Breaking News
Home / ತಾಲ್ಲೂಕು (page 116)

ತಾಲ್ಲೂಕು

ನೂತನವಾಗಿ ನಿರ್ಮಿಸಿರುವ ಶ್ರೀರಾಮ ಮೂರ್ತಿಯ ಅನಾವರಣ ಮತ್ತು ಹನುಮಾನ ಮೂರ್ತಿಯ ಪ್ರತಿಷ್ಠಾಪನೆ

ಬೆಟಗೇರಿ:ಗ್ರಾಮದ ಶ್ರೀರಾಮ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ಮೂರ್ತಿಯ ಅನಾವರಣ ಮತ್ತು ಹನುಮಾನ ಮೂರ್ತಿಯ ಪ್ರತಿಷ್ಠಾಪನೆ ಕಳಸಾರೋಹಣ, ದಾನಿಗಳಿಗೆ ಸತ್ಕಾರ ಹಾಗೂ ಅನ್ನಸಂತರ್ಪನೆ ಸಮಾರಂಭ ಮಾ.10ರಂದು ನಡೆಯಲಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀರಾಮ ಮತ್ತು ಹನುಮಾನ ಮೂರ್ತಿಗೆ ಮಹಾಭಿಷೇಕ, ಮಹಾಪೂಜೆ, ಹೋಮ ನಡೆದ ಬಳಿಕ ಸ್ಥಳೀಯ ಯಲ್ಲಾಲಿಂಗೇಶ್ವರ ಮಠದಿಂದ ಶ್ರೀ ಆಂಜನೇಯ ಮೂರ್ತಿಯ ಮತ್ತು ಕಳಸ, ಕುಂಭ, ಆರತಿ ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಜರುಗಿದ ನಂತರ …

Read More »

ಎ. 11 ರಿಂದ ‘ಸಿದ್ಧ ಸಮಾಧಿ ಯೋಗ-ಎಸ್‍ಎಸ್‍ವೈ’ ಶಿಬಿರ

ಎ. 11 ರಿಂದ ಸಿದ್ಧ ಸಮಾಧಿ ಯೋಗ ಶಿಬಿರ ಮೂಡಲಗಿ: ಋಷಿ ಸಂಸ್ಕøತಿ ವಿದ್ಯಾ ಕೇಂದ್ರ ಬೆಂಗಳೂರಿನ, ಶಾಖೆ ಮೂಡಲಗಿಯ ಅರುಣ ಗುರೂಜೀ ಅವರ ಮಾರ್ಗದರ್ಶನದಲ್ಲಿ ಎ. 11 ರಿಂದ ಸಾಯಂಕಾಲ 5.30ಕ್ಕೆ ‘ಸಿದ್ಧ ಸಮಾಧಿ ಯೋಗ-ಎಸ್‍ಎಸ್‍ವೈ’ ಶಿಬಿರವನ್ನು ಸ್ಥಳೀಯ ಶಿವಬೋಧರಂಗ ಮಠದ ಆವರಣದಲ್ಲಿ ಏರ್ಪಡಿಸಿರುವರು. ಪ್ರಾಣಾಯಾಮ, ಧ್ಯಾನ, ಯೋಗಾಸನ, ಸೂರ್ಯ ನಮಸ್ಕಾರ, ಗಾಯತ್ರಿ ಮಹಾಮಂತ್ರೋಪದೇಶ ಇವುಗಳ ಜೋತೆಗೆ ಉದ್ವೇಗ, ಒತ್ತಡ ನಿವಾರಣೆ, ಆಹಾರ ಕ್ರಮ, ವಿವಿಧ ಕಾಯಿಲೆಗಳ ನಿವಾರಣೋಪಾಯಗಳಿಗೆ …

Read More »

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ‘ವಿಶ್ವ ಆರೋಗ್ಯ ದಿನಾಚರಣೆ’ ಆಚರಣೆ ‘ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’

  ಮೂಡಲಗಿ: ‘ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದು ಡಾ. ತಿಮ್ಮಣ್ಣ ಗಿರಡ್ಡಿ ಹೇಳಿದರು. ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಪುರಸಭೆಯ ಸಹಯೋಗದಲ್ಲಿ ಗುರುವಾರ ಆಚರಿಸಿದ ವಿಶ್ವ ಆರೋಗ್ಯ ದಿನಾಚರಣೆ ಸಮಾರಂಭ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ರೋಗವು ದೇಹದಲ್ಲಿ ವ್ಯಾಪಿಸದಂತೆ ಎಚ್ಚರವಹಿಸುವುದು ಮತ್ತು ಮುಂಜಾಗೃತೆ ತೆಗೆದುಕೊಳ್ಳುವುದು ಅವಶ್ಯವಿದೆ ಎಂದರು. ಹೃದಯ, ಕಿಡ್ನಿ, …

