Breaking News
Home / ತಾಲ್ಲೂಕು (page 174)

ತಾಲ್ಲೂಕು

ದಾಲ್ಮೀಯಾ ಸಿಮೇಂಟ್ ಕಾರ್ಖಾನೆ ಮತ್ತು ಗಣಿಗಾರಿಕೆ ವಿಸ್ತರಣೆಯ ಸಾರ್ವಜನಿಕರ ಹವಾಲು ಸಭೆ

ಮೂಡಲಗಿ: ದಾಲ್ಮೀಯಾ ಸಿಮೇಂಟ್ ಕಾರ್ಖಾನೆ ಮತ್ತು ಗಣಿಗಾರಿಕೆ ವಿಸ್ತರಣೆಯ ಸಾರ್ವಜನಿಕರ ಹವಾಲು ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳ ಹೇಳಿಕೆಯ ವಿಡಿಯೋ ರೀಕಾಡ್ ಹಾಗೂ ಮನವಿಗಳನ್ನು ಪರಿಸರ ಮಂತ್ರಾಯ ಭಾರತ ಸರ್ಕಾರಕ್ಕೆ ವರದಿಯನ್ನು ಕಳಿಸಲಾಗುವುದು ಎಂದು ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು. ಶುಕ್ರವಾರದಂದು ತಾಲೂಕಿನ ಯಾದವಾಡ ದಾಲ್ಮೀಯಾ ಸಿಮೆಂಟ್ ಕಾರ್ಖಾನೆಯ ಹತ್ತಿರ ಆಯೋಜಿಸಲಾದ ಕಾರ್ಖಾನೆಯ ವಿಸ್ತರಣೆ ಬಗ್ಗೆ ಪರಿಸರ ಸಾರ್ವಜನಿಕರ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ ಅಭಿಪ್ರಾಯಗಳನ್ನು …

Read More »

ಮಗುವಿನ ಸರ್ವಾಂಘೀನ ಅಭಿವೃದ್ಧಿ ಹೊಂದಿದಾಗ ಮಾತ್ರ ಶೈಕ್ಷಣಿಕ ಕಾಳಜಿಯ ಬಗ್ಗೆ ಗುರ್ತಿಸಲು ಸಾಧ್ಯವಾಗುವದು – ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ

ಮೂಡಲಗಿ: ಮಕ್ಕಳ ಕಲಿಕೆ ಫಲಪ್ರಧವಾಗುವ ನಿಟ್ಟಿನಲ್ಲಿ ಶಿಕ್ಷಕರ, ವಿದ್ಯಾರ್ಥಿಯ ಹಾಗೂ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಮಗುವಿನ ಸರ್ವಾಂಘೀನ ಅಭಿವೃದ್ಧಿ ಹೊಂದಿದಾಗ ಮಾತ್ರ ಶೈಕ್ಷಣಿಕ ಕಾಳಜಿಯ ಬಗ್ಗೆ ಗುರ್ತಿಸಲು ಸಾಧ್ಯವಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಶನಿವಾರ ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ‘ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದುಕೊಂಡಿರುವ ಶಾಲಾ ಮುಖ್ಯಸ್ಥರ ಸನ್ಮಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕ ವಲಯವು ಪ್ರತಿ ವರ್ಷವು ಪ್ರತಿಯೊಂದು …

Read More »

ಕಾರ್ಮಿಕ ರಾಷ್ಟ್ರೀಯ ಡಾಟಾ ಬೇಸ್ ಇ-ಶ್ರಮ ಯೋಜನೆ ಜಾರಿ

ಮೂಡಲಗಿ: ಕಾರ್ಮಿಕರ ಬಗ್ಗೆ ಕಾಳಜಿಯಿಂದ ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕ ರಾಷ್ಟ್ರೀಯ ಡಾಟಾ ಬೇಸ್ ಇ-ಶ್ರಮ ಯೋಜನೆ ಜಾರಿಗೆ ಬಂದಿದ್ದು, ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರು ನೊಂದಣಿ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ಆ 27 ರಂದು ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಕಲ್ಲೋಳಿ …

Read More »

