Breaking News
Home / Recent Posts (page 169)

Recent Posts

ಸಾಧನೆ, ಸಾಹಸ-ಸೇವೆ ಜೀವನವನ್ನು ರೂಪಿಸುವ ಸೂತ್ರಗಳು-ಪ್ರೊ ಸುರೇಶ ಲಂಕೆಪ್ಪಣ್ಣವರ

ಸಾಧನೆ, ಸಾಹಸ-ಸೇವೆ ಜೀವನವನ್ನು ರೂಪಿಸುವ ಸೂತ್ರಗಳು-ಪ್ರೊ.ಲಂಕೆಪ್ಪಣ್ಣವರ ಮೂಡಲಗಿ: ವಿದ್ಯಾರ್ಥಿಗಳು ಸಾಧನ ಪ್ರವೃತಿ, ಸಾಹಸಶೀಲತೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು, ಈ ಮೂರು ನಿಮ್ಮ ಭಾವಿ ಭವಿಷ್ಯವನ್ನು ರೂಪಿಸುವ ಸೂತ್ರಗಳು ಎಂದು ಸುಣಧೋಳಿ ಶೀ ಜಡಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸುರೇಶ ಲಂಕೆಪ್ಪಣ್ಣವರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2020-21 ಸಾಲಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಸ್ಥಾನದಿಂದ ಮಾತನಾಡುತ್ತಿದ್ದ ಅವರು …

Read More »

ಬೆಟಗೇರಿ ಗಜಾನನ ಯುವಕ ಮಂಡಳಿಯವರಿಂದ ಗಣಪತಿ ಮೂರ್ತಿ ಸ್ಥಾಪನೆ

ಬೆಟಗೇರಿ ಗಜಾನನ ಯುವಕ ಮಂಡಳಿಯವರಿಂದ ಗಣಪತಿ ಮೂರ್ತಿ ಸ್ಥಾಪನೆ ಬೆಟಗೇರಿ:ಗ್ರಾಮದ ಗಜಾನನ ಯುವಕ ಮಂಡಳಿ ಸಹಯೋಗದಲ್ಲಿ ಸ್ಥಳೀಯ ಮಾರುಕಟ್ಟೆ ಆವರಣದಲ್ಲಿರುವ ಶ್ರೀ ಗಜಾನನ ವೇದಿಕೆಯಲ್ಲಿ ಸೆ.10 ರಂದು ಗಜಾನನ ಮೂರ್ತಿಯನ್ನು ಸ್ಥಾಪಿಸುವ ಕಾರ್ಯಕ್ರಮ ಅತ್ಯಂತ ಸರಳವಾಗಿ ನಡೆಯಿತು. ಬೆಟಗೇರಿ ಗ್ರಾಮದ ಗಜಾನನ ಯುವಕ ಮಂಡಳಿ ಅಧ್ಯಕ್ಷ ವೀರಣ್ಣ ಸಿದ್ನಾಳ ಸ್ಥಾಪಿಸಲ್ಪಟ್ಟ ಗಣಪತಿ ಮೂರ್ತಿಗೆ ಪುಷ್ಪಾರ್ಪನೆ ಸಮರ್ಪಿಸಿ ಮಾತನಾಡಿ, ವಿಘ್ನ ನಿವಾರಕ ಎಲ್ಲರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಲಿ, ಕಳೆದೆರಡು ವರ್ಷಗಳಿಂದ ಕರೊನಾ …

Read More »

ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರು ಶಿವನವತಾರಿಯಾಗಿದ್ದರು: ಚಿದಾನಂದ ಮಹಾಸ್ವಾಮಿಜಿ

ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರು ಶಿವನವತಾರಿಯಾಗಿದ್ದರು: ಚಿದಾನಂದ ಮಹಾಸ್ವಾಮಿಜಿ ಬೆಟಗೇರಿ:ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರು ಸಕಲರಿಗೆ ಒಳ್ಳೆಯದನ್ನೇ ಬಯಸಿದ ಮಹಾನ್ ಕರುಣಾಮಯಿ ಸದ್ಗುರುವಾಗಿದ್ದರು. ಸದ್ಗುರು ಸಿದ್ಧಾರೂಢರು ಶಿವನವತಾರಿಯಾಗಿದ್ದರು ಎಂದು ಮಲ್ಲಾಪೂರದ ಚಿದಾನಂದ ಮಹಾಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಸೆ.11 ರಂದು ನಡೆದ 37ನೇ ಸತ್ಸಂಗ ಸಮ್ಮೇಳನ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಲ್ಲಿಯ ಸತ್ಸಂಗ ಸಮ್ಮೇಳನಕ್ಕೆ ತನು, ಮನ, ಧನ ಸಹಾಯ, ಸಹಕಾರ …

