Breaking News

TimeLine Layout

ಫೆಬ್ರವರಿ, 2022

  • 16 ಫೆಬ್ರವರಿ

    ಕುಲಗೋಡದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿ ಆಚರಣೆ

    ಕುಲಗೋಡದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿ ಆಚರಣೆ ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದಲ್ಲಿ ಗ್ರಾಮದ ಹರಳಯ್ಯ ಸಮಾಜ ಮತ್ತು ಶ್ರೀ ಮಹಾ ಶಿವಶರಣ ಹರಳಯ್ಯ ಸಮಾಜ ಯುವಕ ಸಂಘದ ಆಶ್ರಯದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿಯನ್ನು ಆಚರಿಸಿದರು. ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯ ಗೋವಿಂದಪ್ಪ ಕೊಪ್ಪದ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾ.ಪಂ ಮಾಜಿ ಸದಸ್ಯ ಸುಭಾಸ ಒಂಟಗೋಡಿ, ಗ್ರಾ.ಪಂ ಸದಸ್ಯ ಸತೀಶ ಒಂಟಗೋಡಿ, ಪಾರಿಜಾತ ಪ್ರತಿಷ್ಠಾಣದ ಅಧ್ಯಕ್ಷ …

    Read More »
  • 16 ಫೆಬ್ರವರಿ

    ಸವದತ್ತಿ ಯಲ್ಲಮ್ಮದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ: ವೀರಭದ್ರ ನೀಲಣ್ಣವರ ಬೆಟಗೇರಿ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಸಂಪನ್ನ ಸಂಭ್ರಮದಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳು

    ಸವದತ್ತಿ ಯಲ್ಲಮ್ಮದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ: ವೀರಭದ್ರ ನೀಲಣ್ಣವರ ಬೆಟಗೇರಿ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಸಂಪನ್ನ ಸಂಭ್ರಮದಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳು ಬೆಟಗೇರಿ:ಬಹಳ ಹಿಂದಿನಿಂದಲೂ ನಮ್ಮ ದೇಶದ ಜನರು ದೇವರ ಮೇಲೆ ಅಪಾರ ಭಯ, ಭಕ್ತಿಯುಳ್ಳವರಾಗಿದ್ದಾರೆ. ಪ್ರತಿಯೊಬ್ಬರೂ ಧಾರ್ಮಿಕ ಪರಂಪರೆ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ ಎಂದು ಪೊಲೀಸ್ ಇಲಾಖೆಯ ನಿವೃತ್ತ ಎಎಸ್‍ಐ ವೀರಭದ್ರ ನೀಲಣ್ಣವರ ಹೇಳಿದರು. ಭಾರತ ಹುಣ್ಣಿಮೆ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಫೆ.16 ರಂದು …

    Read More »
  • 16 ಫೆಬ್ರವರಿ

    ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳು ಪ್ರಾರಂಭ-ಸುಣಗಾರ ಕರೆ

    ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳು ಪ್ರಾರಂಭ-ಸುಣಗಾರ ಕರೆ ಅಂಗನವಾಡಿ ಕಾರ್ಯಕರ್ತರ ಕಾರ್ಯ ಶ್ಲಾಘನೀಯ ಮೂಡಲಗಿ:ಪೂರ್ಣ ಪ್ರಮಾಣದಲ್ಲಿ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಿದ್ದು ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಬರುವಂತೆ ಪ್ರೇರಿಪಿಸಬೇಕೆಂದು ಮೇಲ್ವಿಚಾರಕಿ ಚಂಪಾ ಸುಣಗಾರ ಕರೆ ನೀಡಿದರು. ತಾಲೂಕಿನ ಕಲ್ಲೋಳಿ ಪಟ್ಟಣದ 421 ರ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡಿಯುವಂತೆ ಅಂಗನವಾಡಿಗಳು ಕಂಗೋಳಿಸುತ್ತಿವೆ ಎಂದರು. ಮಹಿಳೆಯರ …

