ಹುಮನಾಬಾದ್ ತಹಶೀಲ್ದಾರ ಮೇಲೆ ಹಲ್ಲೆ ಖಂಡಿಸಿ ಮೂಡಲಗಿ ಗ್ರಾಮ ಲೇಕ್ಕಾಧಿಕಾರಿಗಳ ಸಂಘದಿಂದ ಮನವಿ ಮೂಡಲಗಿ : ಕರ್ತವ್ಯ ನಿರತ ಬೀದರ ಜಿಲ್ಲೆ ಹುಮನಾಬಾದ್ ತಹಶೀಲ್ದಾರ ಮೇಲೆ ಕೆಲ ಪುಂಡರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಖಂಡಿಸಿ ಮೂಡಲಗಿ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ತಹಶೀಲ್ದಾರ ಡಿ ಜಿ.ಮಹಾತ್ ಅವರ ಮೂಲಕ ಹಲ್ಲೆ ಮಾಡಿದ ಪುಂಡರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಹಾಗೂ ಕಂದಾಯ ಇಲಾಖೆಯ ನೌಕರರ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಕಠಿಣ …
Read More »ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಿ ಪಿ.ಎಸ್.ಐ – ಎಚ್. ವಾಯ್. ಬಾಲದಂಡಿ.
ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಿ ಪಿ.ಎಸ್.ಐ – ಎಚ್. ವಾಯ್. ಬಾಲದಂಡಿ. ಮೂಡಲಗಿ : ವಿದ್ಯಾರ್ಥಿಗಳು ಮಾದಕ ವಸ್ತುಗಳಾದ ತಂಬಾಕು, ಗುಟಕಾ, ಡ್ರಗ್ಸ್ ಹಾಗೂ ಇನ್ನಿತರ ಮಾದಕ ವಸ್ತುಗಳ ಬಳಿಕೆಯಿಂದ ದೂರವಿದ್ದು ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕು. ನಮ್ಮ ಗ್ರಾಮೀಣ ಭಾಗದ ರೈತರ ತಪ್ಪು ತಿಳಿವಳಿಕೆಯಿಂದ ಗಾಂಜಾ, ಕಸಕಸಿ ಮಾದಕ ಸಸ್ಯಗಳನ್ನು ಬೆಳಸಿ ಅವುಗಳನ್ನು ಕಾನೂನು ಬಾಹಿರವಾಗಿ ಉಪಯೋಗಿಸಿತಿರುವುದು ಸಮಾಜದ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು ಅಂತಹ ಬೆಳೆಗಳನ್ನು ರೈತರು ಬೆಳೆಯುತ್ತಿದ್ದರೆ …
Read More »ಅಪ್ರಾಪ್ತ ಬಾಲಕನ ಅಪಹರಣ
ಅಪ್ರಾಪ್ತ ಬಾಲಕನ ಅಪಹರಣ ಮೂಡಲಗಿ: ಇಲ್ಲಿಯ ಆಜಾದ ನಗರದ ಅಪ್ರಾಪ್ತ ಬಾಲಕ ಅಪ್ಜಲ್.ಜಾವೀದ.ಮರಸಾದ ಎಂಬ ಐದು ವರ್ಷದ ಬಾಲಕನನ್ನು ದಿ. 28. 01. 2022 ರಂದು ಮುಂಜಾನೆ 11 ರಿಂದ ಮಧ್ಯಾಹ್ನ 12ಗಂಟೆಯ ಅವಧಿಯಲ್ಲಿ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಆಟ ಆಡುವ ಸಮಯದಲ್ಲಿ ಯಾರೋ ಅಪರಿಚಿತರು ಪುಸಲಾಯಿಸಿ ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ಆತನ ತಾಯಿ ರುಕ್ಸಾನಾ ಜಾವೀದ ಮರಸಾದ ಮೂಡಲಗಿ ಪೋಲಿಸ್ ಠಾಣೆಯಲ್ಲಿ …
Read More »ಮೂಡಲಗಿ ಕಣ್ಣಿನ ಆಸ್ಪತ್ರೆಯ ಉದ್ಘಾಟನೆ
ಮೂಡಲಗಿ ಕಣ್ಣಿನ ಆಸ್ಪತ್ರೆಯ ಉದ್ಘಾಟನೆ ಮೂಡಲಗಿ: ಇಲ್ಲಿಯ ಕಾಲೇಜು ರಸ್ತೆಯಲ್ಲಿ ಸುಸಜ್ಜಿತವಾದ ಮತ್ತು ಹೊಸ ತಂತ್ರಜ್ಞಾನದ ಕಣ್ಣು ತಪಾಸಣೆ, ವಿವಿಧ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಸೌಲಭ್ಯವನ್ನು ಹೊಂದಿರುವ ಡಾ. ಸಚೀನರವರ ಮೂಡಲಗಿ ಕಣ್ಣಿನ ಆಸ್ಪತ್ರೆಯ ಉದ್ಘಾಟನೆಯ ಜ. 31ರಂದು ಬೆಳಿಗ್ಗೆ 10 ಗಂಟೆಗೆ ಜರುಗಲಿದೆ. ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಸರಸ್ವತಿ ಪೂಜೆಯೊಂದಿಗೆ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮೀಜಿಗಳು ಆಸ್ಪತ್ರೆಯನ್ನು ಉದ್ಘಾಟಿಸುವರು ಎಂದು ಡಾ. ಸಚೀನ ಟಿ. ಅವರು …