Read More »

ಸಚಿವ ಉಮೇಶ ಕತ್ತಿಯಿಂದ ಬೆಂಕಿ ಹಚ್ಚುವ ಕೆಲಸ : ಮುರುಘರಾಜೇಂದ್ರ ಮಹಾಸ್ವಾಮಿಗಳು ಕಿಡಿ ಜಾರಕಿಹೊಳಿ ಸಹೋದರರು ಮನಸ್ಸು ಮಾಡಿದರೆ ಮಾತ್ರ ಗೋಕಾಕ ಜಿಲ್ಲಾ ರಚನೆ ಗೋಕಾಕ ಜಿಲ್ಲೆಯಾಗದಿದ್ದಲ್ಲಿ ಎಲ್ಲ ಅಹಿತಕರ ಘಟನೆಗಳಿಗೆ ಸರ್ಕಾರ ಮತ್ತು ಉಮೇಶ ಕತ್ತಿ ಕಾರಣ

  ಗೋಕಾಕ : ಬೆಳಗಾವಿ ಜಿಲ್ಲಾ ವಿಭಜನೆ ಕುರಿತಂತೆ ಅಪ್ರಬುದ್ಧ ಹೇಳಿಕೆ ನೀಡುವ ಮೂಲಕ ಗೋಕಾಕ ತಾಲೂಕಿನ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಸಚಿವ ಉಮೇಶ ಕತ್ತಿ ಅವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಚಿವರಿಗೆ ಮುಖ್ಯಮಂತ್ರಿಗಳು ತಾಕೀತು ಮಾಡಬೇಕು. ಗೋಕಾಕನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಕೂಡಲೇ ಘೋಷಿಸುವಂತೆ ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಸರ್ಕಾರವನ್ನು ಆಗ್ರಹಿಸಿದರು. ಗುರುವಾರದಂದು ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ …

Read More »

ಯಾದವಾಡದಲ್ಲಿ 75 ಲಕ್ಷ ರೂ. ವೆಚ್ಚದ ನೂತನ ಪಿಎಚ್‍ಸಿ ಕಟ್ಟಡಕ್ಕೆ ಗುದ್ದಲಿ ಪೂಜೆ

ಯಾದವಾಡದಲ್ಲಿ 75 ಲಕ್ಷ ರೂ. ವೆಚ್ಚದ ನೂತನ ಪಿಎಚ್‍ಸಿ ಕಟ್ಟಡಕ್ಕೆ ಗುದ್ದಲಿ ಪೂಜೆ ಮೂಡಲಗಿ : ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ದೂರದೃಷ್ಟಿಯ ನಾಯಕತ್ವದಿಂದಾಗಿ ಇಡೀ ಅರಭಾವಿ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಎಲ್ಲ ಕ್ಷೇತ್ರಗಳಿಗೂ ಹಾಗೂ ಸರ್ವ ಜನಾಂಗದ ಏಳ್ಗೆಗಾಗಿ ಶ್ರಮಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಅಭಿವೃದ್ಧಿಯ ಧೃವತಾರೆ ಎಂದು ಯಾದವಾಡ ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ ಹೇಳಿದರು. ಬುಧವಾರದಂದು ತಾಲೂಕಿನ ಯಾದವಾಡ …

Read More »

ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಗೆ ರೂ.2.81 ಕೋಟಿ ಲಾಭ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಬಸವೇಶ್ವರ ಅರ್ಬನ ಕ್ರೆಡಿಟ ಸೌಹಾರ್ದ ಸಹಕಾರಿ ಸಂಸ್ಥೆಯು ಸತತ 31 ವರ್ಷಗಳಿಂದ ಶೇಕಡಾ 100% ವಸೂಲಾತಿಯೊಂದಿಗೆ ಮಾರ್ಚ ಅಂತ್ಯಕ್ಕೆ ರೂ 2.81 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಾಳಪ್ಪ ಬಸಪ್ಪ ಬೆಳಕೂಡ ತಿಳಿಸಿದರು. ಸಂಸ್ಥೆಯ ಪ್ರಗತಿಯ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸೊಸೈಟಿಯು ಸದ್ಯ 79.20 ಲಕ್ಷ ರೂ ಶೇರು ಬಂಡವಾಳ, ರೂ.34.70 …

Read More »

