Breaking News
Home / ತಾಲ್ಲೂಕು (page 77)

ತಾಲ್ಲೂಕು

ಅರಭಾವಿ ಮತಕ್ಷೇತ್ರದಿಂದ ಸುಮಾರು ಐದು ಸಾವಿರ ಜನ ಕಾಂಗ್ರೇಸ್‍ನ ಭಾರತ ಜೋಡೋ ಪಾದಯಾತ್ರೆಯಲ್ಲಿ – ಕಾಂಗ್ರೇಸ್ ಮುಖಂಡ ಅರವಿಂದ್ರ ದಳವಾಯಿ

ಮೂಡಲಗಿ: ಅರಭಾವಿ ಮತಕ್ಷೇತ್ರದಿಂದ ಸುಮಾರು ಐದು ಸಾವಿರ ಜನರು ಕಾಂಗ್ರೇಸ್‍ನ ಭಾರತ ಜೋಡೋ ಯಾತ್ರೆಯ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಅರವಿಂದ್ರ ದಳವಾಯಿ ಹೇಳಿದರು. ಗುರುವಾರದಂದು ಮೂಡಲಗಿ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ದೇಶದ ಐಕ್ಯತೆಯ ದೃಷ್ಟಿಯಲ್ಲಿ ಭಾರತ ಜೋಡೋ ಯಾತ್ರೆ ಹಮ್ಮಿಕೊಂಡಿದ್ದಾರೆ ಆದರಿಂದ ಬಳ್ಳಾರಿ ಜಿಲ್ಲೆಯ ರಾಮಪೂರದಲ್ಲಿ ಅ.14ರಂದು ನಡೆಯಲ್ಲಿರುವ ಜೋಡೋ ಯಾತ್ರೆಯಲ್ಲಿ ಅರಭಾವಿ ಮತಕ್ಷೇತ್ರದ ಕಾಂಗ್ರೇಸ್ …

Read More »

ಡಾ. ಪ್ರಭಾಕರ ಕೋರೆ ಅವರ 75ನೇ ಅಮೃತ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಬೇಕು- ಕಾಂಗ್ರೇಸ್ ಮುಖಂಡ ಲಕ್ಕಣ್ಣ ಸವಸುದ್ದಿ

ಮೂಡಲಗಿ: ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಹರಿಕಾರಿ ಡಾ. ಪ್ರಭಾಕರ ಕೋರೆ ಅವರ 75ನೇ ಅಮೃತ ಮಹೋತ್ಸವ ಸಮಾರಂಭದದಲ್ಲಿ ಅರಭಾವಿ ಮತ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಬೇಕೆಂದು ಕಾಂಗ್ರೇಸ್ ಮುಖಂಡ ಕಲ್ಲೋಳಿಯ ಲಕ್ಕಣ್ಣ ಸವಸುದ್ದಿ ಹೇಳಿದರು. ಬುಧವಾರದಂದು ಮೂಡಲಗಿ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ನೆಹರು ನಗರದ ಜಿಲ್ಲಾ ಕ್ರೀಡಾಂಗಣ, ಜೆಎಮ್‍ಸಿ ಆವರಣದಲ್ಲಿ ಅ.15ರಂದು ಮಧ್ಯಾಹ್ನ   ಡಾ. ಪ್ರಭಾಕರ ಕೋರೆ ಅವರು ಅಮೃತ ಮಹೋತ್ಸವ …

Read More »

ಸತೀಶ ಶುಗರ್ಸ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಸತೀಶ ಶುಗರ್ಸ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ಜಿ ಹತ್ತಿರದ ಸತೀಶ ಶುಗರ್ಸ ಸಕ್ಕರೆ ಕಾರ್ಖಾನೆಯ ಸನ್ 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ರಮಕ್ಕೆ ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಚಾಲನೆ ನೀಡಿದರು. ಸತೀಶ ಶುಗರ್ಸ ಸಂಸ್ಥೆಯ ಚೇರಮನ್‍ರು ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಮಾತನಾಡಿ, ಸನ್ 2021-22 …

Read More »

ಕೆಎಂಎಫ್‍ನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ : ಸರ್ವೋತ್ತಮ ಜಾರಕಿಹೊಳಿ