    Read More »
  • 16 ಫೆಬ್ರವರಿ

    ಶ್ರೀ ರೇವಣಸಿದ್ಧೇಶ್ವರ ಸಹಕಾರಿಸಂಘದ ಶಾಖೆ ಉದ್ಘಾಟನೆ

    ಶ್ರೀ ರೇವಣಸಿದ್ಧೇಶ್ವರ ಸಹಕಾರಿಸಂಘದ ಶಾಖೆ ಉದ್ಘಾಟನೆ ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ರಾಯಬಾಗ ತಾಲೂಕಿನ ಜೋಡಹಟ್ಟಿಯ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ವಿವಿಧ ಉದ್ಧೇಶಗಳ ಸಹಕಾರಿ ಸಂಘ ಶಾಖೆಯ ಉದ್ಘಾಟನಾ ಸಮಾರಭ ಪಟ್ಟಣದ ಪುರಸಭೆ ಹತ್ತಿರ ಢವಳೇಶ್ವರ ಕಟ್ಟಡದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಡೋಣವಾಡದ ದುರದುಂಡೇಶ್ವರ ಆಶ್ರಮದ ಶ್ರೀ ಶಿವಾನಂದ ಮಹಾಸ್ವಾಮಿಜಿ ಮಾತನಾಡಿ, ಸಿಬ್ಬಂದಿ ವರ್ಗದವರ ಹಾಗೂ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಮತ್ತು μÉೀರುದಾರ, ಗ್ರಾಹಕರ ಪ್ರಾಮಾಣಿಕವಾಗಿ ಸಹಕಾರ ನೀಡಿದಲ್ಲಿ …

    Read More »
  • 16 ಫೆಬ್ರವರಿ

    ‘ಚಂಬೆಳಕಿನ’ ಕವಿ ಡಾ. ಚೆನ್ನವೀರ ಕಣವಿ ನಿಧನ-ಸಂಸದ ಈರಣ್ಣ ಕಡಾಡಿ ಸಂತಾಪ

    ‘ಚಂಬೆಳಕಿನ’ ಕವಿ ಡಾ. ಚೆನ್ನವೀರ ಕಣವಿ ನಿಧನ-ಸಂಸದ ಈರಣ್ಣ ಕಡಾಡಿ ಸಂತಾಪ ಮೂಡಲಗಿ: ‘ಚಂಬೆಳಕಿನ’ ಕವಿ ಎಂದೇ ಹೆಸರಾಗಿದ್ದ, ಹಿರಿಯ ಸಾಹಿತಿ ನಾಡೋಜ ಡಾ. ಚೆನ್ನವೀರ ಕಣವಿ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂತಾಪ ವ್ಯಕ್ತಪಡಿಸಿದರು. ಬುಧವಾರ ಫೆ-16 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ …

    Read More »
  • 16 ಫೆಬ್ರವರಿ

    ನಾಡೋಜ ಚೆನ್ನವೀರ ಕಣವಿ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

    ನಾಡೋಜ ಚೆನ್ನವೀರ ಕಣವಿ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ : ಕನ್ನಡ ಸಾರಸ್ವತ ಲೋಕದ ದಿಗ್ಗಜ ಸಾಹಿತಿ, ನಾಡೋಜ ಡಾ. ಚೆನ್ನವೀರ ಕಣವಿ ಅವರ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಡಾ. ಚೆನ್ನವೀರ ಕಣವಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ …

