Breaking News
Home / ತಾಲ್ಲೂಕು / ಬೆಳಗಾವಿಯಲ್ಲಿ ಇಂದು 14 ಪಾಸಿಟಿವ್

ಬೆಳಗಾವಿಯಲ್ಲಿ ಇಂದು 14 ಪಾಸಿಟಿವ್

Spread the love

ಬೆಳಗಾವಿ ಜಿಲ್ಲೆಗೆ ಇದು ದೊಡ್ಡ ಶಾಕ್. ಇಂದು ಬಿಡುಗಡೆಯಾಗಿರುವ ಹೆಲ್ತ್ ಬುಲಿಟಿನ್ ನಲ್ಲಿ ಹಿರೇಬಾಗೇವಾಡಿಯ 10 ಜನರು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟೂ 14 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 69ಕ್ಕೇರಿದೆ.

ಸಂಕೇಶ್ವರದ 8 ವರ್ಷದ ಬಾಲಕಿ, 9 ವರ್ಷದ ಬಾಲಕ ಹಾಗೂ 75 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ 27 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಹಿರೇಬಾಗೇವಾಡಿಯ 27, 24, 48, 24 ವರ್ಷದ ಮಹಿಳೆಯರಿಗೆ, 36, 43, 36, 50 ವರ್ಷದ ಪುರುಷರಿಗೆ ಸೋಂಕು ಪತ್ತೆಯಾಗಿದೆ. ಹಿರೇಬಾಗೆವಾಡಿಯ 16 ವರ್ಷದ ಬಾಲಕಿ ಹಾಗೂ 18 ವರ್ಷದ ಬಾಲಕನಿಗೂ ಸೋಂಕು ತಗುಲಿದೆ.

ಹಿರೇಬಾಗೇವಾಡಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದ್ದು, 35ಕ್ಕೇರಿದೆ.

ವಿಪರ್ಯಾಸವೆಂದರೆ ಸಂಕೇಶ್ವರದ ಮೂವರು ತಬ್ಲಿಘಿಗಳಲ್ಲ. ಇಲ್ಲಿನ ಇಬ್ಬರು ಮಕ್ಕಳಿಗೆ ಸೋಂಕು ತಗುಲಿರುವುದು ಆಶ್ಚರ್ಯಕರವಾಗಿದೆ.


Spread the love

About inmudalgi

Check Also

ಕನಕದಾಸರು ಕೇವಲ ವ್ಯಕ್ತಿಯಲ್ಲ, ಶೋಷಿತರ ಅತಿ ದೊಡ್ಡ ಧ್ವನಿ:ಬಸವಂತ ಕೋಣಿ

Spread the loveಬೆಟಗೇರಿ:ಕನಕದಾಸರು ಒಬ್ಬ ಕವಿಯಾಗಿ ಬೆಳೆದು, ಸಮಾಜ ಸುಧಾರಕನಾಗಿ, ಸಂತನಾಗಿ ಶಾಶ್ವತವಾಗಿ ಉಳಿದವರು ಎಂದು ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