News
Home / Recent Posts / ಸತತ ಪ್ರಯತ್ನದಿಂದ ಏನೆಲ್ಲಾ ಸಾಧನೆ ಸಾಧ್ಯ:ಪ್ರಾಚಾರ್ಯ ಸುರೇಶ ಶಿವಾಪೂರ

ಸತತ ಪ್ರಯತ್ನದಿಂದ ಏನೆಲ್ಲಾ ಸಾಧನೆ ಸಾಧ್ಯ:ಪ್ರಾಚಾರ್ಯ ಸುರೇಶ ಶಿವಾಪೂರ

Spread the love

ಸತತ ಪ್ರಯತ್ನದಿಂದ ಏನೆಲ್ಲಾ ಸಾಧನೆ ಸಾಧ್ಯ:ಪ್ರಾಚಾರ್ಯ ಸುರೇಶ ಶಿವಾಪೂರ

ಬೆಟಗೇರಿ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಮಕ್ಕಳು ಎಷ್ಟು ಓದಿದರೂ ಕಡಿಮೆ. ಸತತ ಪ್ರಯತ್ನದಿಂದ ಏನೆಲ್ಲಾ ಸಾಧನೆ ಸಾಧ್ಯ ಎಂದು ಹಾರೂಗೇರಿಯ ಎಂ.ಬಿ.ಪಾಟೀಲ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸುರೇಶ ಶಿವಾಪೂರ ಹೇಳಿದರು.
ಹಾರೂಗೇರಿಯ ಎಂ.ಬಿ.ಪಾಟೀಲ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕ್ರೀಯಟಿವ್ ಫೌಂಡೇಷನ್‍ದವರು ಇತ್ತೀಚೆಗೆ ಆಯೋಜಿಸಿದ ಪ್ರತಿಭಾ ಅನ್ವೇಷಣೆ ಪರೀಕ್ಷೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ರಮೇಶ ಬುಳ್ಳಿ ಅವಳು ಪ್ರಥಮ ಸ್ಥಾನ ಪಡೆದ ಪ್ರಯುಕ್ತ ವಿದ್ಯಾರ್ಥಿನಿ ಮನೆಗೆ ತೆರಳಿ ಸನ್ಮಾನಿಸಿ ಮಾತನಾಡಿದ ಅವರು, ಪ್ರತಿಭಾ ಅನ್ವೇಷಣೆ ಪರೀಕ್ಷೆ ಬರೆದ 5657 ಮಕ್ಕಳಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿನಿ ಅಕ್ಷತಾ ಬುಳ್ಳಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಸಾಧನೆಗೆ ಮೆಚ್ಚುಗೆ: ಸಾಧನೆಗೈದ ವಿದ್ಯಾರ್ಥಿನಿಯ ಸ್ವಗ್ರಾಮ ಗೋಸಬಾಳ ಗ್ರಾಮಸ್ಥರು ಮತ್ತು ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಅಕ್ಷತಾ ಬುಳ್ಳಿ ಅವಳು ಪ್ರತಿಭಾ ಅನ್ವೇಷಣೆ ಪರೀಕ್ಷೆಯಲ್ಲಿ ಮಾಡಿದ ಸಾಧನೆಯನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಭೀಮಶಿ ಬುಳ್ಳಿ, ಹಾರೂಗೇರಿ ಎಂ.ಬಿ.ಪಾಟೀಲ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ವಿದ್ಯಾರ್ಥಿನಿ ಪಾಲಕರು, ಗೋಸಬಾಳ, ಬೆಟಗೇರಿ ಗ್ರಾಮದ ಸ್ಥಳೀಯರು, ಇತರರು ಇದ್ದರು.

 


Spread the love

About inmudalgi

Check Also

ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ ಚಿದಾನಂದ ಮ ಹೂಗಾರ ಇವರ *ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

Spread the love ಮೂಡಲಗಿ -ಶಿವಾಪೂರ ಹ ಗ್ರಾಮದ ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