ಬೆಟಗೇರಿ:ಸತೀಶ್ ಶುಗರ್ಸ್ ಲಿ. ಗೋಕಾಕ ಇವರಿಂದ ಉಚಿತವಾಗಿ ನೀಡುತ್ತಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್‍ಗಳನ್ನು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಆಶಾ ಮತ್ತು ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಿಬ್ಬಂದಿಗೆ ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಜೂ.2ರಂದು ವಿತರಿಸಲಾಯಿತು.
ಕೌಜಲಗಿ ಗ್ರಾಮದ ಯುವ ಧುರೀಣ ಮಂಜುನಾಥ ಸಣ್ಣಕ್ಕಿ ಅವರು ಶಾಸಕ ಸತೀಶ್ ಜಾರಕಿಹೊಳಿ ಅವರ ಪರವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಮತ್ತೀತರ ಪರಿಕರಗಳನ್ನು ವಿತರಿಸಿ ಮಾತನಾಡಿ, ಸತೀಶ್ ಶುಗರ್ಸ್ ಲಿ. ಗೋಕಾಕ ಇವರಿಂದ ಉಚಿತವಾಗಿ ನೀಡುತ್ತಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್‍ಗಳ ಕುರಿತು ಹಾಗೂ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಾಸಕ ಸತೀಶ್ ಜಾರಕಿಹೊಳಿ ಅವರ ಸೇವಾ ಕಾರ್ಯವನ್ನು ಈ ವೇಳೆ ಶ್ಲಾಘಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಈಶ್ವರ ಮುಧೋಳ, ಶಿವನಪ್ಪ ಮಾಳೇದ, ಸುಭಾಷ ಜಂಬಗಿ, ಬಸವರಾಜ ದೇಯಣ್ಣವರ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ ಆಶಾ ಮತ್ತು ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಿಬ್ಬಂದಿ, ಸ್ಥಳೀಯರು, ಮತ್ತೀತರರು ಇದ್ದರು.
Home / Recent Posts / ಶಾಸಕ ಸತೀಶ್ ಜಾರಕಿಹೊಳಿ ಅವರ ಪರವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಮತ್ತೀತರ ಪರಿಕರಗಳನ್ನು ವಿತರಣೆ
Check Also
ಅರಳಮಟ್ಟಿಯಲ್ಲಿ ಭಜನಾ ಕಾರ್ಯಕ್ರಮ
Spread the loveಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದ ಚಕ್ರವರ್ತಿ ಶ್ರೀ ಸದಾಶಿವ ಮುತ್ಯಾನ ಭಜನಾ ಕಾರ್ಯಕ್ರಮ ಹಾಗೂ ಸಮುದಾಯ ಭವನ …