ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು. ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವ ಅಭಿಮಾನಿ ಬಳಗದ ಸಹಯೋಗದಲ್ಲಿ ಏ.20ರಂದು ನಡೆದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬಸವಣ್ಣನವರು ವಚನಗಳನ್ನು ರಚಿಸಿ ಜಗತ್ತಿಗೆ ಅದ್ಭುತವಾದ ಕೊಡುಗೆ ನೀಡಿದ್ದಾರೆ.vಇಂದು ಪ್ರತಿಯೊಬ್ಬರು ಬಸವಣ್ಣನವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸ್ಥಳೀಯ ವೇದಮೂರ್ತಿ ಸಂಗಯ್ಯ ಹಿರೇಮಠ ಷಟಸ್ಥಲ್
ಧ್ವಜಾರೋಹಣ ನೆರವೇರಿಸಿದರು. ಗೋಕಾಕ ವಕೀಲರ ಸಂಘದ ಮಾಜಿ ಅಧ್ಯಕ್ಷ, ನ್ಯಾಯವಾದಿ ಎಂ.ಐ.ನೀಲಣ್ಣವರ ಅವರು ಸ್ಥಳೀಯ ಅಶ್ವಾರೊಢ ಬಸವೇಶ್ವರ ವೃತ್ತದಿಂದ ಇಲ್ಲಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದವರೆಗೆ ಸಕಲ ವಾದ್ಯಮೇಳಗಳೊಂದಿಗೆ ವಿಶ್ವಗುರುvಬಸವೇಶ್ವರರ ಭಾವ ಚಿತ್ರ, ಶೃಂಗರಿಸಿದ ಜೋಡೇತ್ತುಗಳ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ವೇದಮೂರ್ತಿ ಈರಯ್ಯ ಹಿರೇಮಠ ಕಾರ್ಯಕ್ರಮದ ನೇತೃತ್ವ ವಹಿಸಿ ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಮೂರ್ತಿಗೆ ಮಹಾಪೂಜೆ, ಪುಷ್ರ್ಪಾಪನೆ ನೆರವೇರಿಸಿದರು. ಸ್ಥಳೀಯ ಬಸವ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಬಸವ ಅಭಿಮಾನಿ ಬಳಗದವರ ಸಹಯೋಗದಲ್ಲಿ ಇಲ್ಲಿಯ ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಮೂರ್ತಿಗೆ ರಂಗುರಂಗಿನ ವಿದ್ಯುತ್ ದೀಪಗಳ ಅಲಂಕಾರ, ವೃತ್ತದ ಕಟ್ಟಡಕ್ಕೆ ನೂತನ ಸುಣ್ಣ, ಬಣ್ಣಗಳಿಂದ ಕೆಲವು ದಿನಗಳ ಕಾಲ ಇಲ್ಲಿಯ ಅಶ್ವಾರೊಢ ಬಸವೇಶ್ವರ ವೃತ್ತ ಶೃಂಗಾರಮಯವಾಗಿ ಕಂಗೊಳಿಸುತ್ತಿದೆ.
ಲಕ್ಷ್ಮಣ ನೀಲಣ್ಣವರ, ಸುಭಾಷ ಕರೆಣ್ಣವರ, ಮಲ್ಲಪ್ಪ ಪಣದಿ, ದುಂಡಪ್ಪ ಮಾಳೇದ, ಮಹಾಂತೇಶ ಮಾಳೇದ, ಮುತ್ತೆಪ್ಪ ದೇಯಣ್ಣವರ, ಶಂಕರ ತೋಂಡಿಕಟ್ಟಿ, ಬಸವರಾಜ ಪಣದಿ, ಚಂದ್ರಶೇಖರ ಹೂಗಾರ, ಈಶ್ವರ ಬಡಿಗೇರ, ಬಸವರಾಜ ಮಾಳೇದ. ಮಹಾಂತೇಶ ಸಿದ್ನಾಳ, ಈರಪ್ಪ ದೇಯಣ್ಣವರ, ರಾಮಣ್ಣ ನೀಲಣ್ಣವರ, ಮಹಾಂತೇಶ ಮಾಳೇದ, ಬಾಳಪ್ಪ ಕನೋಜಿ, ಈರಪ್ಪ ಕಂಬಿ, ಸುರೇಶ ನೀಲಣ್ಣವರ, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಬಸವ ಅಭಿಮಾನಿ ಬಳಗದ ಸದಸ್ಯರು, ಇತರರು ಇದ್ದರು.
IN MUDALGI Latest Kannada News