Breaking News
Home / ಬೆಳಗಾವಿ / ಕಲ್ಲೋಳಿ ಬಸವೇಶ್ವರ ಸೌಹಾರ್ದ ಸಂಘಕ್ಕೆ ರೂ.4.15 ಕೋಟಿ ನಿವ್ವಳ ಲಾಭ- ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ

ಕಲ್ಲೋಳಿ ಬಸವೇಶ್ವರ ಸೌಹಾರ್ದ ಸಂಘಕ್ಕೆ ರೂ.4.15 ಕೋಟಿ ನಿವ್ವಳ ಲಾಭ- ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ

Spread the love

ಕಲ್ಲೋಳಿ ಬಸವೇಶ್ವರ ಸೌಹಾರ್ದ ಸಂಘಕ್ಕೆ ರೂ.4.15 ಕೋಟಿ ನಿವ್ವಳ ಲಾಭ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘವು ಪ್ರಸಕ್ತ ಮಾರ್ಚ ಕೊನೆಯಲ್ಲಿ ರೂ.4.15 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಹೇಳಿದರು.
ಸಂಘದ ಪ್ರಗತಿ ಬಗ್ಗೆ ಕರೆದಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸಂಘವು ರೂ. 98.57 ದುಡಿಯುವ ಬಂಡವಾಳ, ರೂ. 78.96 ಲಕ್ಷ ಶೇರು ಹಣ, ರೂ. 22.94 ಕೋಟಿ ನಿಧಿಗಳು, ರೂ. 74.85 ಕೋಟಿ ಠೇವುಗಳು ಹಾಗೂ ರೂ. 90.40 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲವನ್ನು ನೀಡಿದೆ ಎಂದರು.
ಸಂಘವು ಸ್ಥಾಪನೆಯಾದಾಗಿನಿಂದ ಕಳೆದ 34 ವರ್ಷಗಳಿಂದ ನೂರಕ್ಕೆ ನೂರರಷ್ಟು ಸಾಲ ವಸೂಲಾತಿ ಮಾಡಿರುವ ಮತ್ತು ಕಳೆದ 25 ವರ್ಷಗಳಿಂದ ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ವಿತರಿಸುತ್ತಿರುವ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಗ್ರಾಹಕರಿಗೆ ಆರ್‍ಟಿಜಿಎಸ್, ನೆಪ್ಟ್, ಇ-ಸ್ಟಾಂಪ, ಎಟಿಎಂ, ಸೇಪ್ ಲಾಕರ್ ಸೌಲಭ್ಯ ಕಲ್ಪಿಸಿದ್ದು, ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ರೂ. 5 ಸಾವಿರ ಮರಣೋತ್ತರ ನಿಧಿ ಕೊಡುವುದು ಮತ್ತು ಪ್ರತಿ ವರ್ಷ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶಿವರುದ್ರ ಬಿ.ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೋರೋಶಿ, ಮಲ್ಲಪ್ಪ ಖಾನಾಪುರ, ರಾಮಪ್ಪ ದಬಾಡಿ, ಹನಮಂತ ಪರಕನಟ್ಟಿ, ಸುಭಾಸ ಖಾನಾಪುರ, ಬಸಪ್ಪ ಹೆಬ್ಬಾಳ, ದುಂಡವ್ವ ಭೀಮಪ್ಪ ಕಡಾಡಿ, ಲಕ್ಷ್ಮೀಬಾಯಿ ಮ. ಕಂಕಣವಾಡಿ, ಪ್ರಕಾಶ ಕಲಾಲ, ಮೊಮ್ಮದಶಫಿ ಮೋಕಾಶಿ, ಕಲ್ಲೋಳೆಪ್ಪ ತೆಳಗಡೆ ಹಾಗೂ ಪ್ರಧಾನ ವ್ಯವಸ್ಥಾಪಕ ಹನಮಂತ ಖಾನಗೌಡ್ರ ಇದ್ದರು.


Spread the love

About inmudalgi

Check Also

ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ ಅಧ್ಯಕ್ಷರಾಗುವ ಮಾತೇ ಇಲ್ಲ – ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ: ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