ಬೆಳಗಾವಿ: ಬೆಳಗ್ಗೆ ಮೂರು ಕೊರೋನಾ ಪ್ರಕರಣ ಕಂಡು ಬಂದಿದ್ದ ಬೆಳಗಾವಿ ಜಿಲ್ಲೆಯಲ್ಲಿ ಸಂಜೆ ಬುಲೆಟಿನ್ ತುಸು ಬಿಡುವು ನೀಡಿದೆ. ಇದುವರೆಗೆ ಒಟ್ಟು 72 ಕೊರೋನ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ನಿನ್ನೆ ಒಂದೇ ದಿನ 14 ಪ್ರಕರಣ ಧುತ್ತೆಂದು ಕಂಡು ಬಂದಿದ್ದ ಬೆಳಗಾವಿ ಜಿಲ್ಲೆಯಲ್ಲಿ ಕರೋನ ಮಹಾಮಾರಿ ಹಿರೇಬಾಗೇವಾಡಿ, ಕುಡಚಿ, ಸಂಕೇಶ್ವರ ಮುಂತಾದ ಪ್ರದೇಶಗಳಲ್ಲಿ ಜನತೆಯನ್ನು ಇನ್ನಿಲ್ಲದಂತೆ ಕಂಗೆಡಿಸಿದೆ.
Read More »ಗೇಣುದ್ದ ಹೊಲಕ್ಕಾಗಿ ದಾಯಾದಿ ಜಗಳ ಕೊಲೆಯಲ್ಲಿ ಪರ್ಯಾವಸನಗೊಂಡಿದೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಂತಾಮಣಿ ರಾಮಪ್ಪ ಮೇಟಿ ( 55) ಕೊಲೆಯಾದವರು. ಅವರ ಅಣ್ಣನ ಮಗ ಗೋಪಾಲ ಭೀಮಪ್ಪ ಮೇಟಿ – (35) ಆರೋಪಿ. ಬೆಳೆ ಸಂರಕ್ಷಣೆಗಾಗಿ ಲೈಸನ್ಸ್ ಪಡೆದಿದ್ದ ಬಂದೂಕಿನಿಂದ ಕೊಲೆಗೈಯಲ್ಲಾಗಿದೆ. ಎರಡು ನಳಿಕೆಯ ಬಂದೂಕಿನಿಂದ ನೇರವಾಗಿ ಎದೆಗೆ ಗುಂಡಿಕ್ಕಲಾಗಿದ್ದು, ಎರಡು ಗುಂಡುಗಳು ಎದೆಯೊಳಗೆ ತೂರಿ ಹೋಗಿದೆ. ಚಿಂತಾಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ಒಯ್ದಾಗ …
Read More »ಬಾಲಚಂದ್ರ ಜಾರಕಿಹೊಳಿ ಅವರ ಪುಣ್ಯದ ಕೆಲಸದಲ್ಲಿ ನಾವೆಲ್ಲರೂ ಭಾಗಿಯಾಗೋಣ-ಮುರನಾಳ
ಮೂಡಲಗಿ: ಲಾಕ್ ಡೌನ್‍ದಂತಹ ಸಂಕಷ್ಟದ ವೇಳೆಯಲ್ಲಿ ಕ್ಷೇತ್ರದ ಜನರ ಸಹಾಯಕ್ಕೆ ಮುಂದೆ ಬಂದು ಅರಭಾಂವಿ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ದಿನ ನಿತ್ಯದ ಆಹಾರ ಧಾನ್ಯಗಳನ್ನು ನೀಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಮಾದರಿಯಾಗಿದೆ. ಇವರು ಮಾಡುತ್ತಿರುವ ಪುಣ್ಯದ ಕೆಲಸದಲ್ಲಿ ನಾವು ಭಾಗಿಯಾಗಿರುವ ಸಾರ್ಥಕದ ಕಾರ್ಯವಾಗಿದೆ ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ತಿಳಿಸಿದರು. ಶುಕ್ರವಾರದಂದು ತಾಲೂಕಿನ ನಾಗನೂರ ಪಟ್ಟಣದಲ್ಲಿ ಶಾಸಕ ಮತ್ತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು …
Read More »ಬೆಳಗಾವಿಯ 3 ಸೇರಿ ರಾಜ್ಯದಲ್ಲಿ ಇಂದು 11 ಜನರಿಗೆ ಕೊರೋನಾ ಸೋಂಕು
ಬೆಳಗಾವಿ – ರಾಜ್ಯದಲ್ಲಿ ಇಂದು ಹೊಸದಾಗಿ 11 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಇವರಲ್ಲಿ ಮಂಡ್ಯದ 8 ಹಾಗೂ ಬೆಳಗಾವಿ ರಾಯಬಾಗದ ಮೂವರು ಸೇರಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೊಂಕಿತರ ಸಂಖ್ಯೆ 576ಕ್ಕೇರಿದೆ. ಬೆಳಗಾವಿಯಲ್ಲಿ 72ಕ್ಕೇರಿದೆ. ರಾಯಬಾಗದ ಮೂವರಿಗೆ ರೋಗಿ ನಂಬರ್ 301ರಿಂದ ಸೋಂಕು ತಗುಲಿದೆ.
