Breaking News
Home / ತಾಲ್ಲೂಕು (page 168)

ತಾಲ್ಲೂಕು

ಹಾಲು ಉತ್ಪಾದಕರ ಸಹಕಾರಿ ಸಂಘದ ಸನ್ 2020-21ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಸನ್ 2020-21ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಮಂಗಳವಾರ ಸೆ.28ರಂದು ಮುಂಜಾನೆ 11ಗಂಟೆಗೆ ಸಂಘದ ಅಧ್ಯಕ್ಷ ಹನುಮಂತ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ. ಸಂಘದ ವಾರ್ಷಿಕ ಆಯಾ-ವ್ಯಯದ ಅನುಮೋದನೆ, ವಾರ್ಷಿಕ ವರದಿ, 2020-21ನೇ ಸಾಲಿನ ನಿವ್ಹಳ ಲಾಭದ ವಿಭಾಗಣೆ ಸೇರಿದಂತೆ ಸಂಘದ ಸಮಗ್ರ ಪ್ರಗತಿಗಾಗಿ ಹಲವಾರು ವಿಷಯಗಳನ್ನು ಚರ್ಚಿಸಲಿದ್ದು, ಸಂಘದ ಆಡಳಿತ ಮಂಡಳಿ …

Read More »

ಸೆ.15ರ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಅನುಷ್ಠಾನಗೊಳಿಸಿ

ಮೂಡಲಗಿ: ಸೆ.15ರ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದಾಗಿ ಮಾರ್ಚ 15 ರಂದು ವಿಧಾನಸೌಧದ ಅಧಿವೇಶನದಲ್ಲಿ ಕೊಟ್ಟ ಮಾತಿನಂತೆ ಸರ್ಕಾರ ನಡೆಯಲಿ ಎಂದು ನೆನಪಿಸಲು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿಯಿಂದ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಬುಧವಾರ ಹಕ್ಕೊತ್ತಾಯದ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ದೀಪಕ ಜುಂಜುರವಾಡ ಮಾತನಾಡಿ, ಒಂದು ವೇಳೆ ವಿಳಂಬವಾದರೆ ಅಕ್ಟೋಬರ 1ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಪಂಚಮಸಾಲಿ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ನಿರಂತರ …

Read More »

ಆಹಾರ ಪದಾರ್ಥಗಳಲ್ಲಿ ಸತ್ವ ಹೆಚ್ಚಿಸಲು ಸಾವಯವ ಕೃಷಿಗೆ ಮಹತ್ವ ನೀಡಿ- ಸಂಸದ ಈರಣ್ಣ ಕಡಾಡಿ

ಆಹಾರ ಪದಾರ್ಥಗಳಲ್ಲಿ ಸತ್ವ ಹೆಚ್ಚಿಸಲು ಸಾವಯವ ಕೃಷಿಗೆ ಮಹತ್ವ ನೀಡಿ- ಸಂಸದ ಈರಣ್ಣ ಕಡಾಡಿ ಮೂಡಲಗಿ: ಹೆಚ್ಚು ಇಳುವರಿ ಪಡೆಯಲು ರೈತರು ಸತತವಾಗಿ ರಸಗೊಬ್ಬರ ಬಳಕೆ ಮಾಡುವುದರಿಂದ ನಿಧಾನವಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಭೂಮಿ ಬರಡಾಗುವ ಅಪಾಯವಿದೆ ಹಾಗೂ ಆಹಾರ ಪದಾರ್ಥಗಳಲ್ಲಿ ಕೂಡ ಸತ್ವ ಕಳೆದುಕೊಳ್ಳುತ್ತಿರುವುದು ಆಂತಕಕಾರಿ ವಿಷಯ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ಕಲ್ಲೋಳಿ ಪಟ್ಟಣದ …

Read More »

ಚಾರ್ಟ್‌ಟ್‌ ಅಕೌಂಟಂಟ್‌ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣ

  ಮೂಡಲಗಿ: ಮೂಡಲಗಿ ಧರ್ಮಾಜಿ ಪೋಳ ಹಾಗೂ ಧರ್ಮಟ್ಟಿ ಗ್ರಾಮದ ಸಂತೋಷ ರಾಜು ಹೊಸಮನಿ ನವದೆಹಲಿಯ ದಿ ಇನ್ಸಸ್ಟಿಟ್‌ ಆಫ್‌ ಚಾರ್ಟ್‌ಟ್‌ ಅಕೌಂಟಂಟ್ಸ್‌ ಸಂಸ್ಥೆ ನಡೆಸುವ ಚಾರ್ಟ್‌ಟ್‌ ಅಕೌಂಟಂಟ್‌ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೂಡಲಗಿ ತಾಲ್ಲೂಕಿಗೆ ಹೆಸರು ತಂದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಸ್ಥಳೀಯ ಎಂಇಎಸ್‌ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಮ್‌ ಪದವಿ ಮುಗಿಸಿದ್ದಾರೆ. ಧರ್ಮಾಜಿ ಪೋಳ ತಂದೆ ಶಿವರುದ್ರಪ್ಪ ಕೃಷಿಕರಾಗಿದ್ದಾರೆ. ಗೋಕಾಕದ ಚಾರ್ಟ್‌ಡ್‌ ಅಕೌಂಟೆಂಟ್‌ ಪ್ರದೀಪ ಇಂಡಿ ಮತ್ತು ಸೈದಪ್ಪ ಗದಾಡಿ ಅವರ …

