ಯುಗಾದಿ ರಾಶಿ ಭವಿಶ್ಯ ವಿಶೇಷ ಅಂಕಣ
ಸಮಸ್ತ ಜನತೆಗೆ ಶಾರ್ವರಿ ನಾಮ ಸಂವತ್ಸರದ ಶುಭಾಯಗಳು. ಈ ವರ್ಷ ಬುಧ ರಾಜ. ಚಂದ್ರ ಮಂತ್ರಿ ಹಾಗೂ ಗುರು ಸಸ್ಯದಿಪತಿ. ಹಾಗು ಕುಜ ಧಾನ್ಯದಿಪತಿ . ಸಂವತ್ಸರದ ದ್ವಾದಶ ರಾಶಿಗಳ ಫಲ ತಿಳಿಯೋಣ.
ಮೇಷ.
ವರ್ಷಾದಿ ಯಿಂದ ನವೆಂಬರ್ ತಿಂಗಳವರೆಗೂ ಗುರುವೂ ಅಶುಭ ಫಲವನ್ನು ಹಾಗೂ ಶನಿ ಗ್ರಹವು ವರ್ಷ ಪೂರ್ತಿ ಅಶುಭ ಫಲವನ್ನು ಕೊಡುತ್ತಾನೆ ವ್ಯವಹಾರದಲ್ಲಿ ನಷ್ಟ ಅನಗತ್ಯ ಖರ್ಚು ಅನಗತ್ಯ ಪ್ರಯಾಣ ಆರ್ಥಿಕ ನಷ್ಟ. ನವೆಂಬರ್ ತಿಂಗಳ ನಂತರ ಗುರು ಗ್ರಹವು ಲಾಭ ಸ್ಥಾನಕ್ಕೆ ಬರುವುದರಿಂದ ಕೊಂಚ ನೆಮ್ಮದಿ ಇದೆ ಹಾಗೂ ಅಭಿವೃದ್ಧಿ ಕಾಣಬಹುದಾಗಿದೆ.
ವೃಷಭ.
ನವೆಂಬರ್ 2020 ರ ವರೆಗು ಗುರುವು ಶುಭವಾಗಿದ್ದು. ಯತ್ನ ಕಾರ್ಯದಲ್ಲಿ ಯಶಸ್ಸು ಗಳಿಸುವುದು ನಿಶ್ಚಿತ. ಆರ್ಥಿಕ ಪ್ರಗತಿ, ಹೊಸ ಕೆಲಸಕ್ಕೆ ಚಾಲನೆ, ದಂಪತಿಗಳಿಗೆ ಸಂತಾನ ಯೋಗ, ಶನಿ ಗ್ರಹದ ಪ್ರಭಾವದಿಂದ ಅನಗತ್ಯ ಖರ್ಚು ತಿರುಗಾಟ ಮಾನಸಿಕ ಒತ್ತಡ.
ಮಿಥುನ.
ಸಂವತ್ಸರದ ಪ್ರಾರಂಭದಲ್ಲಿ ಗುರು ಮತ್ತು ಶನಿ ಗ್ರಹವು ಅಶುಭ ಫಲವನ್ನು ನೀಡುತ್ತಿದ್ದು, ಕಾರ್ಯಹಾನಿ ಅನಗತ್ಯ ಪ್ರಯಾಣ ಅವಮಾನ ವಸ್ತು ಗಳು ಕಳೆದು ಹೋಗುವ ಭೀತಿ ಚಿಂತೆ, ನವೆಂಬರ್ ತಿಂಗಳ ನಂತರ ಗುರು ಗ್ರಹದ ಪ್ರಭಾವದಿಂದ ಶುಭ ಫಲವನ್ನು ಹಾಗೂ ಬಂದು ಮಿತ್ರರ ಸಹಾಯ ಕಾರ್ಯದಲ್ಲಿ ಯಶಸ್ಸು.
ಕಟಕ ರಾಶಿ.
ಶನಿ ಗ್ರಹವು ವರ್ಷ ಪೂರ್ತಿ ಅಶುಭ ಫಲವನ್ನು ಕೊಡುತ್ತಾನೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ ನೋಡಿ ಕಾರ್ಯ ಹಾನಿ.ಪರ ಸ್ಥಳ ವಾಸ ಅವಮಾನ ಅನಾರೋಗ್ಯ ಭೀತಿ ಚಿಂತೆ ನವೆಂಬರ್ ತಿಂಗಳ ನಂತರ ಗುರು ಗ್ರಹವು ಶುಭ ಫಲವನ್ನು ಕೊಡುತ್ತಾನೆ ಬಂಧು ಬಳಗ ದ ಸಹಾಯ ಮತ್ತು ಸಹಕಾರ ಕಾರ್ಯ ಲಾಭ.
ಸಿಂಹ.
ವರ್ಷದ ಮೊದಲಾರ್ಧ ಶನಿ ಗ್ರಹವು ಶುಭ ಫಲವನ್ನು ಕೊಡುತ್ತಾನೆ ಧನ ಲಾಭ, ಕಾರ್ಯ ಲಾಭ ಬಂಧು ಸನ್ಮಾನ ಆರ್ಥಿಕ ಪ್ರಗತಿ ಆಭರಣ ಲಾಭ. ನವೆಂಬರ್ ತಿಂಗಳ ನಂತರ ಗುರು ಗ್ರಹವು ಶುಭ ಫಲವನ್ನು ಕೊಡುತ್ತಾನೆ ಧನ ಲಾಭ ಪ್ರಗತಿ , ಧರ್ಮ ಕಾರ್ಯದಲ್ಲಿ ಆಸಕ್ತಿ.
ಕನ್ಯಾ.
