Breaking News
Home / ಬೆಳಗಾವಿ / ಗುರು ಪೂರ್ಣಿಮೆ ಗುರುಗಳಿಗೆ ಕೃತಜ್ಞತೆ ಸಮರ್ಪಿಸುವ ಮಹತ್ವದ ದಿನ: ಡಾ.ಮಲ್ಲಿಕಾರ್ಜುನ ಕರಜಗಿಮಠ

ಗುರು ಪೂರ್ಣಿಮೆ ಗುರುಗಳಿಗೆ ಕೃತಜ್ಞತೆ ಸಮರ್ಪಿಸುವ ಮಹತ್ವದ ದಿನ: ಡಾ.ಮಲ್ಲಿಕಾರ್ಜುನ ಕರಜಗಿಮಠ

Spread the love

ಬೆಟಗೇರಿ:ಪಿರಮಿಡ್ ಧ್ಯಾನದಿಂದ ವ್ಯಕ್ತಿ, ಸಮಾಜ ಹಾಗೂ ಪ್ರಕೃತಿಯ ಸಮತೋಲನ ಸಾಧ್ಯ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಗುರು ಪೂರ್ಣಿಮೆ ಗುರುಗಳಿಗೆ ಕೃತಜ್ಞತೆ ಸಮರ್ಪಿಸುವ ಮಹತ್ವದ ದಿನವಾಗಿ ಭಾರತದಲ್ಲಿ ಆಚರಿಸ್ಪಡುತ್ತದೆ ಎಂದು ಬಗರನಾಳ ಬಸವ ಪಿರಾಮಿಡ್ ಹಿಲ್ಸ್ ಸಂಸ್ಥಾಪಕ ಗುರೂಜಿ ಡಾ. ಮಲ್ಲಿಕಾರ್ಜುನ ಕರಜಗಿಮಠ ಹೇಳಿದರು.
ಗೋಕಾಕ ತಾಲೂಕಿನ ಬಗರನಾಳ ಗ್ರಾಮದ ಬಸವ ಪಿರಾಮಿಡ್ ಹಿಲ್ಸ್ ಧ್ಯಾನ ಕೇಂದ್ರದಲ್ಲಿ ಬುಧವಾರ ಜು.29ರಂದು ಸಾಯಂಕಾಲ 6ಗಂಟೆಗೆ ನಡೆದ ಬಗರನಾಳ ಬಸವ ಪಿರಮಿಡ್ ಹಾಗೂ ಮನಸಾಕ್ಷಿ ಫೌಂಡೇಶನ್ ಇಂಟನ್ರ್ಯಾಷನಲ್ ಸಹಭಾಗಿತ್ವದಲ್ಲಿ ಬ್ರಹ್ಮರ್ಷಿ ಪತ್ರೀಜಿಯವರ 4ನೇ ವರ್ಷದ ಮಹಾ ಪರಿನಿರ್ವಾಣೋತ್ಸವ ಮತ್ತು ಗುರು ಪೂರ್ಣಿಮೆಯ ವಿಶೇಷ ಧ್ಯಾನ ಹಾಗೂ ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಪ್ರತಿ ದಿನ ಕೆಲವು ನಿಮಿಷಗಳಾದರೂ ಧ್ಯಾನ ಮಾಡುವದನ್ನು ರೂಢಿಸಿಕೊಳ್ಳಬೇಕು ಎಂದರು.
ಇಂದಿನ ವೇಗದ ಒತ್ತಡದ ಆತಂಕಭರಿತ ಜೀವನದಲ್ಲಿ ಧ್ಯಾನವೇ ಮನಸ್ಸಿನ ಶಾಂತಿ, ಆತ್ಮವಿಕಾಸ ಮತ್ತು ಆರೋಗ್ಯಕರ ಬದುಕಿನ ದಾರಿಯಾಗಿದೆ. ಪಿರಮಿಡ್ ಶಕ್ತಿ ಕ್ಷೇತ್ರದಲ್ಲಿ ಧ್ಯಾನ ಮಾಡುವುದರಿಂದ ಏಕಾಗ್ರತೆ, ಮಾನಸಿಕ ನೆಮ್ಮದಿ ಹಾಗೂ ಅಂತರಿಕ ಜಾಗೃತಿ ವೃದ್ಧಿಯಾಗುತ್ತದೆ. ಬಗರನಾಳ ಬಸವ ಪಿರಮಿಡ್ ಹಿಲ್ಸ್ ಧ್ಯಾನ, ಆತ್ಮವಿಕಾಸ ಮತ್ತು ಮಾನವೀಯ ಮೌಲ್ಯಗಳ ಪ್ರಸಾರಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಗರನಾಳ ಬಸವ ಪಿರಾಮಿಡ್ ಹಿಲ್ಸ್ ಸಂಸ್ಥಾಪಕ ಗುರೂಜಿ ಡಾ. ಮಲ್ಲಿಕಾರ್ಜುನ ಕರಜಗಿಮಠ ಅಭಿಪ್ರಾಯಿಸಿದರು.
