ಸವದತ್ತಿ ತೋಟದ ಪ್ರಾಥಮಿಕ ಶಾಲೆಯಲ್ಲಿ
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಬೆಟಗೇರಿ:ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ಸವದತ್ತಿ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ನಾಷ್ಟಮಿಯನ್ನು ಶುಕ್ರವಾರ ಸೆ.4 ರಂದು ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿಯ ಶಾಲೆಯ ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ
ಎಲ್ಲರ ಗಮನ ಸೆಳೆದರು. ಕೊಳಲು ಹಿಡಿದು ತಲೆಯ ಮೇಲೆ ಕಿರೀಟ, ನವಿಲು ಗರಿ, ಹಣೆ ಮೇಲೆ ತಿಲಕ ಕೊರಳಲ್ಲಿ ಮುತ್ತಿನ ಹಾರ ಸೊಂಟಕ್ಕೆ ಚಿಕ್ಕ ಧೋತಿ…ಹೀಗೆ ವಿವಿಧ ಅಂಲಕಾರಿಕ ವಸ್ತುಗಳಿಂದ ಸಿಂಗಾರಗೊಂಡ ಮಕ್ಕಳು ಪಾಲ್ಗೊಂಡು ಶ್ರೀ ಕೃಷ್ಣ ಜನ್ನಾಷ್ಟಮಿ ಆಚರಣೆ ಕಾರ್ಯಕ್ರಮಕ್ಕೆ ಮೆರಗು ತಂದರು.
ಈ ವೇಳೆ ಶಾಲೆಯ ಮುಖ್ಯಶಿಕ್ಷಕ ಡಿ.ಎಸ್.ಮಡಿವಾಳರ,
ಎಸ್.ಬಿ.ಭಜಂತ್ರಿ, ಎಸ್.ಎಚ್.ನಾಯಕ, ಅಶ್ವಿನಿ ಚಿಗದಿನ್ನಿ, ಲಕ್ಷ್ಮೀ ಸವತಿಕರ, ಕಾವೇರಿ ವಡೇರ, ಶಾಲೆಯ ಮಕ್ಕಳು, ಶಿಕ್ಷಕರು, ಅತಿಥಿ ಶಿಕ್ಷಕರು, ಮತ್ತೀತರರು ಇದ್ದರು.
IN MUDALGI Latest Kannada News