    Read More »
  • 6 ಫೆಬ್ರವರಿ

    ಫೆ. 9ರಂದು  ರಾಜಾಪುರದಲ್ಲಿ   ರೈತ ದಿನಾಚರಣೆ ಆಚರಣೆ, ಮಣ್ಣು ಆರೋಗ್ಯ ಚಿಂತನ ಕಾರ್ಯಕ್ರಮ

    ಫೆ. 9ರಂದು  ರಾಜಾಪುರದಲ್ಲಿ   ರೈತ ದಿನಾಚರಣೆ ಆಚರಣೆ, ಮಣ್ಣು ಆರೋಗ್ಯ ಚಿಂತನ ಕಾರ್ಯಕ್ರಮ ಮೂಡಲಗಿ: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಗೋಕಾಕ ತಾಲ್ಲೂಕು ಘಟಕದಿಂದ ತಾಲ್ಲೂಕಿನ ರಾಜಾಪುರ ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಫೆ. 9ರಂದು ಬೆಳಿಗ್ಗೆ 10ಕ್ಕೆ ರೈತ ದಿನಾಚರಣೆ ಮತ್ತು ಮಣ್ಣು ಆರೋಗ್ಯ ಕುರಿತು ಚಿಂತನ ಕಾರ್ಯಕ್ರಮವನ್ನು ಏರ್ಪಡಿಸಿರುವರು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬಿ. ಬೆಳಕೂಡ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಜಾಪುರ ಗ್ರಾಮ ಪಂಚಾಯ್ತಿ …

    Read More »
  • 6 ಫೆಬ್ರವರಿ

    ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ-ಸಂಸದ ಕಡಾಡಿ ಸಂತಾಪ

    ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ-ಸಂಸದ ಕಡಾಡಿ ಸಂತಾಪ ಮೂಡಲಗಿ: ಏಳು ದಶಕಗಳ ಕಾಲ ತಮ್ಮ ಗಾನಸುಧೆಯಿಂದ ಸಂಗೀತ ಜಗತ್ತನ್ನು ಶ್ರೀಮಂತಗೊಳಿಸಿದ ಗಾನ ಕೋಗಿಲೆ, ಭಾರತರತ್ನ, ಪದ್ಮ ವಿಭೂಷಣ, ಲತಾ ಮಂಗೇಶ್ಕರ್ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂತಾಪ ವ್ಯಕ್ತಪಡಿಸಿದರು. ರವಿವಾರ ಫೆ-06 ರಂದು ಪತ್ರಿಕಾ ಹೇಳಿಕೆ …

    Read More »
  • 6 ಫೆಬ್ರವರಿ

    ದಿನನಿತ್ಯ ಜೀವನದಲ್ಲಿ ಧ್ಯಾನ ಯೋಗ ಪ್ರಾಣಾಯಾಮ ಮಾಡುವುದು ಅತಿ ಅವಶ್ಯಕವಾಗಿದೆ : ಪಿಎಸ್ಐ ಹಾಲಪ್ಪ ಬಾಲದಂಡಿ

    ಮೂಡಲಗಿ: ಯುವಕರು ಸುಂದರ ಜೀವನ ಪ್ರತಿನಿತ್ಯ ಕಳೆಯಬೇಕಾದರೆ ದಿನನಿತ್ಯ ಜೀವನದಲ್ಲಿ ಧ್ಯಾನ ಯೋಗ ಪ್ರಾಣಾಯಾಮ ಮಾಡುವುದು ಅತಿ ಅವಶ್ಯಕವಾಗಿದೆ ಎಂದು ಮೂಡಲಗಿ ಪಿಎಸ್ಐ ಹಾಲಪ್ಪ ಬಾಲದಂಡಿ ಹೇಳಿದರು. ಅವರು ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರ ನೆಹರು ಯುವ ಕೇಂದ್ರ ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಹಾಗೂ ಪೂರ್ವಿ ಕ್ರೀಡಾ …

    Read More »
  • 6 ಫೆಬ್ರವರಿ

    ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶೋಕ.

    ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶೋಕ. ಗೋಕಾಕ: ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಲತಾಜೀ ಅವರು ನಮ್ಮ ದೇಶದ ಅಮೂಲ್ಯ ಆಸ್ತಿಯಾಗಿದ್ದರು. ಸುಮಾರು ಏಳು ದಶಕಗಳಿಂದ ದೇಶದ ವಿವಿಧ ಭಾಷೆಗಳಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಹಾಡುಗಳನ್ನು ತಮ್ಮ ಕಂಠಸಿರಿಯಲ್ಲಿ ನಮಗೆಲ್ಲ …

    Read More »