ಮೂಡಲಗಿ : ಸ್ಥಳೀಯ ತಹಶೀಲ್ದಾರ ಆಗಿ ಬೆಳಗಾವಿ ಲೋಕಸಭಾ ಉಪಚುನಾವಣೆ ನಿಮಿತ್ಯವಾಗಿ ನೇಮಕಗೊಂಡು ಚುನಾವಣೆ ಹಾಗೂ ಈ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಉತ್ತಮ ಸೇವೆಗೈದು ಇದೀಗ ಮತ್ತೇ ರಾಯಬಾಗಕ್ಕೆ ವರ್ಗಾವಣೆಗೊಂಡ ದಕ್ಷ ಮತ್ತು ಪ್ರಾಮಾಣಿಕ ಡಾ. ಮೋಹನಕುಮಾರ ಭಸ್ಮೆ ಅವರನ್ನು ಸೋಮವಾರದದು ಪತ್ರಕರ್ತರು ಸತ್ಕರಿಸಿ ಬೀಳ್ಕೊಟ್ಟರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಚುನಾವಣೆ ನಿಮಿತ್ಯ ನೇಮಕಗೊಂಡು ಚುನಾವಣೆ ಮುಗಿದ ಬಳಿಕ ವರ್ಗಾವಣೆ ಆಗುವುದು ಅನಿವಾರ್ಯ, ಜನರ ಮನೋಭಾವನೆಯನ್ನು ಅರಿತು ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿಯೂ ದೊರೆಯುವುದು. ಮೂಡಲಗಿಯ ಶಿವಬೋದರಂಗನ ಆರ್ಶಿವಾದ ಮತ್ತು ಜನರ ಬೆಂಬಲದಿಂದ ಉತ್ತಮ ಕಾರ್ಯನಿರ್ವಾಹಿಸಲೂ ಸಾಧ್ಯವಾಗಿದೆ ಎಂದರು.
ಹಿರಿಯ ಪತ್ರಕರ್ತ ಕೃಷ್ಣಾ ಗಿರಿನ್ನವರ ಮಾತನಾಡಿ, ತಹಶೀಲ್ದಾರ್ ಡಾ. ಮೋಹನಕುಮಾರ ಭಸ್ಮೆ ಅವರು ಸ್ವಲ್ಪ ಸಮಯದಲ್ಲೇ ಜನರರೊಂದಿಗೆ ಉತ್ತಮ ಬಂದ್ಯವನ್ನು ಹೊಂದಿ ಎಂತಹ ಕಠಿಣ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವ ಅಧಿಕಾರಿ, ಕಲ್ಲು ಕರಗಿಸುವ ಗುಣ ಹೊಂದಿರುವ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ ಹಾಗೂ ಈ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಮಲ್ಲು ಬೋಳನವರ, ಭೀಮಶಿ ತಳವಾರ, ಹಣಮಂತ ಕಂಕಣವಾಡಿ ಮತ್ತು ಅನೇಕರು ಉಪಸ್ಥಿತರಿದ್ದರೆ.
Home / Recent Posts / ಜನರ ಮನೋಭಾವನೆಯನ್ನು ಅರಿತು ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿಯೂ ದೊರೆಯುವುದು- ಡಾ. ಮೋಹನಕುಮಾರ ಭಸ್ಮೆ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …