ಯಶಸ್ವಿಯಾಗಿ ನಡೆದ 5 ಕಿ.ಮೀ ಮುಕ್ತ ಓಟದ ಸ್ಪರ್ಧೆ
ಬೆಟಗೇರಿ:ಗ್ರಾಮದ ಡಾ.ಬೆಟಗೇರಿ ಕೃಷ್ಣಶರ್ಮ ಸೈನಿಕ ತರಬೇತಿ ಕೇಂದ್ರದವರ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನ.1ರಂದು ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ 5 ಕಿ.ಮೀ ಮುಕ್ತ ಓಟದ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಹಣಮಂತ ವಡೇರ ದಿವ್ಯ ಸಾನಿಧ್ಯ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ ಉದ್ಘಾಟನೆ ನೆರವೇರಿಸಿದರು. ರಾಜ್ಯ ಮಟ್ಟದ 600 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆಯಾದ ಸ್ಥಳೀಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಶಂಕರಾನಂದ ಮುಧೋಳ ಅವರನ್ನು ಸತ್ಕರಿಸಲಾಯಿತು. 20ಕ್ಕೂ ಹೆಚ್ಚು ಸ್ಪರ್ಧಾಳುಗಳು ಮುಕ್ತ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಸೇರಿದಂತೆ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಗ್ರಾಪಂ ಉಪಾಧ್ಯಕ್ಷ ಶಿವನಪ್ಪ ಮಾಳೇದ, ಮುಕ್ತ ಓಟದ ಸ್ಪರ್ಧೆ ಆಯೋಜಕ ಮುತ್ತೆಪ್ಪ ನೀಲಣ್ಣವರ, ಭೀಮಶೆಪ್ಪ ದೇಯಣ್ಣವರ, ಬಸವರಾಜ ಪಣದಿ, ರಾಮಣ್ಣ ಮುಧೋಳ, ಈರಣ್ಣ ಬಳಿಗಾರ, ಸ್ಪರ್ಧೆಗೆ ವಿವಿಧ ಬಹುಮಾನ, ಸಹಾಯ, ಸಹಕಾರ ನೀಡಿದ ಗಣ್ಯರು, ಕ್ರೀಡಾಭಿಮಾನಿಗಳು, ಸ್ಥಳೀಯ ಹಿರಿಯ ನಾಗರಿಕರು, ಯುವಕರು ಇದ್ದರು.