ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂಡಲಗಿ: ಅರಭಾವಿ ಶಿಸು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 18 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 79 ಸಹಾಯಕಿಯರ ಹುದ್ದೆಗಳಿಗೆ 19-35 ವರ್ಷದೊಳಗಿನ ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಲಕೋಟೆಯಲ್ಲಿ ಶೀಲ್ಡ್ ಮಾಡಿ ಜುಲೈ 13 ರ ಸಂಜೆ 5:30 …
Read More »ಧಾರ್ಮಿಕ ಭಾವನೆಗಳಿಗೆ ದಕ್ಕೆತರು ಪೋಸ್ಟ ಮಾಡಿದರೆ ಕಾನೂನು ಕ್ರಮ
ಧಾರ್ಮಿಕ ಭಾವನೆಗಳಿಗೆ ದಕ್ಕೆತರು ಪೋಸ್ಟ ಮಾಡಿದರೆ ಕಾನೂನು ಕ್ರಮ ಮೂಡಲಗಿ: ಸಾಮಾಜಿಕ ಜಾಲತಾಣಗಳದ ವಾಟ್ಸಾಪ್, ಪೇಸಬುಕ್ಕ್, ಟ್ವೀಟರ, ಇನ್ಸ್ಟಾಗ್ರಾಮಗಳಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವಂತಹ ಸಂದೇಶಗಳನ್ನು ಪೋಸ್ಟ ಮಾಡಿದರೆ ಮ ತ್ತು ಸ್ಟೇಟಸ್ ಹಾಕಿದರೆ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಲಗಿ ಪಿಎಸ್‍ಐ ಎಚ್.ವಾಯ್.ಬಾಲದಂಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಸಂಜೆ ಜರುಗಿದ ಯುವಕರ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯ …
Read More »ಪ್ರತಿಯೊಬ್ಬರಿಗೂ ಶಿಕ್ಷಣ , ಆಹಾರ ಹಾಗೂ ಆರೋಗ್ಯ ಅತ್ಯಾವಶ್ಯ- ಡಾ. ಎಸ್.ಎಸ್ ಪಾಟೀಲ
ಮೂಡಲಗಿ: ಪ್ರತಿಯೊಬ್ಬರಿಗೂ ಮೂಲಭೂತವಾಗಿ ಶಿಕ್ಷಣ ಆಹಾರ ಹಾಗೂ ಆರೋಗ್ಯದ ಕಾಳಜಿ ಅತ್ಯಾವಶ್ಯಕವಾಗಿದೆ. ಸದೃಢವಾದ ಶರೀರ ಹೊಂದಲು ವೈದ್ಯರುಗಳ ಸಲಹೆ ಸೂಚನೆಗಳು ಅವಶ್ಯಕ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ. ಎಸ್.ಎಸ್ ಪಾಟೀಲ ಹೇಳಿದರು. ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಸಭೆ ಮತ್ತು ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ವಿನೂತನ ರೋಗ ರುಜಣುಗಳು ಉಂಟಾಗುತ್ತಿದ್ದು, ಕೇಲವೊಂದು …
Read More »‘ಸುಪ್ತ ಮನಸ್ಸಿನ ನಿಯಂತ್ರಣವಿದ್ದರೆ ಯಶಸ್ಸು ಸುಲಭ”
‘ಸುಪ್ತ ಮನಸ್ಸಿನ ನಿಯಂತ್ರಣವಿದ್ದರೆ ಯಶಸ್ಸು ಸುಲಭ” ಮೂಡಲಗಿ: ‘ಅಸಾಧ್ಯವಾದದ್ದನ್ನು ಸಾಧ್ಯ ಮಾಡುವಂತ ಶಕ್ತಿ ಪ್ರತಿ ಮನುಷ್ಯನ ಸುಪ್ತ ಮನಸ್ಸಿಗೆ ಇದ್ದು, ಸುಪ್ತ ಮನಸ್ಸನ್ನು ಜಾಗೃತಗೊಳಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಭಾರತೀಯ ಸೇನೆಯ ಕರ್ನಲ್ ಡಾ. ಪರಶುರಾಮ ನಾಯಿಕ ಹೇಳಿದರು. ತಾಲ್ಲೂಕಿನ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಹಾಗೂ ಸಾಧನೆಯ ಕಲೆ ಕುರಿತು ಮಾತನಾಡಿದ ಅವರು ಸುಪ್ತ ಮನಸ್ಸನ್ನು …
Read More »*ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ*
*ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ* ಮುಧೋಳ: ನಗರ ಶಾಮೇಲ್ಸ್ ಪ್ರೌಢ ಶಾಲೆಯ ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ 13 ಅಂಕಪಡೆಯುವದರೊಂದಿಗೆ 625 ಕ್ಕೆ 625 ಅಂಕ ಪಡೆದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆ ನಿಮಿತ್ಯ ನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ವರ್ಗದವರು ಗುರುವಾರದಂದು ವಿದ್ಯಾರ್ಥಿಯ ಮನೆಯಲ್ಲಿ …
Read More »ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ಬೆಳೆಗಳನ್ನು ಉತ್ತಮ ಬೆಲೆಗೆ ನೇರವಾಗಿ ಮಾರುಕಟ್ಟೆಗೆ
ಮೂಡಲಗಿ: 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ತಾವು ಬೆಳೆದ ಬೆಳೆಗಳನ್ನು ಉತ್ತಮ ಬೆಲೆಗೆ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ …
Read More »ಸೋಶಿಯಲ್ ಮೀಡಿಯಾದಿಂದ ವಿದ್ಯಾರ್ಥಿಗಳು ದೂರವಿರಿ- ಪಿ.ಎಸ್.ಐ ಎಚ್. ವಾಯ್ ಬಾಲದಂಡಿ.