Read More »

ಪುರಸಭೆ ವ್ಯಾಪ್ತಿಯ ಟೇಲರಿಂಗ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ

  ಮೂಡಲಗಿ: ಕಾರ್ಮಿಕ ಇಲಾಖೆವತಿಯಿಂದ ಮಂಗಳವಾರ ಪುರಸಭೆ ವ್ಯಾಪ್ತಿಯ ಟೇಲರಿಂಗ ವೃತ್ತಿಯ ಅಸಂಘಟಿತ 110 ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಕೊರೋನಾ ಸಂಕಷ್ಟದಲ್ಲಿದ್ದ ಅಸಂಘಟಿತ ಕಾರ್ಮಿಕರಿಗೆ ಕಿಟ್ ವಿತರಿಸಿದ್ದು ಆಸರೆಯಾಗಿದೆ ಇದರ ಸದುಪಯೋಗ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಗಫಾರ ಡಾಂಗೆ, ಟೇಲರಿಂಗ್ …

Read More »

ಕೆಮ್ಮನಕೋಲ ತಾಪಂ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ

ಬೆಟಗೇರಿ:ಸನ್2020-21ನೇ ಸಾಲಿನ ಗೋಕಾಕ ತಾಲೂಕಾ ಪಂಚಾಯತಿ 15ನೇ ಹಣಕಾಸು ಯೋಜನೆಯಡಿ ಒಟ್ಟು 7.35 ಲಕ್ಷ ರೂ.ಗಳ ಅನುದಾನಡಿಯಲ್ಲಿ ಕೆಮ್ಮನಕೋಲ ತಾಪಂ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಕೆಮ್ಮನಕೋಲ ತಾಪಂ ಸದಸ್ಯೆ ನೀಲವ್ವ ಶಿವಲಿಂಗಪ್ಪ ಬಳಿಗಾರ ಹೇಳಿದರು. ಕೆಮ್ಮನಕೋಲ ತಾಪಂ ವ್ಯಾಪ್ತಿಯ ಬಿಲಕುಂದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂ.ಗಳ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ …

Read More »

ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು:ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ

ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು:ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಬೆಟಗೇರಿ: ಹಿಂದೂ ಪರಂಪರೆಯಲ್ಲಿ ಪ್ರತಿ ದೇವರ ಅವತಾರದ ಹಿಂದೆ ಪೌರಾಣಿಕ ಕತೆಗಳಿವೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಭಾಗೋಜಿಕೊಪ್ಪ ಹಿರೇಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸೆ.14 ರಂದು ನಡೆದ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, …

Read More »

ಮೂಡಲಗಿ ಪುರಸಭೆ ಕಾರ್ಮಿಕರಿಗೆ ಆಹಾರ ದಾನ್ಯಗಳ ಕಿಟ್ ವಿತರಣೆ

ಮೂಡಲಗಿ ಪುರಸಭೆ ಕಾರ್ಮಿಕರಿಗೆ ಆಹಾರ ದಾನ್ಯಗಳ ಕಿಟ್ ವಿತರಣೆ ಮೂಡಲಗಿ : ಕಾರ್ಮಿಕ ಇಲಾಖೆಯಿಂದ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್‍ಗಳನ್ನು ಅರಭಾಂವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶದಂತೆ ವಿತರಿಸಲಾಯಿತು ಎಂದು ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಹೇಳಿದರು. ಸೋಮವಾರದಂದು ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು …

Read More »

ರೈತ ಪ್ರಚಾರ ಸಮಿತಿಯ ಅಧ್ಯಕ್ಷರ ನೇಮಕ

ಮೂಡಲಗಿ: ಪಟ್ಟಣದ ಶಿವಬಸು ಮೋರೆಯವರನ್ನು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಬೆಳಗಾವಿ ರೈತ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ನೇಮಕ ಮಾಡಿ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಸ ನಾಯ್ಕ ಆದೇಶ ಪತ್ರವನ್ನು ನೀಡಿದರು.

Read More »

ಬೆಟಗೇರಿ ಗ್ರಾಮದ ಅಸಂಘಟಿತ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಬೆಟಗೇರಿ ಗ್ರಾಮದ ಅಸಂಘಟಿತ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಬೆಟಗೇರಿ:ಶ್ರಮಿಕರ ಬದುಕಿಗೆ ನೆರವಿನ ಆಸರೆಯಾಗಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗುತ್ತಿದೆ. ಇಲ್ಲಿಯ ಅಸಂಘಟಿತ ಕಾರ್ಮಿಕರು ಆಹಾರ ಧಾನ್ಯಗಳ ಕಿಟ್ ಸದುಪಯೊಗ ಪಡೆದುಕೊಳ್ಳಬೇಕು ಎಂದು ಗೋಕಾಕ ಎನ್‍ಎಸ್‍ಎಫ್ ಪ್ರತಿನಿಧಿ ಲಕ್ಕಪ್ಪ ಲೋಕೂರಿ ಹೇಳಿದರು. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಂತೆ ಸೆ.13ರಂದು ಬೆಟಗೇರಿ …

Read More »