Read More »ಜ್ಞಾನದ ಹಸಿವು ಇದ್ದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ-ಸಂಸದ ಈರಣ್ಣ ಕಡಾಡಿ
ಜ್ಞಾನದ ಹಸಿವು ಇದ್ದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ-ಸಂಸದ ಈರಣ್ಣ ಕಡಾಡಿ ಮೂಡಲಗಿ: ಜ್ಞಾನದ ಹಸಿವು ಇದ್ದವರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ, ಗ್ರಾಮೀಣ ಪ್ರದೇಶದ, ಅದರಲ್ಲೂ ರೈತನ ಮಕ್ಕಳು ಪಿ.ಎಸ್.ಆಯ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಒಳ್ಳೆಯ ಸಾಧನೆ ಮಾಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು. ರವಿವಾರ ಜ.30 ರಂದು ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ಸಕ್ರೆಪ್ಪಗೋಳ ತೋಟದಲ್ಲಿ …
Read More »ಸಂತ ಮಾಯಪ್ಪ ರಾಜಾಪುರ ರಚಿಸಿರುವ ಕೃತಿ ‘ಸಂತ ಶಿವರಾಮದಾದಾ ಗೋಕಾಕ ಚರಿತಾಮೃತ ಕೃತಿ’ ಲೋಕಾರ್ಪಣೆ
ಸಂತ ಮಾಯಪ್ಪ ರಾಜಾಪುರ ರಚಿಸಿರುವ ಕೃತಿ ‘ಸಂತ ಶಿವರಾಮದಾದಾ ಗೋಕಾಕ ಚರಿತಾಮೃತ ಕೃತಿ’ ಲೋಕಾರ್ಪಣೆ ಮೂಡಲಗಿ: ‘ಸಂತ ಶಿವರಾಮದಾದಾ ಗೋಕಾಕ ಅವರ ಕುರಿತಾಗಿ ಕೃತಿ ರಚಿಸಿರುವ ಸಂತ ಮಾಯಪ್ಪ ರಾಜಾಪುರ ಅವರ ಕಾರ್ಯವು ಶ್ಲಾಘನೀಯವಾಗಿದೆ’ ಎಂದು ಪಂಢರಪುರದ ರಾಣು ದೇವವೃತ ವಾಸ್ಕರ್ ಮಾಹಾರಾಜರು ಹೇಳಿದರು. ಮೂಡಲಗಿಯ ಸಂತ ಸಂಸ್ಕøತಿ ಪ್ರಕಾಶನ ಹಾಗೂ ಸಪ್ತಸಾಗರ ಗಡ್ಡೆ (ಬನ) ಸಂಯುಕ್ತಾ ಆಶ್ರಯದಲ್ಲಿ ಸಂತ ಮಾಯಪ್ಪಾ ರಾಜಾಪುರ ಅವರು ರಚಿಸಿರುವ ಸಂತ ಶಿವರಾಮದಾದಾ ಗೋಕಾಕ …
Read More »ಹಂಪಿ ಎಕ್ಸಪ್ರೇಸ್, ಬಸವ ಎಕ್ಸಪ್ರೇಸ್ ರೈಲನ್ನು ವ್ಹಾಯಾ ಪುಟ್ಟಪರ್ತಿಗೆ ಸಂಚಾರ ಪ್ರಾರಂಭಿಸುವಂತೆ ಸಂಸದ ಈರಣ್ಣ ಕಡಾಡಿ ಅವರಲ್ಲಿ ಮನವಿ
ಹಂಪಿ ಎಕ್ಸಪ್ರೇಸ್, ಬಸವ ಎಕ್ಸಪ್ರೇಸ್ ರೈಲನ್ನು ವ್ಹಾಯಾ ಪುಟ್ಟಪರ್ತಿಗೆ ಸಂಚಾರ ಪ್ರಾರಂಭಿಸುವಂತೆ ಸಂಸದ ಈರಣ್ಣ ಕಡಾಡಿ ಅವರಲ್ಲಿ ಮನವಿ ಮೂಡಲಗಿ: ಹಂಪಿ ಎಕ್ಸಪ್ರೇಸ್, ಬಸವ ಎಕ್ಸಪ್ರೇಸ್ ರೈಲನ್ನು ಗುಂತಕಲ್-ಧರ್ಮಾವರಂ ನಿಲ್ದಾಣದಿಂದ ವ್ಹಾಯಾ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಕ್ಕೆ ರೈಲು ಸಂಚಾರ ಪ್ರಾರಂಭಿಸುವಂತೆ ರೈಲ್ವೆ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಶನಿವಾರ ಜ.29 ರಂದು ಆಂಧ್ರಪ್ರದೇಶದ ಪುಟ್ಟಪರ್ತಿ ‘ಪ್ರಶಾಂತಿ ನಿಲಯಂ ‘ಗೆ ಭೇಟಿ …