Read More »

18 ವರ್ಷ ಮೇಲ್ಪಟ್ಟವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ, ಕೊರೋನಾ ಓಡಿಸಿ ಎಂಬ ಕೊರೋನಾ ಜಾಗೃತಿ

ಮೂಡಲಗಿ: ಚಿಲ್ಡ್ರನ್ ಆಫ್ ಇಂಡಿಯಾ ಮತ್ತು ಅಮ್ಮಾ ಫೌಂಡೇಶನ್ ರಾಯಬಾಗ ಹಾಗೂ ಸೇವಕ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಲಸಿಕಾ ಆಂದೋಲನ ಯೋಜನೆಯ ಗುಡ್ ಯೋಜನೆ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕಿನ ಕಲ್ಲೋಳಿ, ತುಕ್ಕಾನಟ್ಟಿ, ಖಾನಟ್ಟಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ, 18 ವರ್ಷ ಮೇಲ್ಪಟ್ಟವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ, ಕೊರೋನಾ ಓಡಿಸಿ ಎಂಬ ಕೊರೋನಾ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಿ ಜಾಗೃತಿ …

Read More »

ಗುರು ಶಿಷ್ಯರ ಸಂಬಂಧವು ಪವಿತ್ರವಾದದ್ದು

ಗುರು ಶಿಷ್ಯರ ಸಂಬಂಧವು ಪವಿತ್ರವಾದದ್ದು ಮೂಡಲಗಿ: ‘ಗುರು ಶಿಷ್ಯರ ಸಂಬಂಧವು ಪವಿತ್ರವಾಗಿದ್ದು,ವಿಧೆಯತೆಯ ಮೂಲಕ ಗುರುವಿನ ಸಾಕಾರತೆಯನ್ನು ಶಿಷ್ಯರು ಕಾಣಬೇಕು’ ಎಂದು ಬ್ರಹ್ಮಕುಮಾರಿ ರೇಖಾಜೀ ಅವರು ಹೇಳಿದರು. ಇಲ್ಲಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಚರಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತರು ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಗುರು ಆದವರು ಶಿಷ್ಯರನ್ನು ಬೆಳೆಸುವ ಎಲ್ಲ ಸಾಮಥ್ರ್ಯವನ್ನು ಹೊಂದಿರಬೇಕು ಎಂದರು. ಗುರು ಜ್ಞಾನವನ್ನು ನೀಡುವ ಪುಸ್ತಕದ ಭಂಡಾರವಿದ್ದಂತೆ. ಎಲ್ಲರನ್ನು ಜ್ಞಾನವಂತರನ್ನಾಗಿಸಿ ಆದರ್ಶ ಜೀವನಕ್ಕೆ …

Read More »

ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ

ಮೂಡಲಗಿ: ಪ್ರತಿಯೋಬ್ಬರು ತಮ್ಮ ಸುತ್ತಮೂತಲಿನ ಪರಿಸರದ ಸ್ವಚ್ಚತೆಯೊಂದಿಗೆ ಸರಕಾರವು ಅಂಗನವಾಡಿ ಕೇಂದ್ರಗಳ ಮುಖಾಂತರ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೂಡಲಗಿ ಪುರಸಭೆಯ ಹಿರಿಯ ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೊಡ ಹೇಳಿದರು. ಅವರು ಪಟ್ಟಣದ ವಿದ್ಯಾನಗರದಲ್ಲಿನ 403ರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಪೌಷ್ಠಿಕತೆ …

Read More »