ಬೆಳಗಾವಿ ಮೃತ್ಯುಂಜಯಸ್ವಾಮಿ ಹಿರೇಮಠ ದಿವ್ಯ ಸಾನಿಧ್ಯ ವಹಿಸಿದ್ದರು. ಡಾ.ಪಿ.ಎಸ್.ಖಾನನ್ನವರ ಜಾಗತಿಕ ಮಟ್ಟದಲ್ಲಿ ನೀರಿನ ಸಮಸ್ಯೆ, ಪರಿಹಾರ ಮತ್ತು ಸಂರಕ್ಷಣೆ ಹಾಗೂ ಮಹತ್ವ ಕುರಿತು ಹಾಗೂ ಬೆಳಗಾವಿ ಎಮಿನೆಂಟ್ ಕೋಚಿಂಗ್ ಸಂಸ್ಥಾಪಕ ಮಂಜುನಾಥ ಕೌಲಗಿ ನೀರಿನ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಅನುಭವಿಸುವ ಸಂಕಷ್ಟಗಳ ಬದುಕಿನ ಕುರಿತು ಮಾತನಾಡಿದರು.
ಹರ, ಗುರು, ಚರಮೂರ್ತಿಗಳು, ಶ್ರೀಗಳು, ಗಣ್ಯರು,
ಅತಿಥಿಮಹೋದೆಯರಿಗೆ ಬಗರನಾಳ ಬಸವ ಪಿರಮಿಡ್ ಹಾಗೂ ಮನಸಾಕ್ಷಿ ಫೌಂಡೇಶನ್ ಇಂಟನ್ರ್ಯಾಷನಲ್ ವತಿಯಿಂದ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.ಹುಲಕುಂದದ ಹನುಮಂತ ಬೂದಿ, ಕೊಡ್ಲಿವಾಡದ ಹನುಮಂತ ಕುರಿ ಅನ್ನಪ್ರಸಾದ ಸೇವೆ ನೆರವೇರಿಸಿದರು. ಗುರು ಪೂರ್ಣಿಮೆ ಹಾಗೂ ಹುಣ್ಣಿಮೆ ಧ್ಯಾನೋತ್ಸವವು ಆಧ್ಯಾತ್ಮಿಕ ಜಾಗೃತಿ, ಪರಿಸರ ಕಾಳಜಿ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಿದ ಅರ್ಥಪೂರ್ಣ ಕಾರ್ಯಕ್ರಮವಾಗಿ ಯಶಸ್ವಿಯಾಗಿ ಜರುಗಿತು.
ನಿಪ್ಪಾಣಿಯ ಮಂಜುನಾಥ ದುರ್ಗನ್ನವರ, ಹುಬ್ಬಳ್ಳಿಯ ಸೋಮನಾಥ ಶ್ರೇಷ್ಠಿ, , ಗೋಕಾಕ ಪೂರ್ವಿ ಸ್ಪೋಟ್ಸ್‍ನ ಕಿಶೋರ ಭಟ್, ಡಾ. ವೆಂಕಟೇಶ ಬಡಗನ್ನವರಗೋಕಾಕ ದಂತ ವೈದ್ಯೆ ಡಾ.ಅಂಜನಾ ಬಡಗನ್ನವರ, ಗೋಕಾಕದ ಬಸವಂತಪ್ಪ ಉಳ್ಳಾಗಡ್ಡಿ, ಗೋಕಾಕ ಪಿರಾಮಿಡ್ ಇಂಜಿನಿಯರ್ ಸುಬೋಧ ಹುಂಡೇಕರ. ಭಾಗ್ಯಲಕ್ಷ್ಮೀ ಕೌಲಗಿ, ವಿನಯಕುಮಾರ.ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು,ಮಕ್ಕಳು, ಸಂತರು, ಶರಣರು ಬಗರನಾಳ ಬಸವ ಪಿರಮಿಡ್ ಹಾಗೂ ಮನಸಾಕ್ಷಿ ಫೌಂಡೇಶನ್ ಇಂಟನ್ರ್ಯಾಷನಲ್ ಸಹಭಾಗಿತ್ವದ ಕಾರ್ಯಕ್ರಮ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು. ಶೈಲಾ ಕೊಕ್ಕರಿ ಮೊದಲಿಗೆ ಸ್ವಾಗತಿಸಿದ ಬಳಿಕ ಕಾರ್ಯಕ್ರಮ ನಿರೂಪಿಸಿದರು. ಡಾ.ಗೀತಾ ಕೊನೆಗೆ ವಂದಿಸಿದರು.


Spread the love

About client

Check Also

ಶ್ರೀ ಮಹಾಲಕ್ಷ್ಮೀದೇವಿ ಗದ್ಗುಗೆ ವಿಶೇಷ ಮಹಾಪೂಜೆ

Spread the loveಲಕ್ಷ್ಮೀ…ಮಹಾಲಕ್ಷ್ಮೀ ಕಾಪಾಡಮ್ಮ..! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ವಾರದ ದಿನ ಶುಕ್ರವಾರ ಜು.31ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