ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದೂ ಸಸಿ ನೆಟ್ಟು, ಪಕ್ಷಿ ಸಂಕುಲ ಹಾಗೂ ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು ಎಂದು ಗೋಕಾಕ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಜಾಫರಸಾಧಿಕ್ ಮುಜಾವರ ಹೇಳಿದರು.
ಘಟಪ್ರಭಾ ಅರಣ್ಯ ವಿಭಾಗ, ಗೋಕಾಕ, ಗೋಕಾಕ ಪ್ರಾದೇಶಿಕ ಅರಣ್ಯ ವಲಯದ ಸಹಯೋಗದಲ್ಲಿ ಜೂನ್.5 ರಂದು ಬೆಟಗೇರಿ ಗ್ರಾಮದ ಹೊರವಲಯದ ಗೈರಾಣ ಪ್ರದೇಶದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸನ್2022-23ನೇ ಸಾಲಿನ ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯ ಗೈರಾಣ ಪ್ರದೇಶದಲ್ಲಿ ಇಂದು ಸುಮಾರು 40 ಕೆಜಿ ತೂಕದ ವಿವಿಧ ಜಾತಿಯ ಬೀಜಗಳನ್ನು ಬಿತ್ತನೆ ಮಾಡಲಾಗುವುದು ಎಂದರು.
ನಮಗೆ ಹಸಿರೇ ಉಸಿರಾಗಿದೆ. ನಮ್ಮ ಸುತ್ತಲಿನ ಪರಿಸರ ಹಸಿರಿನಿಂದ ಕಂಗೊಳಿಸಬೇಕಾದರೆ ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಪೋಷಿಸಿ, ಬೆಳಸಬೇಕು. ಅರಣ್ಯ ನಾಶದ ದುಷ್ಪರಿಣಾಮ, ಅರಣ್ಯ ಬೆಳಸುವುದರಿಂದ ಆಗುವ ಪ್ರಯೋಜನಗಳ ಕುರಿತು ಈ ವೇಳೆ ಉಪ ಅರಣ್ಯಾಧಿಕಾರಿ ಜಾಫರಸಾಧಿಕ್ ಮುಜಾವರ ತಿಳಿಸಿದರು.
ಗೋಕಾಕ ವಲಯ ಅರಣ್ಯ ಇಲಾಖೆ ಅರಣ್ಯ ರಕ್ಷಕ ಬಸವರಾಜ ಮುಷ್ಟಿಗೇರಿ, ಕಾಳಪ್ಪ ಪತ್ತಾರ, ವಿಜಯ ಹಿರೇಮಠ, ಪರಶುರಾಮ ಖೋತ, ಲಕ್ಷ್ಮಿ ಪತ್ತಾರ, ಸಾವಿತ್ರಿ ಬೆಟಗೇರಿ, ಮಾಲಾ ದೇಯಣ್ಣವರ, ಭಾರತಿ ಅಜ್ಜನಕಟ್ಟಿ, ಅರಣ್ಯ ಇಲಾಖೆ ಸಿಬ್ಬಂದಿ, ಶಾಲಾ ಮಕ್ಕಳು, ವಿವಿಧ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಗ್ರಾಪಂ ಸದಸ್ಯರು, ಸ್ಥಳೀಯರು ಇದ್ದರು.