*ತೊಂಡಿಕಟ್ಟಿ ಪಿಕೆಪಿಎಸ್ ದಲ್ಲಿ ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ*

  ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನಾಚರಣೆಯನ್ನು ಆಚರಿಸಿದರು. ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಕ ಸಿ. ಎಂ. ಹಿರೇಮಠ ಅವರು ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ಈ ಸಮಯದಲ್ಲಿ ಸಂಘದ ಸಿಬ್ಬಂದಿಗಳಾದ ಜನಾರ್ಧನ್ ದಾಸರ, ಮಹಾದೇವ ಮಡಿವಾಳ,ವಿಠ್ಠಲ್ ಉದ್ದಪ್ಪನ್ನವ ಮತ್ತಿತರು ಇದ್ದರು

Read More »

ಹಳ್ಳೂರ ಶ್ರೀ ಬಸವೇಶ್ವರ ಸೊಸಾಯಿಟಿವು 2022ರ ಮಾರ್ಚ ಅಂತ್ಯಕ್ಕೆ ರೂ. 51.52 ಲಕ್ಷ ಲಾಭ

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಪ್ರತಿಷ್ಠಿತ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿವು 2022ರ ಮಾರ್ಚ ಅಂತ್ಯಕ್ಕೆ ರೂ. 51.52 ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಸೊಸಾಯಿಟಿ ಮುಖ್ಯ ಕಾರ್ಯನಿರ್ವಾಹಕ ಕೆಂಪಣ್ಣ ಹುಬ್ಬಳ್ಳಿ ತಿಳಿಸಿದ್ದಾರೆ. ಸೊಸಾಯಿಟಿ ಪ್ರಗತಿ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ ಅವರು, ಸದ್ಯ ಸೊಸಾಯಿಟಿವು ರೂ. 77. 26 ಲಕ್ಷ  ಶೇರು ಬಂಡವಾಳ, ರೂ. 2.82 ಕೋಟಿ ನಿಧಿಗಳು, ರೂ. 24.93 ಕೋಟಿ ಠೇವುಗಳು, …

Read More »

ಸಹಕಾರಿ ಸಂಸ್ಥೆಗಳು ರೈತರ ಆರ್ಥಿಕ ಅಭಿವೃದ್ದಿಗೆ ಪೂರಕವಾಗಲಿವೆ – ಸಂಸದ ಈರಣ್ಣ ಕಡಾಡಿ ಕರೆ.

  ಮೂಡಲಗಿ: ಸದೃಡ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಸ್ಥೆಗಳ ಪಾತ್ರ ಅಮೂಲ್ಯವಾದದ್ದು. ಇಂತಹ ಸಹಕಾರಿ ತತ್ವದ ಮೂಲಕ ಸಂಘ, ಸಂಸ್ಥೆಗಳು ರೈತರ ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ಕಲ್ಲೋಳಿಯ ಶಿವಾ ಕೋ ಆಫ್ ಕ್ರೇಡಿಟ್ ಸೋಸಾಯಿಟಿ ಲಿ ಕಲ್ಲೋಳಿ ಇದರ ಪ್ರಥಮ ಶಾಖೆಯನ್ನು ಲೋಳಸೂರ ಗ್ರಾಮದಲ್ಲಿ ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಸಹಕಾರಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಕೇಂದ್ರ …

Read More »

2023-24 ರ ವೇಳೆಗೆ ವಾರ್ಷಿಕ 15 ಮಿಲಿಯನ್ ಟನ್‍ನಷ್ಟು ಬಯೋ ಗ್ಯಾಸ್ ಉತ್ಪಾದನೆ

ಮೂಡಲಗಿ: ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ-2018ರ ಅನ್ವಯ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ಉದ್ಯೋಗವನ್ನು ಸೃಷ್ಟಿಸುವುದು, ತ್ಯಾಜ್ಯ ನಿರ್ವಹಣೆ ಸೇರಿದಂತೆ ರೈತರಿಗೆ ಉತ್ತಮ ಸಂಭಾವನೆ ಉದ್ದೇಶಗಳೊಂದಿಗೆ ಜೈವಿಕ ಇಂಧನವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 2025 ರ ವೇಳೆಗೆ ಶೇ 20% ರಷ್ಟು ಪೆಟ್ರೋಲ್‍ನಲ್ಲಿ ಎಥೆನಾಲ್ ಮಿಶ್ರಣ ಮತ್ತು ಡೀಸೆಲ್‍ನಲ್ಲಿ ಶೇ 5% ಜೈವಿಕ ಡೀಸೆಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ …

Read More »