ಕಲ್ಲೋಳಿ: ವಿವಿಧ ಬೆಳೆಗಳ ತರಬೇತಿ ಗೋವಿನಜೋಳ ಮತ್ತು ಸೋಯಾಅವರೆ ಕ್ಷೇತ್ರೋತ್ಸವ

ಕಲ್ಲೋಳಿ: ವಿವಿಧ ಬೆಳೆಗಳ ತರಬೇತಿ ಗೋವಿನಜೋಳ ಮತ್ತು ಸೋಯಾಅವರೆ ಕ್ಷೇತ್ರೋತ್ಸವ ಮೂಡಲಗಿ: ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಸಂಶೋಧನಾ ಕೇಂದ್ರ ಕಲ್ಲೋಳಿ ಇವುಗಳ ಸಂಯುಕ್ತಾಶ್ರಯಲ್ಲಿ ಗೋವಿನಜೋಳ ಮತ್ತು ಸೋಯಾಅವರೆ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮ ಸೋಮವಾರ ಆ 30 ರಂದು ಬೆಳಿಗ್ಗೆ 9.00 ಗಂಟೆಗೆ ಕಲ್ಲೋಳಿ ಪಟ್ಟಣದ ಬೀಜ ಸಂಸ್ಕರಣಾ ಘಟಕ, ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಯಲಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯತಿಥಿಗಳಾಗಿ ಅರಭಾವಿ …

Read More »

ಜಾನುವಾರ ಸಂತೆ ಭಾನುವಾರದ ಬದಲು ಬುಧವಾರ ಅನುಮತಿಗೆ ಮನವಿ

ಜಾನುವಾರ ಸಂತೆ ಭಾನುವಾರದ ಬದಲು ಬುಧವಾರ  ಅನುಮತಿಗೆ ಮನವಿ ಮೂಡಲಗಿ : ಪ್ರತಿ ಶನಿವಾರ ಹಾಗೂ ಭಾನುವಾರ ವಿಕೆಂಡ್ ಕಪ್ರ್ಯೂ ಜ್ಯಾರಿ ಇರುವ ಈ ದಿನಗಳಲ್ಲೇ ನಡೆಯುವ ಇಲ್ಲಿನ ಪ್ರಖ್ಯಾತ ಜಾನುವಾರು ಸಂತೆ ಕೊರೋನಾ ಮಹಾಮಾರಿಯಿಂದ ಸಂತೆ ಸ್ಥಗಿತಗೊಂಡು ವ್ಯಾಪಾರಸ್ಥರು,ದಲ್ಲಾಳಿಗಳು,ಗ್ರಾಮಸ್ಥರು ಆರ್ಥಿಕ ಸಂಕಷ್ಟಕ್ಕೀಡಾಗಿ ಉಪ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಪುರಸಭೆ ಸದಸ್ಯ ಹುಸೇನಸಾಬ ಶೇಖ ಹೇಳಿದರು. ತಹಸೀಲದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ಸಂತೆಯಿಂದ ಅದೆಷ್ಟೋ ಬಡಬಗ್ಗರು …

Read More »

ಚುಳಕಿ ವೀರಸಂಗಯ್ಯ ಶ್ರೀಗಳು ಲಿಂಗೈಕ್ಯ

ಚುಳಕಿ ವೀರಸಂಗಯ್ಯ ಶ್ರೀಗಳು ಲಿಂಗೈಕ್ಯ ಬೆಟಗೇರಿ:ಸಮೀಪದ ಮಮದಾಪೂರ ಶ್ರೀಮಠದಲ್ಲಿ ವಾಸ್ತವ್ಯವಾಗಿದ್ದ ಚುಳಕಿ ಗ್ರಾಮದ ವೀರಸಂಗಯ್ಯ ಸ್ವಾಮಿಜಿ(78) ಅವರು ಶನಿವಾರ ಆ.21ರಂದು ಲಿಂಗೈಕ್ಯರಾದರು. ಸ್ಥಳೀಯ ಶ್ರೀಮಠದ ಮೌನಮಲ್ಲಿಕಾರ್ಜುನ ಶ್ರೀಗಳು, ತೊರಗಲ್ಲದ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಜಿ, ಜಮಖಂಡಿ ಗೌರಿಶಂಕರ ಶ್ರೀ, ಶಿರಕೊಳದ ಗುರುಸಿದ್ಧೇಶ್ವರ ಶಿವಾಚಾರ್ಯ ಶ್ರೀ, ಹೊಸೂರದ ಗಂಗಾಧರ ಸ್ವಾಮಿಜಿ, ಮಲ್ಲಾಪೂರದ ಚಿದಾನಂದ ಸ್ವಾಮಿಜಿ, ಮಮದಾಪೂರದ ಚರಂತೇಶ್ವರ ಸ್ವಾಮಿಜಿ, ಬಬಲಾದಿಮಠದ ಸ್ವಾಮಿಜಿ, ಗೋಕಾಕ ಬ್ರಹ್ಮನಂದ ಸ್ವಾಮಿಜಿ ಸೇರಿದಂತೆ ಹರ, ಗುರು, ಚರಮೂರ್ತಿಗಳು ಹಾಗೂ …

