ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವ ಅಭಿಮಾನಿ ಬಳಗದ ಸಹಯೋಗದಲ್ಲಿ ಬಸವ ಜಯಂತಿಯ ಆಚರಣೆ ಕಾರ್ಯಕ್ರಮ ಇದೇ ಮಂಗಳವಾರ ಮೇ.3ರಂದು ಅದ್ಧೂರಿಯಾಗಿ ನಡೆಯಲಿದೆ.
ಗ್ರಾಮದ ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿ ಮುಂಜಾನೆ 8 ಗಂಟೆಗೆ ಬಸವಣ್ಣನವರ ಅಶ್ವಾರೊಢ ಮೂರ್ತಿಗೆ ಮಹಾಪೂಜೆ, ಪುಷ್ರ್ಪಾಪನೆ, ಷಟಸ್ಥಲ್ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಷಟಸ್ಥಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮುಂಜಾನೆ 10 ಗಂಟೆಗೆ ಸ್ಥಳೀಯ ಅಶ್ವಾರೊಢ ಬಸವೇಶ್ವರ ವೃತ್ತದಿಂದ ಇಲ್ಲಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದವರೆಗೆ ಮಹಿಳೆಯರಿಂದ ಆರತಿ, ಕುಂಭ ಸಕಲ ವಾದ್ಯಮೇಳಗಳೊಂದಿಗೆ ಬಸವೇಶ್ವರರ ಭಾವ ಚಿತ್ರÀ, ಶೃಂಗರಿಸಿದ ಜೋಡೇತ್ತುಗಳ ಭವ್ಯ ಮೆರವಣಿಗೆ ಬಳಿಕ ಪ್ರಸಾದ ವಿತರಣೆ, ಮೆರವಣಿಗೆಯಲ್ಲಿ ಪಾಲ್ಗೊಂಡ ಜೋಡೇತ್ತುಗಳ ರೈತರಿಗೆ ಕಿರು ಕಾಣಿಕೆ, ಸನ್ಮಾನ ಜರುಗಲಿದೆ.
ಸ್ಥಳೀಯ ಮತ್ತು ಸುತ್ತಲಿನ ಹಳ್ಳಿಗಳ ಮುಖಂಡರು, ಗಣ್ಯರು, ಸಂತ ಶರಣರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಇಲ್ಲಿಯ ಬಸವ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರು, ಬಸವಣ್ಣನ ಅಭಿಮಾನಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಬೆಟಗೇರಿ ಗ್ರಾಮದ ಬಸವ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಸಂಚಾಲಕ ಮಲ್ಲಪ್ಪ ಪಣದಿ ಜಂಟಿಯಾಗಿ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.
ಶೃಂಗಾರಗೊಂಡ ಬೆಟಗೇರಿ ಬಸವೇಶ್ವರ ವೃತ್ತ: ಬೆಟಗೇರಿ ಗ್ರಾಮದಲ್ಲಿ ಮೇ.3ರಂದು ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸ್ಥಳೀಯ ಬಸವ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಸಂಚಾಲಕ ಮಲ್ಲಪ್ಪ ಪಣದಿ ಅವರ ನೇತೃತ್ವದಲ್ಲಿ ಬೆಟಗೇರಿ ಗ್ರಾಮದ ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಮೂರ್ತಿಗೆ ರಂಗುರಂಗಿನ ವಿದ್ಯುತ್ ದೀಪಗಳ ಅಲಂಕಾರ, ವೃತ್ತದ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಯುವ ಕೆಲಸ ಬರದಿಂದ ನಡೆಯಿತು. ಕೆಲವು ದಿನಗಳ ಕಾಲ ಇಲ್ಲಿಯ ಅಶ್ವಾರೊಢ ಬಸವೇಶ್ವರ ವೃತ್ತ ಶೃಂಗಾರಮಯವಾಗಿ ಕಂಗೊಳಿಸಲಿದೆ.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …