ಮೂಡಲಗಿ: ರಾಜ್ಯವು ಕೊರೊನಾ ಮಹಾಮಾರಿಯಿಂದ ತತ್ತರಿಸಿದ್ದು,ಸೇವೆಯೇ ಸಂಘಟನೆ ಅಡಿಯಲ್ಲಿ ಕೊರೊನಾ ಪೀಡಿತ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಲಾಕ್ ಡೌನ್ ಕೆಲಸದಿಂದ ವಂಚಿತ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ್ ಪಾಟೀಲ್ ಹೇಳಿದರು.
ಅವರು ರವಿವಾರದಂದು ಮೂಡಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಕೋವಿಡ್ ಸೊಂಕಿತ ಹಣ್ಣು ಹಂಪಲು ವಿತರಿಸಲು ಆಸ್ಪತ್ರೆಯ ಸಿಬ್ಬಂದಿಗೆ ಹಣ್ಣುಗಳನ್ನು ಹಸ್ತಾ0ತರಿಸುತ್ತ ಮಾತನಾಡಿ, ದೇಶದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ 7ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ಅರಭಾವಿ ಶಾಸಕರಾದ ಮಾನ್ಯ ಶ್ರೀ ಬಾಲಚಂದ್ರ ಜಾರಕಿಹೊಳಿ ಯವರ ಸಲಹೆ ಮೇರೆಗೆ ಕೊರೊನಾ ಪೀಡಿತ ರೋಗಿಗಳಿಗೆ ಹಾಗೂ ಲಾಕ್ ಡೌನ್ ನಿಂದಾಗಿ ಕೆಲಸದಿಂದ ವಂಚಿತ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.ಮೂಡಲಗಿಯ ಅಮನ್ ನಗರದಲ್ಲಿ ಕೆಲಸದಿಂದ ವಂಚಿತ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಕಾರ್ಯ ಜರಗಿತು ಎಂದರು.
ಈ ಸಂಧರ್ಭದಲ್ಲಿ ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷರಾದ ಮಹಾದೇವ ಶಕ್ಕಿ,ಅರಭಾವಿ ಮಂಡಲ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಖೇದಾರಿ ಭಸ್ಮೆ,ಅರಭಾವಿ ಮಂಡಲ ಕಾರ್ಯದರ್ಶಿ ಪಾಂಡುರಂಗ ಮಹೇಂದ್ರಕರ್,ಬಿಜೆಪಿ ಮುಖಂಡರಾದ ಕುಮಾರ್ ಗಿರಡ್ಡಿ,ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ,ಆನಂದ ಸಾನವಾಲೆ ಹಾಗೂ ಬಿಜೆಪಿ ಇನ್ನಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.