Read More »

ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿ- ಸಂಸದ ಈರಣ್ಣ ಕಡಾಡಿ ಸ್ವಾಗತ

ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿ- ಸಂಸದ ಈರಣ್ಣ ಕಡಾಡಿ ಸ್ವಾಗತ ಮೂಡಲಗಿ: ಕೇಂದ್ರ ಸಚಿವ ಸಂಪುಟವು 2021-22ನೇ ಸಾಲಿನ ಕಬ್ಬಿನ ಎಫ್.ಆರ್.ಪಿ. ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 290 ರೂ.ಗೆ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಸ್ವಾಗತಾರ್ಹ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಬುಧವಾರ ಆ 25 ರಂದು ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು …

Read More »

ಸರಕಾರಿ ಯೋಜನೆಗಳನ್ನು ಸೂಕ್ತ ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಂಡು ಜೀವನ ಸಾಗಿಸಬೇಕು- ಬಿಇಒ ಅಜಿತ ಮನ್ನಿಕೇರಿ

  ಮೂಡಲಗಿ: ಸರಕಾರವು ಹತ್ತು ಹಲವು ಯೋಜನೆಗಳನ್ನು ಜಾರಿಯಲ್ಲಿ ತಂದಿದೆ. ಅವುಗಳನ್ನು ಸೂಕ್ತ ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಂಡು ಜೀವನ ಸಾಗಿಸಬೇಕು. ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು. ಅವರಿಗೆ ಸೂಕ್ತ ರೀತಿಯಲ್ಲಿ ಶೈಕ್ಷಣಿಕವಾಗಿ ಭದ್ರ ಬುನಾದಿ ಹಾಕಿಕೊಟ್ಟಾಗ ಮಾತ್ರ ಭವಿಷ್ಯತ್ತಿನ ಭವ್ಯ ಭಾರತದ ಕನಸು ನನಸಾಗುವದು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಸಮೀಪದ ನಾಗನೂರಿನ ಮೇಘಾ ವಸತಿ ಶಾಲೆಯಲ್ಲಿ ಜರುಗಿದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಪೂರ್ವಭಾವಿ …

Read More »

ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದ -ಸಂಸದ ಈರಣ್ಣ ಕಡಾಡಿ

ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದ -ಸಂಸದ ಈರಣ್ಣ ಕಡಾಡಿ ಮೂಡಲಗಿ: ಕೋವಿಡ್ ಎರಡನೇ ಅಲೆ ಕಾರಣ ಸಂಕಷ್ಠದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‍ಗಳನ್ನು ಭಾರತ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿತರಿಸಿದರು. ಮಂಗಳವಾರ ಆ …

Read More »

9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಭವ್ಯ ಸ್ವಾಗತ

ಬೆಟಗೇರಿ:ಕರೊನಾ ಸೋಂಕಿನ ಭೀತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಸರ್ಕಾರದ ನಿರ್ದೇಶನದಂತೆ ಆರಂಭವಾದ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಭವ್ಯ ಸ್ವಾಗತ ಕೋರುವ ಕಾರ್ಯಕ್ರಮ ಸೋಮವಾರ ಆ.23 ರಂದು ನಡೆಯಿತು. ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಮಾತನಾಡಿ, ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ನಿಯಮಗಳನ್ನು ಶಾಲಾ ಮಕ್ಕಳಿಗೆ …

Read More »