ಗಣೇಶೋತ್ಸವದಲ್ಲಿ ಕೋವಿಡ್ ನಿಯಮ ಮೀರಿದರೆ ಶಿಸ್ತುಕ್ರಮ: ಕಲ್ಮೇಶ ಬಾಗಲಿ

ಗಣೇಶೋತ್ಸವದಲ್ಲಿ ಕೋವಿಡ್ ನಿಯಮ ಮೀರಿದರೆ ಶಿಸ್ತುಕ್ರಮ: ಕಲ್ಮೇಶ ಬಾಗಲಿ ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ, ಹೆಸ್ಕಾಂ ಹಾಗೂ ಪೊಲೀಸ್ ಇಲಾಖೆಗಳ ಅನುಮತಿ ಇಲ್ಲದೆ ಗ್ರಾಮದಲ್ಲಿ ಸಾರ್ವಜನಿಕ ಗಣಪತಿ ಸ್ಥಾಪಿಸಲು ಅನುಮತಿ ಇರುವುದಿಲ್ಲಾ, ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಸ್ಥಳೀಯ ಬೀಟ್ ಪೊಲೀಸ್ ಪೇದೆ ಕಲ್ಮೇಶ ಬಾಗಲಿ ಹೇಳಿದರು. ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಪಿಎಸ್‍ಐ ಹನಮಂತ ನರಳೆ ಅವರ …

Read More »

ಸುಪ್ತ ಮನಸ್ಸಿನ ಶಕ್ತಿಯಿಂದ ಮನುಷ್ಯನ ಸಾಧನೆಗೆ ದಾರಿ

  ಸುಪ್ತ ಮನಸ್ಸಿನ ಶಕ್ತಿಯಿಂದ ಮನುಷ್ಯನ ಸಾಧನೆಗೆ ದಾರಿ ಮೂಡಲಗಿ: ‘ಪ್ರತಿಯೊಬ್ಬರಲ್ಲಿ ಇರುವ ಸುಪ್ತ ಮನಸ್ಸನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಸಾಧನೆ ಮತ್ತು ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಭಾರತೀಯ ಸೇನೆಯ ಕರ್ನಲ್ ಹಾಗೂ ಆಧ್ಯಾತ್ಮಿಕ ಚಿಂತಕ ಡಾ. ಪರುಶರಾಮ ನಾಯಿಕ ಹೇಳಿದರು. ಇಲ್ಲಿಯ ಶಿವಬೋಧರಂಗ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾ ಭವನದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದಿಂದ ಆಚರಿಸಿದ ಶಿಕ್ಷಕರ ದಿನಾರಣೆ, ಪ್ರಶಸ್ತಿ ಪ್ರದಾನ …

Read More »

ಬಸವರಾಜ ಪತ್ರೇಪ್ಪ ಕಮತಗಿ ಸುಧೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ

ಮೂಡಲಗಿಯ ಬಸವರಾಜ ಪತ್ರೇಪ್ಪ ಕಮತಗಿ ಅವರು ಚಿಕ್ಕೋಡಿ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಛೇರಿ ಸಹಾಯಕರಾಗಿ ಸುಧೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಯುಕ್ತ ಅವರನ್ನು ಸನ್ಮಾನಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ವಿ.ಎಮ್, ವಿಭಾಗೀಯ ಸಂಚಾರಿ ಅಧಿಕಾರಿ ರಾಜಶೇಖರ ವಾಜಂತ್ರಿ, ಲೆಕ್ಕಾಧಿಕಾರಿ ಸಂಜಯ ಮಾಳಿ, ಸಹಾಯಕ ಆಡಳಿತಾಧಿಕಾರಿ ವಿದ್ಯಾ ಕಾಂಬಳೆ, ಸಹಾಯ ಸಂಚಾರ ವ್ಯವಸ್ಥಾಪಕ ಅಪ್ಪಣ್ಣ ಚಬ್ಬಿ ಹಾಗೂ ಕಚೇರಿ …

Read More »

ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂರ್ವಭಾವಿ ಸಭೆ

ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂರ್ವಭಾವಿ ಸಭೆ ಮೂಡಲಗಿ : ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಆಚರಣೆ ಮಾಡಬೇಕೆಂದು ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ಹೇಳಿದರು. ಮಂಗಳವಾರದಂದು ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಜರುಗಿದ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಮಿತ್ಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ಸಾರ್ವಜನಿಕ …

Read More »