Read More »ಅರಭಾವಿ ಕ್ಷೇತ್ರದ ರಸ್ತೆಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 52 ಕೋಟಿ ರೂ. ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 2 ಕೋಟಿ ರೂ. ಅನುದಾನ
ಅರಭಾವಿ ಕ್ಷೇತ್ರದ ರಸ್ತೆಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 52 ಕೋಟಿ ರೂ. ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 2 ಕೋಟಿ ರೂ. ಅನುದಾನ ಗೋಕಾಕ : ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ 50 ಕೋಟಿ ರೂ. ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 2 ಕೋಟಿ ರೂ.ಗಳು ಸೇರಿ ಒಟ್ಟು 52 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ …
Read More »ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ 117ನೇ ಜಯಂತಿ ಆಚರಣೆ
ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ 117ನೇ ಜಯಂತಿ ಆಚರಣೆ ಮೂಡಲಗಿ: ಸ್ಥಳೀಯ ಆರಾದ್ಯ ದೈವ, ವಾಕ್‍ಸಿದ್ದಿ ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ 117ನೇ ಜಯಂತಿ ಕಾರ್ಯಕ್ರಮವನ್ನು ಶ್ರೀಕಲ್ಮೇಶ್ವರ ವೃತ್ತದಲ್ಲಿ ಶುಕ್ರವಾರ ಜರುಗಿತು. ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ವೇದಮೂರ್ತಿ ಶ್ರೀ ಶಂಕ್ರಯ್ಯಾ ಹಿರೇಮಠ ಸ್ವಾಮಿಗಳು ನೆರವೇರಿಸಿದರು. ಶ್ರೀ ಶಿವಬೋಧರಂಗ ಸಿದ್ದ ಸಂಸ್ಥಾನಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೆಯಬೋಧ, ಶ್ರೀ ಶ್ರೀಧರಬೋಧ ಸ್ವಾಮಿಗಳು ಸಾನಿದ್ಯದಲ್ಲಿ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಟ್ಟಣದ …
Read More »ಸುಣಧೋಳಿಯ ಸರಕಾರಿ ಪ್ರೌಢ ಶಾಲೆಯ 9 ವಿದ್ಯಾರ್ಥಿಗಳಿಗೆ ದೃಢ
ಮೂಡಲಗಿ: ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದ ಸುಣಧೋಳಿಯ ಸರಕಾರಿ ಪ್ರೌಢ ಶಾಲೆಯ 9 ವಿದ್ಯಾರ್ಥಿಗಳಿಗೆ ದೃಢಪಟ್ಟಿದ್ದು, ಅಗತ್ಯ ಮುಂಜಾಗೃತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಶಾಲೆಗೆ ರಜೆ ನೀಡಿಲಾಗಿದೆ ಎಂದು ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಬುಧವಾರ ಸೋಂಕಿತ ವಿದ್ಯಾರ್ಥಿಗಳನ್ನು ಹಾಗೂ ಪ್ರೌಢ ಶಾಲೆಗೆ ಭೇಟಿ ನೀಡಿ, ಸ್ಥಳೀಯ ಗ್ರಾಮ ಪಂಚಾಯತ, ಆರೋಗ್ಯ ಇಲಾಖೆ, ಸ್ಥಳೀಯ ಎಸ್.ಡಿ.ಎಮ್.ಸಿಯವರ ಸಹಕಾರದಿಂದ ಸ್ಯಾನಿಟೈಸ್ ಮಾಡಿದ್ದಾರೆ. ಸೋಂಕಿಗೆ ಸೂಕ್ತ …
Read More »