Breaking News
Home / Recent Posts / ಧಾರ್ಮಿಕ ಭಾವನೆಗಳಿಗೆ ದಕ್ಕೆತರು ಪೋಸ್ಟ ಮಾಡಿದರೆ ಕಾನೂನು ಕ್ರಮ

ಧಾರ್ಮಿಕ ಭಾವನೆಗಳಿಗೆ ದಕ್ಕೆತರು ಪೋಸ್ಟ ಮಾಡಿದರೆ ಕಾನೂನು ಕ್ರಮ

Spread the love

ಧಾರ್ಮಿಕ ಭಾವನೆಗಳಿಗೆ ದಕ್ಕೆತರು ಪೋಸ್ಟ ಮಾಡಿದರೆ ಕಾನೂನು ಕ್ರಮ

ಮೂಡಲಗಿ: ಸಾಮಾಜಿಕ ಜಾಲತಾಣಗಳದ ವಾಟ್ಸಾಪ್, ಪೇಸಬುಕ್ಕ್, ಟ್ವೀಟರ, ಇನ್ಸ್ಟಾಗ್ರಾಮಗಳಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವಂತಹ ಸಂದೇಶಗಳನ್ನು ಪೋಸ್ಟ ಮಾಡಿದರೆ ಮ

ತ್ತು ಸ್ಟೇಟಸ್ ಹಾಕಿದರೆ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಲಗಿ ಪಿಎಸ್‍ಐ ಎಚ್.ವಾಯ್.ಬಾಲದಂಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಸಂಜೆ ಜರುಗಿದ ಯುವಕರ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯ ಅವಹೇಳನಕಾರಿ ರೀತಿಯಲ್ಲಿ ಬಿಂಬಿಸುವಂತ ವಿಚಾರವನ್ನು ಹಾಗೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಪೋಸ್ಟ ಮಾಡಿದರೆ ಐಪಿಸಿ ಕಲಂ 153ಎ, 295. 295ಎ ಹಾಗೂ ಮಾಹಿತಿ ತಂತ್ರಜ್ಞಾನ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳಲಾಗುವದು. ಕಾರಣ ಯಾರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪೋಸ್ಟಗಳನ್ನು ಮಾಡಬಾರದು ಎಂದ ಅವರು ಸಭೆಯಲ್ಲಿ ಭಾಗವಹಿಸಿದ ಯುವಕರಿಗೆ ತಮ್ಮ ತಮ್ಮ ಸ್ನೇಹಿತರಿಗೆ ಇತರಗೆ ತಿಳಿಸಬೇಕೆಂದರು.
ಸಭೆ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ರವಿ ಮಹಾಲಿಂಗಪೂರ, ಚೇತನ ಹೊಸಕೋಟಿ, ಅಬ್ದುಲ್ ಫೈಲವಾನ್, ಸಾವಂತ ಹೊಸಮನಿ, ಸಂತೋಷ ಕಮತೆ, ಮಹೇಶ ವಡೇಯರ, ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