ಕೆಎಂಎಫ್‍ನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ : ಸರ್ವೋತ್ತಮ ಜಾರಕಿಹೊಳಿ ವೆಂಕಟಾಪೂರ ಮತ್ತು ಢವಳೇಶ್ವರ ಗ್ರಾಮಗಳಲ್ಲಿ ನಡೆದ ಬಿಎಂಸಿ ಕೇಂದ್ರಗಳ ಉದ್ಘಾಟನಾ ಸಮಾರಂಭ ಮೂಡಲಗಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಾರಥ್ಯದಲ್ಲಿರುವ ಕೆಎಂಎಫ್‍ನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಯುವ ಧುರೀಣ ಸರ್ವೋತ್ತಮ ಭೀಮಶಿ ಜಾರಕಿಹೊಳಿ ರೈತರಿಗೆ ಕರೆ ನೀಡಿದರು. ತಾಲೂಕಿನ ವೆಂಕಟಾಪೂರ ಹಾಗೂ ಢವಳೇಶ್ವರ ಗ್ರಾಮಗಳಲ್ಲಿ ಸೋಮವಾರದಂದು ಇಲ್ಲಿಯ ಕಹಾಮ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದ ಬಿಎಂಸಿ ಕೇಂದ್ರಗಳನ್ನು ಉದ್ಘಾಟಿಸಿ …

Read More »

ಬೆಟಗೇರಿ ಸುತ್ತಮುತ್ತ ಸುರಿದ ಮಳೆಯಿಂದ ಬೆಳೆ ನಾಶವಾಗುವ ಆತಂಕದಲ್ಲಿ ರೈತರು.!

ಬೆಟಗೇರಿ ಸುತ್ತಮುತ್ತ ಸುರಿದ ಮಳೆಯಿಂದ ಬೆಳೆ ನಾಶವಾಗುವ ಆತಂಕದಲ್ಲಿ ರೈತರು.! ತುಂಬಿ ಹರಿದ ಬೆಟಗೇರಿ ಹಳ್ಳ  ಮಳೆಗೆ ಕುಸಿದು ಬಿದ್ದ ಕೆಲ ಮನೆಯ ಮೇಲಚ್ಛಾವಣಿ, ಗೋಡೆಗಳು ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಮಂಗಳವಾರದಂದು ಮುಂಜಾನೆ ಮತ್ತು ಮಧ್ಯಾಹ್ನ ಭಾರಿ ಪ್ರಮಾಣದ ಮಳೆಯಾಗಿದ್ದರಿಂದ ಬೆಟಗೇರಿ ಗ್ರಾಮದ ಪಕ್ಕದಲ್ಲಿರುವ ಹಳ್ಳ ತುಂಬಿ ಹರಿಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಬೆಟಗೇರಿ ಗ್ರಾಮದ ಸುತ್ತ-ಮುತ್ತ ಹಗಲಿರುಳು ಆಗಾಗ ಧಾರಾಕಾರ ಮಳೆ ಧರೆಗಿಳಿಯುತ್ತಿದೆ. ಮಳೆಗೆ …

Read More »

ದಾಲ್ಮಿಯಾ ಭಾರತ ಫೌಂಢೇಶನ್‍ದಿಂದ ಶುದ್ಧ ನೀರಿನ ಘಟಕ ಲೋಕಾರ್ಪಣೆ

ದಾಲ್ಮಿಯಾ ಭಾರತ ಫೌಂಢೇಶನ್‍ದಿಂದ ಶುದ್ಧ ನೀರಿನ ಘಟಕ ಲೋಕಾರ್ಪಣೆ ಮೂಡಲಗಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೋಳ್ಳುವದು ಪ್ರಥಮ ಆದ್ಯತೆ ನೀಡ ಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದಾಲ್ಮಿಯಾ ಸಿಮೆಂಟ ಕಾರ್ಖಾನೆ ನಿರ್ಮಿಸಿರು ಶುದ್ಧ ಕುಡಿಯುವ ನೀರಿನ ಘಟಕದ ಸದ್ಬಳಕೆ ಮಾಡಿಕೋಳ್ಳಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿಯ ಅವರು ಹೇಳಿದರು. ತಾಲೂಕಿನ ಯಾದವಾಡ ಗ್ರಾಮದ ಜನತಾ ಪ್ಲಾಟದಲ್ಲಿ ದಾಲ್ಮಿಯಾ ಭಾರತ ಫೌಂಡೇಶನದ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯವರು ನೂತನ …

Read More »