Read More »ಬೆಳಗಾವಿಯಲ್ಲಿ ತುಸು ನೆಮ್ಮದಿ ನೀಡಿದ ಕೊರೋನಾ
ಬೆಳಗಾವಿ: ಜಿಲ್ಲೆಯಲ್ಲಿ ಸಂಜೆಯ ಬುಲೆಟಿನ್ ತುಸು ನೆಮ್ಮದಿ ತಂದಿದೆ. ಬೆಳಗ್ಗೆ ಒಟ್ಟು ಹದಿನಾಲ್ಕು ಕರೋನ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿತ್ತು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 69 ಪ್ರಕರಣ ಕಂಡು ಬಂದಿದೆ. ಈ ಮೂಲಕ ರಾಜ್ಯದಲ್ಲಿ ತೃತೀಯ ಸ್ಥಾನದ ಕರಾಳ ಪಟ್ಟಿಯಲ್ಲಿದೆ. ಗುರುವಾರ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದ ಕರೋನ ಪಾಸಿಟಿವ್ ಕಂಡು ಬಂದಿದ್ದರಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದರು.
Read More »ಸಾರ್ವಜನಿಕರಲ್ಲಿ ಮೂಡಲಗಿ ತಾಲೂಕು ದಂಡಾಧಿಕಾರಿಗಳು ಯಾರು? ಎಂಬ ಅನುಮಾನ…!!
ಮೂಡಲಗಿ ತಾಲೂಕು ದಂಡಾಧಿಕಾರಿಗಳು ಯಾರು? ಸಾರ್ವಜನಿಕರಲ್ಲಿ ಅನುಮಾನ!! ಮೂಡಲಗಿ: ಕೊರೋನಾ ಮಹಾಮಾರಿ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು ಈ ಸೋಂಕು ಹರಡದಂತೆ ಕೇಂದ್ರ, ರಾಜ್ಯ ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೊಳಿಸಿ ಜನರಿಗೆ ಯಾವುದೇ ಕುಂದು ಕೊರತೆ ಬರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸುಗ್ರೀವಾಜ್ಞೆ ನೀಡಿವೆ. ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲಿಲ್ಲ ಎಂಬಂತೆ ಮೂಡಲಗಿ ತಾಲೂಕು ದಂಡಾಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯದ ಆರೋಪ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ. ಕಳೆದ ಎರಡು ತಿಂಗಳಿಂದ …
Read More »ಬೆಳಗಾವಿಯಲ್ಲಿ ಇಂದು 14 ಪಾಸಿಟಿವ್
ಬೆಳಗಾವಿ ಜಿಲ್ಲೆಗೆ ಇದು ದೊಡ್ಡ ಶಾಕ್. ಇಂದು ಬಿಡುಗಡೆಯಾಗಿರುವ ಹೆಲ್ತ್ ಬುಲಿಟಿನ್ ನಲ್ಲಿ ಹಿರೇಬಾಗೇವಾಡಿಯ 10 ಜನರು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟೂ 14 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 69ಕ್ಕೇರಿದೆ. ಸಂಕೇಶ್ವರದ 8 ವರ್ಷದ ಬಾಲಕಿ, 9 ವರ್ಷದ ಬಾಲಕ ಹಾಗೂ 75 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ 27 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಹಿರೇಬಾಗೇವಾಡಿಯ 27, 24, …
Read More »ಮೂಡಲಗಿ ಕೋರ್ಟ್ ಆವರಣದಲ್ಲಿ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ
ಮೂಡಲಗಿ : 12ನೇ ಶತಮಾನದಲ್ಲಿ ಜಾತಿ ಭೇದವನ್ನು ಅಂಧಾನುಕರಣೆ ಎಲ್ಲ ವಿಶೇಷವಾದ ಕಾಲದಲ್ಲಿ ಇಂತಹ ಸಾಮಾಜಿಕ ಅನಿಷ್ಟದ ವಿರುದ್ಧ ಕ್ರಾಂತಿಯನ್ನು ಆರಂಭಿಸಿದವರು ಬಸವಣ್ಣನವರು ಎಂದು ಹಿರಿಯ ನ್ಯಾಯವಾದಿ ಎ. ಕೆ. ಮದಗಣ್ಣವರ ಹೇಳಿದರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾದ ಬಸವಣ್ಣನವರ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣನವರು ಅಂತರ್ಜಾತಿ ವಿವಾಹ ಜಾರಿಗೆ ತಂದರು, ಬಸವೇಶ್ವರ ದೃಷ್ಟಿಯಲ್ಲಿ ಇಡೀ …
Read More »ಹುಕ್ಕೇರಿಯಲ್ಲಿ ಒಂದು ಕರೊನಾ ಪ್ರಕರಣ ಪತ್ತೆ
ಬೆಳಗಾವಿಯಲ್ಲಿ ಹುಕ್ಕೇರಿಯಲ್ಲಿ ಒಂದು ಕರೊನಾ ಪ್ರಕರಣ ಕಂಡುಬಂದಿದೆ. ಕಲಬುರಗಿಯಲ್ಲಿ ಎಂಟು ಪ್ರಕರಣ ಕಂಡು ಬಂದಿವೆ ಈ ಮೂಲಕ ಒಂಬತ್ತು ಪ್ರಕರಣ ಇಂದು ದಾಖಲಾಗಿವೆ. ಬೆಳಗಾವಿಯ ಹನ್ನೆರಡು ವರ್ಷದ ಬಾಲಕನಿಗೆ ಕೋರೋನಾ ತಗುಲಿದೆ. ಇಂದಿನ ಹೊಸ ಪ್ರಕರಣಗಳು ಸೇರಿ ಕರ್ನಾಟಕದಲ್ಲಿ ಒಟ್ಟು 532ಕ್ಕೆ ಏರಿದೆ.
Read More »ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಪತ್ತೆ
ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 520ಕ್ಕೇರಿದೆ. ಕಲಬುರ್ಗಿಯಲ್ಲಿ ಇಂದು 6 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ಹಾಗೂ ಗದಗದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಬೇರೆ ಯಾವುದೇ ಭಾಗಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ.
Read More »