inmudalgi
ಜುಲೈ 19, 2021 Recent Posts, ತಾಲ್ಲೂಕು, ಬೆಳಗಾವಿ
ರೈತರು ಆರ್ಥಿಕ ಸ್ವಾವಲಂಬಿಗಳಾಗಲು ಸರ್ಕಾರದ ಯೋಜನೆಗಳು ಪೂರಕವಾಗಿವೆ -ಸಂಸದ ಈರಣ್ಣ ಕಡಾಡಿ ಮೂಡಲಗಿ: ಅನ್ನದಾತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ಸಿರಿ, ಪಿ.ಎಂ ಕಿಸಾನ್, ಆತ್ಮ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಅವುಗಳನ್ನು ರೈತರು ಸದುಪಯೋಗ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕರೆ ನೀಡಿದರು. ತಾಲೂಕಿನ ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದ ಆವರಣದಲ್ಲಿ …
Read More »
inmudalgi
ಜುಲೈ 18, 2021 Recent Posts, ತಾಲ್ಲೂಕು, ಬೆಳಗಾವಿ
ಕಲ್ಲೋಳಿ ಪಿಕೆಪಿಎಸ್‍ಗೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ 50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹೊಂದುತ್ತಿರುವುದು ಪ್ರಶಂಸನೀಯ ಮೂಡಲಗಿ : ಶತಮಾನೋತ್ಸವ ಆಚರಿಸಿರುವ ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಈ ಭಾಗದಲ್ಲಿ ರೈತರಿಗೆ ಸಿಗಬೇಕಿರುವ ಎಲ್ಲ ಸವಲತ್ತುಗಳನ್ನು ನೀಡುತ್ತ ಬರುತ್ತಿದೆ. ಈ ಹಿಂದೆ 8 ಕೋಟಿ ರೂ.ಗಳಷ್ಟಿದ್ದ ಪತ್ತನ್ನು 15 ಕೋಟಿ ರೂ.ಗಳವರೆಗೆ ಹೆಚ್ಚಿಸಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಿದೆ ಎಂದು ಶಾಸಕ …
Read More »
inmudalgi
ಜುಲೈ 18, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಲಗಿ ವಲಯದ ನಾಗನೂರ ಗ್ರಾಮದ ಭಗೀರಥ ಶಾಲೆಯ ಆವರಣದಲ್ಲಿ ಗಿಡ ನಾಟಿ ಮಾಡಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿ ಭಗೀರಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪರಸಪ್ಪ ಎಲ್.ಬಬಲಿ ಮಾತನಾಡಿ ಸರ್ಕಾರವು ಜನರಿಗೆ ಗ್ಯಾಸ್ ಸಿಲೆಂಡರ್ ನೀಡುವುದರ ಮುಖಾಂತರ ಪರಿಸರದ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೂಡ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳ …
Read More »
inmudalgi
ಜುಲೈ 18, 2021 Recent Posts, ತಾಲ್ಲೂಕು, ಬೆಳಗಾವಿ
ಯಾದವಾಡದಲ್ಲಿ ಉಳ್ಳಾಗಡ್ಡಿ ಬೆಳೆಯ ಕ್ಷೇತ್ರಕ್ಕೆ ವಿಜ್ಷಾನಿಗಳು ಭೇಟಿ ಮೂಡಲಗಿ: ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಗೋಕಾಕ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಮೂಡಲಗಿ ತಾಲೂಕಿನ ಯಾದವಾಡÀ ಗ್ರಾಮದ ಉಳ್ಳಾಗಡ್ಡಿ ಬೆಳೆಯ ರೋಗ ಪೀಡಿತ ಕ್ಷೇತ್ರಗಳಿಗೆ ವಿಜ್ಞಾನಿಗಳು ಭೇಟಿ ನೀಡಿದರು. ಈ ಕ್ಷೇತ್ರ ಭೇಟಿಯಲ್ಲಿ ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ವಿಜ್ಞಾನಿಗಳಾದ ಡಾ. …
Read More »
inmudalgi
ಜುಲೈ 17, 2021 Recent Posts, ತಾಲ್ಲೂಕು, ಬೆಳಗಾವಿ
ತುರ್ತು ವಾಹನ ಓಡಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ. ಬೆಟಗೇರಿ:ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಮ್ಮ 2021-22ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿಯಲ್ಲಿ ನೀಡಿರುವ ನೂತನ ಅಂಬ್ಯುಲೆನ್ಸ್ ವಾಹನ ಸಮರ್ಪಿಸಿ ಜುಲೈ.17 ರಂದು ನಡೆದ ಕಾರ್ಯಕ್ರಮದಲ್ಲಿ ತುರ್ತು ವಾಹನ ಓಡಾಟಕ್ಕೆ ಚಾಲನೆ ನೀಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ವಾಹನದ ಚಾಲಕನ ಕುರ್ಚಿಯಲ್ಲಿ ತಾವೇ ಕುಳಿತು ತುರ್ತು ನೂತನ …
Read More »
inmudalgi
ಜುಲೈ 17, 2021 Recent Posts, ತಾಲ್ಲೂಕು, ಬೆಳಗಾವಿ