ಮಕ್ಕಳಲ್ಲಿ ಸಾಹಿತ್ಯ, ಸಂಗೀತದ ಅಭಿರುಚಿ ಬೆಳೆಸಬೇಕು- ಶ್ರೀಧರಬೋಧ ಸ್ವಾಮೀಜಿ

 ಮಕ್ಕಳಲ್ಲಿ ಸಾಹಿತ್ಯ, ಸಂಗೀತದ ಅಭಿರುಚಿ ಬೆಳೆಸಬೇಕು ಮೂಡಲಗಿ: ‘ಸ್ವರ, ರಾಗ, ಲಯ, ಭಾವ ಹಾಗೂ ಶೃತಿಗಳ ಸಮನ್ವಯತೆಯ ಸಂಗೀತವು ಮನುಷ್ಯನ ಜೀವನೋತ್ಸಾಹವನ್ನು ವೃದ್ಧಿಸುವ ಶಕ್ತಿಯನ್ನು ಹೊಂದಿದೆ’ ಎಂದು ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮೀಜಿ ಹೇಳಿದರು. ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನ ದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ, ಮಂಥನ ತಿಂಗಳ ಕಾರ್ಯಕ್ರಮದ ಅಡಿಯಲ್ಲಿ ಏರ್ಪಡಿಸಿದ್ದ ಸಾಹಿತ್ಯ ಮತ್ತು ಸಂಗೀತ ಕಾರ್ಯಕ್ರಮವನ್ನು ತಬಲಾ ವಾದ್ಯವನ್ನು …

Read More »

ಮೌನಕ್ಕೆ ಮಹಾನ್ ಶಕ್ತಿ ಇದೆ: ಫಕೀರದಿಂಗಾಲೇಶ್ವರ ಸ್ವಾಮಿಜಿ

ಮೌನಕ್ಕೆ ಮಹಾನ್ ಶಕ್ತಿ ಇದೆ: ಫಕೀರದಿಂಗಾಲೇಶ್ವರ ಸ್ವಾಮಿಜಿ ಬೆಟಗೇರಿ: ಶ್ರೀದೇವಿಯು ಶಕ್ತಿ ದೇವತೆÉಯಾಗಿದ್ದಾಳೆ. ಮೌನದಲ್ಲಿರುವ ಆನಂದ, ಶಾಂತಿ, ನೆಮ್ಮದಿ ಮತ್ತೊಂದರಲ್ಲಿ ಸಿಗುವುದಿಲ್ಲಾ, ಮೌನ ಅನಂತ ಭಾಷೆಗಳ ಆಗರವಾಗಿದೆ. ಮೌನಕ್ಕೆ ಮಹಾನ್ ಶಕ್ತಿ ಇದೆ ಎಂದು ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಸಂಸ್ಥಾನಮಠದ ನೂತನ ಉತ್ತರಾಧಿಕಾರಿ ಫಕೀರದಿಂಗಾಲೇಶ್ವರ ಸ್ವಾಮಿಜಿ ಹೇಳಿದರು. ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ನವರಾತ್ರಿಯ ಅಂಗವಾಗಿ ಅ.9ರಂದು ನಡೆದ ಶ್ರೀದೇವಿ ಪುರಾಣ ಪ್ರವಚನ ಮಂಗಲೋತ್ಸವ, 286ನೇ ಬಸವ …

Read More »

ಕೆಎಲ್‍ಇ ಆಸ್ಪತ್ರೆಯಲ್ಲಿ ಉಚಿತವಾಗಿ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು: ಜಯಾನಂದ ಮುನವಳ್ಳಿ

ಕೆಎಲ್‍ಇ ಆಸ್ಪತ್ರೆಯಲ್ಲಿ ಉಚಿತವಾಗಿ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು: ಜಯಾನಂದ ಮುನವಳ್ಳಿ ಬೆಟಗೇರಿ:ಕೆ.ಎಲ್.ಇ ಸಂಸ್ಥೆಯ ಆಸ್ಪತ್ರೆಯಲ್ಲಿ ಖ್ಯಾತ ವೈದ್ಯರು ವಿವಿಧ ರೋಗಗಳ ಕುರಿತು ಉಚಿತ ತಪಾಸಣೆ ಮಾಡಿ ಔಷಧಿಗಳನ್ನು ನೀಡಿ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾರೆ. ಸಾರ್ವಜನಿಕ ರೋಗಿಗಳು ಕೆ.ಎಲ್.ಇ ಆಸ್ಪತ್ರೆಯಲ್ಲಿ ಉಚಿತವಾಗಿ ದೊರಕುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು. ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ …

Read More »

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 79ನೇ ಅನ್ನದಾಸೋಹ ‘ಅನ್ನದಾನವು ಶ್ರೇಷ್ಠ ದಾನವಾಗಿದೆ’

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 79ನೇ ಅನ್ನದಾಸೋಹ ‘ಅನ್ನದಾನವು ಶ್ರೇಷ್ಠ ದಾನವಾಗಿದೆ’  ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 79ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಅತಿಥಿ ಮಾಹಿತಿ ಹಕ್ಕು ಹೋರಾಟಗಾರ ಬಿ.ಜಿ. ಗಡಾದ ಅವರು ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದರವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು. ಲಯನ್ಸ್ ಕ್ಲಬ್‍ವು ಪ್ರತಿ ತಿಂಗಳದಲ್ಲಿ …

Read More »