ಕನ್ಯಾ ರಾಶಿಯವರಿಗೆ ಶಾರ್ವರಿ ನಾಮ ಸಂವತ್ಸರ ಮಿಶ್ರ ಫಲ ನೀಡುತ್ತದೆ ಶನಿ ಗ್ರಹದ ಪ್ರಭಾವದಿಂದ ದಾನ ಕಾರ್ಯದಲ್ಲಿ ಆಸಕ್ತಿ ಕುಟುಂಬ ದಲ್ಲಿ ಮನಸ್ತಾಪ. ಕ್ಲೇಶ. ಗುರು ವಿಂದಾಗಿ ಉತ್ತಮ ಆರೋಗ್ಯ ಪ್ರಗತಿ ಇಷ್ಟ ಕಾರ್ಯ ನೆಡೆಯುವ ಸಂಭವ.
ತುಲಾ ರಾಶಿ.
ಗುರು ಮತ್ತು ಶನಿ ಇಬ್ಬರು ಅಶುಭರಾಗಿದ್ದು ಅನಾರೋಗ್ಯ ಭೀತಿ, ಸ್ನೇಹಿತರು ಹಾಗೂ ಬಂಧು ಬಳಗದಿಂದ ತೊಂದರೆ ಪರ ಸ್ಥಳ ವಾಸ, ಕಾರ್ಯ ಹಾನಿ ಹಣ ಕಾಸಿನ ತೊಂದರೆ.
ವೃಶ್ಚಿಕ ರಾಶಿ.
ಶನಿ ಗ್ರಹವು ವರ್ಷ ಪೂರ್ತಿ ಉತ್ತಮ ಫಲ ನೀಡಿ ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಶುಭ ಕಾರ್ಯ ಯಶಸ್ಸು. ಗುರುವಿನಿಂದ ಕಾರ್ಯ ವಿಳಂಬ ಹಣಕಾಸಿನ ಮುಗ್ಗಟ್ಟು.
ಧನುಶು ರಾಶಿ.
ಶುಭ ಫಲದಾತ ಗುರು ಮನಸ್ಸಿಗೆ ಆನಂದ ನೆಮ್ಮದಿ ಲಾಭ ಪ್ರಗತಿ ಹಾಗೂ ಪ್ರವಾಸ ಸಾಹಿತ್ಯಗಳ ಸುಖ ನೀಡುತ್ತಾನೆ. ಕರ್ಮಾದಿ ಪತಿ ಶನಿ ಅನಗತ್ಯ ಪ್ರಯಾಣ ಅವಮಾನ ಸೇವಕರಿಂದ ಮೋಸ ನೋವು ಹಾಗೂ ನಷ್ಟ ನೀಡುತ್ತಾನೆ.
ಮಕರ ರಾಶಿ.
ಶನಿಯ ದೃಷ್ಟಿಯಿಂದ ಮತ್ತು ಜನ್ಮ ಶನಿಯ ಕಾರಣ ಅಶುಭ ಫಲಗಳು ಹೆಚ್ಚು ಕಡಿಮೆ ಲಾಭ ಕಾರ್ಯ ಹಾನಿ ಬಂಧು ಮಿತ್ರ ವಿರೋಧ ಇದೆ ಮಾರುತಿ ಪೂಜೆ ಸಲ್ಲಿಸಿ ನಂತರ ಉತ್ತಮ ಫಲ ನಿರೀಕ್ಷೆ.
ಕುಂಭ ರಾಶಿ.
ಸಾಡೇಸಾತಿ ಶನಿ ಗ್ರಹವು ಮಾನಸಿಕ ಒತ್ತಡ ಹೇರಿ ನಿಮ್ಮನ್ನು ಪರೀಕ್ಷೆ ಮಾಡುತ್ತದೆ ನವೆಂಬರ್ ತಿಂಗಳ ವರೆಗು ಗುರುವು ಉತ್ತಮ ಫಲ ನೀಡಿ ರಕ್ಷಿಸುತ್ತಾನೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ಮೀನ ರಾಶಿ.
ಉತ್ತಮ ಫಲ ನಿರೀಕ್ಷೆ ಇದ್ದು ಅದರ ಸಂಪೂರ್ಣ ಲಾಭ ಪಡೆಯಲು ಪ್ರಯತ್ನ ಮಾಡಿ ಮಾನ ಸನ್ಮಾನ ಆರ್ಥಿಕ ಅಭಿವೃದ್ಧಿ ವಿವಾಹ ಭಾಗ್ಯ ಸಂತಾನ ಯೋಗ. ಶಾರ್ವರಿ ನಾಮ ಸಂವತ್ಸರದ ಆಯ ಮತ್ತು ವ್ಯಯ .
ಮೇಷ ರಾಶಿ ಮತ್ತು ವೃಷಭ 5/5.
ವೃಶ್ಚಿಕ ಮತ್ತು ತುಲಾ.14/11.
ಮಿಥುನ ಮತ್ತು ಕನ್ಯಾ.2/11.
ಕಟಕ ರಾಶಿ 2/2.
ಸಿಂಹ.14/02.
ಧನು ಮತ್ತು ಮೀನ ರಾಶಿ.8/11.
ಮಕರ ರಾಶಿ ಮತ್ತು ಕುಂಭ ರಾಶಿ.
11/08.
ಲೋಕಾ ಸಮಸ್ತ ಸುಕಿನೋಭವ್0ನ್ನತು .
H.G. ಹರ್ಷ . ವಾಸ್ತು ತಜ್ಞರು ಮತ್ತು ಜೋತ್ಯಿಷ್ಯ ಸಲಹೆಗಾರರು 9916187730.