ಹಳ್ಳೂರ : ಗಾಂಧಿನಗರ-ಬಸವನಗರ ರಸ್ತೆ ನಿರ್ಮಾಣಕ್ಕೆ 75 ಲಕ್ಷ ರೂ.- ಶಾಸಕ ಬಾಲಚಂದ್ರ ಜಾರಕಿಹೊಳಿ ಹಳ್ಳೂರ ಗ್ರಾಮದಲ್ಲಿ 1.76 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ದೇಶದ ಪ್ರತಿ ಮನೆ ಮನೆಗೆ ನಳಗಳ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಕುಡಿಯುವ ನೀರಿನ ಯೋಜನೆಯನ್ನು ಎಲ್ಲರೂ …
Read More »
inmudalgi
ಜುಲೈ 17, 2021 Recent Posts, ತಾಲ್ಲೂಕು, ಬೆಳಗಾವಿ
ಮನೆಯಲ್ಲೆ ಬಕ್ರೀದ್ ಆಚರಿಸಿ ಮೂಡಲಗಿ: ತ್ಯಾಗ,ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಈ ಬಾರಿಯೂ ಸರಳವಾಗಿ ಮನೆಯಲ್ಲೆ ಸರಳವಾಗಿ ಆಚರಿಸಬೇಕೆಂದು ಸಿಪಿಐ ವೆಂಕಟೇಶ ಮುರನಾಳ ಹೇಳಿದರು. ಶನಿವಾರದಂದು ಪೋಲಿಸ್ ಠಾಣೆಯಲ್ಲಿ ಕರೆದ ಬಕ್ರೀದ್ ಹಬ್ಬದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ 3ನೇ ಅಲೆಯ ಭೀತಿ ಇರುವುದರಿಂದ ಹಾಗೂ ಜನತೆಯ ಆರೋಗ್ಯ ಹಿತದೃಷ್ಟಿಯಿಂದ ಸರಕಾರದ ಕೋವಿಡ್ ನಿಯಮಗಳನ್ನು ಎಲ್ಲರೂ ಪಾಲಿಸುವುದು ಅನಿವಾರ್ಯ ಹಾಗೂ ಜವಾಬ್ದಾರಿಯೂ ಆಗಿದೆ ಕಾರಣ ಮುಸ್ಲಿಮ ಬಾಂಧವರು ಸಾಮೂಹಿಕ …
Read More »
inmudalgi
ಜುಲೈ 17, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ ವಲಯ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಪೂರ್ಣ ಸಿದ್ದ ಮೂಡಲಗಿ: ‘ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಾಗಿ ನಿಯೋಜನೆಗೊಂಡಿರುವ 35 ಪರೀಕ್ಷಾ ಕೇಂದ್ರಗಳು ಇಲಾಖೆಯ ಮಾರ್ಗಸೂಚಿಯಂತೆ ಪೂರ್ಣವಾಗಿ ಸಿದ್ದಗೊಂಡಿವೆ’ ಎಂದು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪದನಿಮಿತ್ತ ಸಹ ನಿರ್ದೇಶಕ ರಾಜೀವ ವಿ. ನಾಯ್ಕ ಹೇಳಿದರು. ತಾಲ್ಲೂಕಿನ ಗುರ್ಲಾಪುರ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಸಿದ್ದತೆಯನ್ನು ಪರಿಶೀಲಿಸಿ ಮಾತನಾಡಿದ ಅವರು …
Read More »
inmudalgi
ಜುಲೈ 17, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಪ್ರಧಾನಿ ನರೇಂದ್ರ ಮೋದಿಯವರು ಪರೀಕ್ಷೆಯನ್ನು ಹಬ್ಬದ ರೀತಿ ಆಚರಣೆ ಮಾಡಿ ಎಂದು ಹೇಳಿರುವುದರಿಂದ ಪರೀಕ್ಷೆಯನ್ನು ಹೆದರದೇ ಎದುರಿಸಬೇಕು, ಕೋವಿಡ್ ಬಗ್ಗೆ ಹೆದರದೇ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪರೀಕ್ಷೆ ಬರೆಯಿರಿ, ಶೈಕ್ಷಣಿಕವಾಗಿ ಎತ್ತರಕ್ಕೆ ಬೆಳೆಯಿರಿ ವಿಧ್ಯಾರ್ಥಿಗಳಿಗೆ ಶುಭವಾಗಲಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾರೈಸಿದರು. ಶನಿವಾರ ಜುಲೈ 17 ರಂದು ಕಲ್ಲೋಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಮಾತನಾಡಿದ ಈರಣ್ಣ ಕಡಾಡಿ …
Read More »
inmudalgi
ಜುಲೈ 16, 2021 Recent Posts, ತಾಲ್ಲೂಕು, ಬೆಳಗಾವಿ
ಗೋಕಾಕ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುವ ಅಲೆಮಾರಿ/ಅರೆಅಲೆಮಾರಿ ಆಶ್ರಮ ಶಾಲೆಗೆ 2021/22 ಸಾಲಿಗಾಗಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಶ್ರಮ ಶಾಲೆಗೆ ಅಲೆಮಾರಿ/ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುವುದು. 1ನೇ ವರ್ಗದಿಂದ 5ನೇ ವರ್ಗದ ವರೆಗೆ ಪ್ರವೇಶಾತಿಗೆ ಅವಕಾಶವಿದ್ದು, ಉಚಿತವಾಗಿ ಊಟ-ವಸತಿ, ಪಠ್ಯ-ಪುಸ್ತಕ ಸೇರಿದಂತೆ ಮೂಲಭೂತ ಸೌಕರ್ಯಗಳು ಇರುತ್ತವೆ. ಸದ್ಯ ಕೋವಿಡ್-19 ಹಿನ್ನಲೆಯಲ್ಲಿ ಸದ್ಯ ದಾಖಲಾತಿ ಮಾತ್ರ ಮಾಡಿಕೊಳ್ಳಲಾಗುವುದು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಹಿಂದುಳಿದ ವರ್ಗಗಳ …
Read More »