ಸೋಶಿಯಲ್ ಮೀಡಿಯಾದಿಂದ ವಿದ್ಯಾರ್ಥಿಗಳು ದೂರವಿರಿ- ಪಿ.ಎಸ್.ಐ ಎಚ್. ವಾಯ್ ಬಾಲದಂಡಿ. ಮೂಡಲಗಿ : ಇಂದಿನ ತಾಂತ್ರಿಕರಣದ ಯುಗದಲ್ಲಿ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾಗಳಾದ ವ್ಯಾಟ್ಸಾಪ್, ಟ್ವಿಟರ್ ಪೇಸ್‍ಬುಕ್, ಟೇಲಿಗ್ರಾಮ ಮೀಡಿಯಾಗಳಿಂದ ದೂರವಿರಬೇಕು ಅವುಗಳ ಬಳಿಕೆಯಿಂದ ಕ್ರೈಂಗಳು ಹೆಚ್ಚಾಗುತ್ತಿದ್ದು ಅದರಲ್ಲಿ ಕ್ರೈಂಗಳ ಬಗ್ಗೆ ಗೊತ್ತಿಲ್ಲದ ವಿದ್ಯಾರ್ಥಿಗಳು ಶಿಕ್ಷಣದ ಮೌಲ್ಯಗಳನ್ನು ಮರೆತು ತಮ್ಮ ಬದುಕು ಹಾಳುಮಾಡಿಕೊಳ್ಳುತ್ತಿದ್ದಾರೆ ಅಲ್ಲದೆ ನಮ್ಮ ಪೋಲಿಸ್ ಇಲಾಖೆಯಿಂದ ಶಿಕ್ಷೆಗೆ ಒಳಗಾಗುತಿರುವುದು ಇದರಿಂದ ಅವರ ಜೀವನಕ್ಕೆ ತೊಂದರೆ ಮಾಡಿಕೊಳ್ಳುತಿರುವುದು ಸರ್ವೇಸಾಮಾನ್ಯವಾಗಿದೆ ಆದ್ದರಿಂದ …
Read More »ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಬಟ್ಟೆ ಚೀಲ ವಿತರಣೆ
ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಬಟ್ಟೆ ಚೀಲ ವಿತರಣೆ ಮೂಡಲಗಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಆವರಣದಲ್ಲಿ ಸಸಿ ನಡೆಯುವ ಕಾರ್ಯಕ್ರಮ ಜರುಗಿತು. ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಯಾದವಾಡ ಘಟಕದ ಮುಖ್ಯಸ್ಥ ಪ್ರಭಾತ್ ಕುಮಾರ್ ಸಿಂಗ್ ಮತ್ತು ಸ್ಪೂರ್ತಿ ಲೇಡಿಸ್ ಕ್ಲಬ್ ಅಧ್ಯಕ್ಷೆ ವಂದನಾ ಸಿಂಗ್ ಅವರು ಸಸಿನೆಟ್ಟು ನೀರು ಉಣಿಸುವ ಸಸಿ ನಡೆವು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಖಾನೆಯ …
Read More »ಸುತ್ತ ಮುತ್ತಲಿನ ಪ್ರದೇಶ ಹಸಿರಾಗಿಸಿದರೆ ಮಾತ್ರ ಉತ್ತಮ ಆಮ್ಲಜನಕ ಸಿಗಲು ಸಾಧ್ಯ- ಪ್ರದೀಪಕುಮಾರ ಇಂಡಿ
ಸತೀಶ ಶುಗರ್ಸ ಕಾರ್ಖಾನೆಯಂದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ಸುತ್ತ ಮುತ್ತಲಿನ ಪ್ರದೇಶ ಹಸಿರಾಗಿಸಿದರೆ ಮಾತ್ರ ಉತ್ತಮ ಆಮ್ಲಜನಕ ಸಿಗಲು ಸಾಧ್ಯ- ಪ್ರದೀಪಕುಮಾರ ಇಂಡಿ ಮೂಡಲಗಿ: ಮರ-ಗಿಡ, ಕಾಡು, ಗಿಡಮೂಲಿಕೆ ಉಳಿದರೆ ಪರಿಸರ ಸಮತೋಲನವಾಗಿ ಜೀವ ಸಂಕುಲ ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯ. ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಹಚ್ಚ ಹಸಿರಾಗಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ ಸಿಗಲು ಸಾಧ್ಯವಾಗುತ್ತದೆ. ಪರಿಸರ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ …
Read More »ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ
ಮೂಡಲಗಿ: ರೈತರು ತಮ್ಮ ಹೊಲದ ಬದುಗಳಲ್ಲಿ ಗಿಡಗಳನ್ನು ನೆಡವ ಮೂಲಕ ನೀರು ಹಾಗೂ ಮಣ್ಣಿನ ಸಂರಕ್ಷಣಾ ಕಾರ್ಯಗಳನ್ನು ಮಾಡಿ ಪರಿಸರವನ್ನು ರಕ್ಷಿಸಬೇಕೆಂದು ಮಾಜಿ ಸಚಿವ ಹಾಗೂ ಬಡ್ರ್ಸ ಸಂಸ್ಥೆಯ ಅಧ್ಯಕ್ಷ ಆರ್.ಎಮ್. ಪಾಟೀಲ ಕರೆ ನೀಡಿದರು. ಅವರು ತಾಲೂಕಿನ ತುಕ್ಕಾನಟ್ಟಿ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆವರಣದಲ್ಲಿ ಗೋಕಾಕ ಸಮಾಜಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜರುಗಿದ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ವನಮೋಹೊತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, …
Read More »