
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅ.10ರಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಯಲ್ಲವ್ವ ಲಕ್ಷ್ಮಣ ಚಂದರಗಿ ಆಯ್ಕೆಗೊಂಡಿದ್ದಾರೆ.
ಒಟ್ಟು 13 ಸದಸ್ಯರ ಬಲ ಹೊಂದಿದ ಬೆಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನಡೆದು ಪ್ರತಿಸ್ಪರ್ದಿ ಅಭ್ಯರ್ಥಿಯಾಗಿ ಸದಾಶಿವ ಕುರಿ 6 ಮತಗಳನ್ನು ಪಡೆದು ಪರಾಭವಗೊಂಡರು. ಯಲ್ಲವ್ವ ಲಕ್ಷ್ಮಣ ಚಂದರಗಿ 7 ಮತಗಳನ್ನು ಪಡೆದು ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಗೋಕಾಕ ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಘುರಾಮ ಎಸ್.ಬಿ ಅವರು ಘೋಷಿಸಿದರು.
ಈ ವೇಳೆ ಗ್ರಾಪಂ ಪಿಡಿಒ ಎಚ್.ಎನ್.ಭಾವಿಕಟ್ಟಿ, ಕುಲಿಗೋಡ ಪೊಲೀಸ್ ಠಾಣೆಯ ಎಎಸ್‍ಐ ಎ.ಡಿ.ಕೊಪ್ಪದ, ಪೊಲೀಸ್ ಬೀಟ್ ಪೇದೆ ಮಹೇಶ ಲದ್ದಿ, ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ, ಹಿರಿಯ ನಾಗರಿಕರು, ರಾಜಕೀಯ ಮುಖಂಡರು, ಎರಡು ಗುಂಪುಗಳ ಅಭಿಮಾನಿಗಳು, ಗ್ರಾಮಸ್ಥರು ಇದ್ದರು.
IN MUDALGI Latest Kannada News