ಮೂಡಲಗಿ: ಜಾಗತಿಕರಣದ ಸಂದಿಗ್ಧ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವ್ಯಾಪಕ ಅವಕಾಶಗಳ ಹೆಬ್ಬಾಗಿಲಾಗಿದೆ ಎಂದು ಬೆಳಗಾವಿ ರಾಣಿ ವಿವಿಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಎಸ್.ಎಂ.ಗಂಗಾಧರಯ್ಯ ಹೇಳಿದರು
ಶನಿವಾರದಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2021-22 ಸಾಲಿನ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಕಾಲೇಜುಗಳಿಗೆ ಮಾತ್ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ, ಪೂರ್ಣಮಟ್ಟದ ಪ್ರಜ್ಞಾವಂತರಾಗಿ ಶ್ರಧ್ಧೆ, ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಶ್ರೇಯಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳ ಜೋತೆಗೆ ಭಾಷಾ ಸಾಮಥ್ರ್ಯ ಅಭಿವ್ಯಕ್ತಿಗೊಂಡರೆ ವಿದ್ಯಾರ್ಥಿಗಳು ಗಟ್ಟಿಯಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಡಿ.ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಬೌತಿಕ ಶಿಕ್ಷಣ ಪಡೆದರೆ ಸಾಲದು ಮೌಲ್ಯಿಕ ಶಿಕ್ಷಣವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಶ್ರೀಮತಿ ರೋಹಿನಿ ಗಂಗಾದರಯ್ಯಾ ಅವರು ಸುಸ್ತವ್ಯವಾಗಿ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಸಮಾರಂಭದಲ್ಲಿ ಪಿ.ಎಚ್.ಡಿ ಪದವಿ ಪಡೆದ ವಿದ್ಯಾಲಯದ ಪ್ರೊ.ಡಾ.ಸಂಗಮೇಶ ಎಸ್.ಹೂಗಾರ, ಕೆ.ಸೆಟ್ 2021 ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರೊ.ವೇದಾ ಆರ್.ದೇಶಪಾಂಡೆ ಮತ್ತು ಸಿ.ಎಪರೀಕ್ಷೆಯಲ್ಲಿ ತೇರ್ಗಡೆಯಾದ ಧರ್ಮರಾಜ ಪೋಳ ಮತ್ತು ಸಂತೋಷ ಹೊಸಮನಿ ಅವರನ್ನು ಸತ್ಕರಿಸಿ ಗೌರವಿಸಿದರು.
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ಅಧ್ಯಕ್ಷತೆ ವಹಿಸಿದರು, ಪ್ರಾಚಾರ್ಯ ಡಾ: ಆರ್.ಎ.ಶಾಸ್ತ್ರೀಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಎಸ್ ಎಂ.ಗುಜಗೊಂಡ ಪರಿಚಯಿಸಿದರು, ಡಾ.ಬಿ.ಸಿ.ಪಾಟೀಲ ವಂದಿಸಿದರು, ಪ್ರೊ.ಎ.ಎಸ್.ಮಿಸಿನಾಯಿಕ್ ನಿರೂಪಿಸಿದರು. ಐಶ್ವರ್ಯ ತಳವಾರ ಪ್ರಾರ್ಥಿಸಿದಳು,
ಮಹಾವಿದ್ಯಾಲಯದ ಉಪನ್ಯಾಸಕರಾದ ವ್ಹಿ.ಆರ್.ದೇವರಡ್ಡಿ, ಎಸ್.ಜಿ.ನಾಯಿಕ, ಎಸ್.ಸಿ.ಮಂಟೂರ, ಜಿ.ವಿ.ನಾಗರಾಜ, ವಿ.ಎಸ್.ಹಂಪನವರ, ಜಿ.ಸಿದ್ರಾಮರಡ್ಡಿ, ಎಸ್.ಎಲ್.ಚಿತ್ರಗಾರ ಮತ್ತು ಬಸವಂತ ಬರಗಾಲಿ ಭಾರತಿ ತಳವಾರ ಮತ್ತಿತರು ಇದ್ದರು.
